#Exclusive Newsರಾಜಕೀಯರಾಜ್ಯಸುದ್ದಿ

 ‘ನಾನೇ ಪಕ್ಷವನ್ನು ಕಟ್ಟಿ ಅಧಿಕಾರಕ್ಕೆ ತರುತ್ತೇನೆ ; ಬಿ ವೈ ವಿಜಯೇಂದ್ರ

ಮೈಸೂರು: ರಾಜ್ಯ ಬಿಜೆಪಿಯಲ್ಲಿ ಸದ್ಯ ಯಾವುದೇ ಬದಲಾವಣೆಗಳಿಲ್ಲ. ‘ನಾನೇ ಪಕ್ಷವನ್ನು ಕಟ್ಟಿ ಅಧಿಕಾರಕ್ಕೆ ತರುತ್ತೇನೆ, ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ.

ಮೈಸೂರಿನಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಕ್ಷದ ಎಲ್ಲ ಗೊಂದಲಗಳು ಬೇಗನೆ ಬಗೆಹರಿಯುತ್ತವೆ. ಭಿನ್ನಮತೀಯರ ಮಾತುಗಳೂ ನಿಲ್ಲುತ್ತವೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯಶಸ್ವಿಯಾಗಿ ಅಧ್ಯಕ್ಷ ಸ್ಥಾನವನ್ನು ಒಂದು ವರ್ಷ ನಿಭಾಯಿಸಿರುವೆ. ಮುಂದೆಯೂ ಶ್ರಮ ವಹಿಸುವೆ’ ಎಂದರು.

ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆಗಳ ಬಗ್ಗೆ ಕೇಳಿದಾಗ, ಪಕ್ಷದ ಹಿರಿಯ ನಾಯಕರು ಪಕ್ಷವನ್ನು ಮೂಲದಿಂದ ಕಟ್ಟಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೇಲೆ ದಾಳಿ ಮಾಡುವಾಗ ಅಥವಾ ಟೀಕಿಸುವಾಗ ಜಾಗರೂಕರಾಗಿರಬೇಕು, ಅಂತಹ ಹೇಳಿಕೆಗಳು ಪಕ್ಷದ ಕಾರ್ಯಕರ್ತರಿಗೆ ನೋವುಂಟು ಮಾಡಬಹುದು ಎಂದು ಹೇಳಿದರು.

 

 

 

Comments (0)

Your email address will not be published. Required fields are marked *

Back to top button