#Exclusive NewsTop Newsಮನರಂಜನೆಸಿನಿಮಾಸುದ್ದಿ

‘ನನಗೆ ಎರಡನೇ ಮಗು ಬೇಕು’ ; ಧನರಾಜ್ ಆಚಾರ್ಯ

ಬಿಗ್ ಬಾಸ್ ಮನೆಯಲ್ಲಿ ಈ ವಾರ ಎಲ್ಲರೂ ಜಾಲಿ ಮೂಡ್​ನಲ್ಲಿ ಇದ್ದಾರೆ. ಏಕೆಂದರೆ ಇದು ಫ್ಯಾಮಿಲಿ ವೀಕ್. ಜನವರಿ 2ರ ಎಪಿಸೋಡ್​ನಲ್ಲಿ ಧನರಾಜ್ ಅವರ ಕುಟುಂಬ ದೊಡ್ಮನೆಗೆ ಬಂದಿದೆ. ಅಷ್ಟೇ ಅಲ್ಲ, ಅಲ್ಲಿ ಸಾಕಷ್ಟು ಫನ್ ಆ್ಯಕ್ಟಿವಿಟಿ ನಡೆದಿದೆ. ಈ ವೇಳೆ ಧನರಾಜ್ ಅವರು ಪತ್ನಿ ಬಳಿ ಎರಡನೇ ಮಗುವನ್ನು ಹೊಂದುವ ಬಗ್ಗೆ ಚರ್ಚೆ ನಡೆಸಿದ್ದಾರೆ.

ಧನರಾಜ್ ಅವರ ಪತ್ನಿಯ ಹೆಸರು ಪ್ರಜ್ಞಾ ಆಚಾರ್ಯ. ಅವರು ಕೂಡ ಪತಿಯ ಜೊತೆ ಸೇರಿ ವಿಡಿಯೋ ಕಂಟೆಂಟ್​ಗಳನ್ನು ಮಾಡುತ್ತಾ ಇರುತ್ತಾರೆ. ಅವರಿಗೆ ಇನ್​ಸ್ಟಾಗ್ರಾಮ್​ನಲ್ಲಿ ಬರೋಬ್ಬರಿ ಒಂದೂವರೆ ಲಕ್ಷ ಜನ ಹಿಂಬಾಲಕರು ಇದ್ದಾರೆ. ಈಗ ಅವರು ಬಿಗ್ ಬಾಸ್ ಮನೆ ಒಳಗೆ ಬಂದಿದ್ದಾರೆ. ಪತ್ನಿ ಬಳಿ ಅವರು ನೇರ ಮಾತುಗಳಲ್ಲಿ ಎಲ್ಲವನ್ನೂ ಹೇಳಿಕೊಂಡಿದ್ದಾರೆ.

‘ನನಗೆ ಎರಡನೇ ಮಗು ಬೇಕು’ ಎಂದಾಗ ಪ್ರಜ್ಞಾ ಅವರು ‘ಎಂತ ಮರಾಯಾ ನೀನು’ ಎಂದು ನಾಚಿ ನೀರಾದರು. ಆಗ ಧನರಾಜ್, ‘ನೀನು ರೆಡಿ ಇಲ್ವ? ಬೇಡವಾ’ ಎಂದು ಕೇಳಿದರು. ‘ಈಗ ಮಾತನಾಡೋದು ಬೇಡ, ಇದನ್ನೆಲ್ಲ ಮನೆಗೆ ಬಂದು ಮಾತಾಡಬೇಕಲ್ವ’ ಎಂದರು ಪ್ರಜ್ಞಾ. ಆ ಬಳಿಕ ಧನರಾಜ್ ಅವರು ಸೈಲೆಂಟ್ ಆದರು. ಇತ್ತೀಚೆಗೆ ಜನಿಸಿದ ಮಗುವನ್ನು ಎತ್ತಾಡಿ ಧನರಾಜ್ ಖುಷಿಪಟ್ಟರು.

Comments (0)

Your email address will not be published. Required fields are marked *

Back to top button