ದೆಹಲಿ: ಕೊಟ್ಟ ಮಾತು ಉಳಿಸಿಕೊಳ್ಬೇಕು ಅಂತಾ ನಾನು ಹೇಳಿದ್ದು ಬೇರೆ. ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ಮಾಜಿ ಸಂಸದ ಡಿ.ಕೆ ಸುರೇಶ್ ಹೇಳಿದ್ದಾರೆ.ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಕೊಟ್ಟ ಮಾತು ಉಳಿಸಿಕೊಳ್ಳಬೇಕು ಅಂತಾ ಹೇಳಿದ್ದು ಬೇರೆ.
ಮಾಧ್ಯಮಗಳು ತೋರಿಸಿದ್ದು ಬೇರೆ. ನಾನು ಆ ರೀತಿ ಹೇಳಿಲ್ಲ.ನನ್ನ ಹೇಳಿಕೆ ತಿರುಚಲಾಗಿದೆ ಎಂದರು. ಸಿಎಂ ಸಿದ್ದರಾಮಯ್ಯ ಡಿಸಿಎಂ ಸಭೆ ನಡೆಸಿ ಹೇಳಿದ ಬಳಿಕ ನಾನು ಹೇಳುವುದು ಏನು ಇಲ್ಲ. ಒಟ್ಟಾಗಿ ಉಪಾಹಾರಕ್ಕೆ ಸೇರಿ, ಒಗ್ಗಟ್ಟಾಗಿದ್ದೇವೆ ಅಂತಾ ಹೇಳೋದು ಅವರ ಕರ್ತವ್ಯ. ರಾಜ್ಯದ ಜನರಿಗೆ ಮಾತು ಕೊಟ್ಟಿದ್ದಾರೆ, ಅದರಂತೆ ಸಿಎಂ, ಡಿಸಿಎಂ ನಡೆದುಕೊಳ್ತಾರೆ. ಈ ಬಾರಿ ಇಬ್ಬರು ನಾಯಕರು ಮಾತಾಡಿದ್ದಾರೆ.
ಈ ಬಗ್ಗೆ ನಾನು ಮಾತಾಡೋದು ಸರಿ ಅಲ್ಲ ಅಂತಾ ಡಿ.ಕೆ ಸುರೇಶ್ ಅವರು ಹೇಳಿದ್ಧಾರೆ..
ಇನ್ನು ದೆಹಲಿಗೆ ನಾನು ಖಾಸಗಿ ಕಾರ್ಯಕ್ರಮಕ್ಕೆ ಬಂದಿದ್ದೇನೆ,ಹೈಕಮಾಂಡ್ ನಾಯಕರು ಸಿಕ್ಕರೆ ಭೇಟಿಯಾಗುವೆ.
ಶನಿವಾರ, ಭಾನುವಾರ ಆಗಿರುವ ಕಾರಣ ಭೇಟಿ ಅನುಮಾನ.ವರಿಷ್ಠರು ಸಮಯ ಕೊಟ್ಟರೆ ಭೇಟಿಯಾಗುತ್ತೇನೆ ಎಂದ ಡಿಕೆ ಸುರೇಶ್.


