ಲಿಂಗಾಯತ ಹೋರಾಟ ನಿರತರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು ಶೂನ್ಯ ವೇಳೆಯಲ್ಲಿ ಚರ್ಚೆಗೆ ಪಟ್ಟು ಹಿಡಿದ ಶೈಲಿಗೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಸಿಟ್ಟಾದ ಪ್ರಸಂಗ ನಡೆಯಿತು. ಗುರುವಾರ ಭೋಜನ ವಿರಾಮದ ಬಳಿಕ ಸದನ ಬಾವಿಗೆ ಇಳಿದು ಚರ್ಚೆಗೆ ಪಟ್ಟು ಹಿಡಿದ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರ ನಡೆಗೆ ಸಿಟ್ಟಾದ ಸಭಾಪತಿ ಬಸವರಾಜ ಹೊರಟ್ಟಿ, ಮೇಲ್ಮನೆ ಏನು ಧರ್ಮ ಶಾಲೆನಾ? ಒಬ್ಬೊಬ್ಬರು ಮಾತನಾ ಡದೆ ಎಲ್ಲರೂ ಒಟ್ಟಿಗೆ ಮಾತನಾಡಿದರೆ ಸದನವನ್ನು ಹೇಗೆ ನಡೆಸಬೇಕು ಎಂದು ಪ್ರತಿಭಟನಾನಿರತ ಪ್ರತಿಪಕ್ಷಗಳ ಸದಸ್ಯರನ್ನು ಪ್ರಶ್ನಿಸಿದರು. ನೀವು ಆಡಳಿತ ಪಕ್ಷದವರಿಗೆ ಮಾತ್ರ ಮಾತನಾಡಲು ಅವಕಾಶ ನೀಡುತ್ತೀರಿ. ನಮಗೆ ಏಕೆ ನೀಡುವುದಿಲ್ಲ ಎಂದು ಹೇಳಿದ ವಿರೋಧ ಪಕ್ಷಗಳ ಸದಸ್ಯರ ಮಾತಿನಿಂದ ಮತ್ತಷ್ಟು ಕೆರಳಿದ ಹೊರಟ್ಟಿ, ಬೇಡ ಅಂದರೆ ಕುರ್ಚಿ ಖಾಲಿ ಮಾಡಿ ಹೋಗು ತ್ತೇನೆ. ಶೂನ್ಯ ವೇಳೆಯಲ್ಲಿ ಚರ್ಚೆ ಮಾಡಲು ನಿಯಮದಲ್ಲಿ ಅವ ಕಾಶ ಇದೆಯಾ. ಏನ್ ಮಾತಾ ಡ್ತೀರಿ. ಸದನದ ನಿಯಮ ನಿಮಗೆ ಗೊತ್ತಿದೆಯಾ ಎಂದು ಖಾರವಾಗಿಯೇ ಪ್ರಶ್ನಿಸಿದರು. ನನ್ನ ರಾಜಕೀಯ ಜೀವನದಲ್ಲಿ 18 ಜನ ಮುಖ್ಯಮಂ ತ್ರಿಗಳನ್ನು ನೋಡಿದ್ದೇನೆ. ಈಸದನವನ್ನು ಹೇಗೆನಡೆಸಬೇಕು ಎಂಬುದು ನನಗೆ ಗೊತ್ತಿದೆ. ಈಗಾಗಲೇ ಎಂಟು ಮಂದಿ ಲಾಠಿಚಾರ್ಜ್ ಬಗ್ಗೆ ಚರ್ಚೆಗೆ ಅವಕಾಶ ಕೋರಿದ್ದಾರೆ. ಶುಕ್ರ ವಾರ ಅವಕಾಶ ನೀಡುವುದಾಗಿ ಹೇಳಿದ್ದೇನೆ. ಆದರೂ ಹಠ ಸಾಧಿಸುತ್ತಿದ್ದೀರಲ್ಲ ಎಂದು ಜೆಡಿಎಸ್ ಸದಸ್ಯ ಭೋಜೇಗೌಡ ವಿರುದ್ಧ ಕಿಡಿಕಾರಿದರು. ಮುಂದುವರೆದು ಈ ವಿಚಾರವಾಗಿ ನನ್ನ ಅಧಿಕಾರ ದುರುಪಯೋಗ ಮಾಡಿಕೊಂಡು ಮಾತನಾಡಲು ಅವಕಾಶ ಕೊಟ್ಟಿದ್ದೇನೆ ಎಂದರು. ಬಿಜೆಪಿ ಸದಸ್ಯ ಶಶಿಲ್ ನಮೋಶಿ, ಬೆಳಗಾವಿಯಲ್ಲಿ 2 ಎ ಮೀಸಲಾತಿಗಾಗಿ ಹೋರಾಟಗಾರರ ಮೇಲೆ ಸರ್ಕಾರ ಲಾಠಿ ಪ್ರಹಾರ ಮಾಡಿದೆ. ತುರ್ತು ಪರಿಸ್ಥಿತಿಯ ವಾತಾವರಣ ನಿರ್ಮಾಣ ಮಾಡಿದೆ ಎಂದು ಆರೋಪಿಸಿದರು. ಇದಕ್ಕೆ ಮಧ್ಯ ಪ್ರವೇಶ ಮಾಡಿದ ಕಾಂಗ್ರೆಸ್ ಬಿ.ಕೆ.ಹರಿಪ್ರಸಾದ್, ಈ ವಿಚಾರದಲ್ಲಿ ಕಾಂಗ್ರೆಸ್ ಚರ್ಚೆಗೆ ಸಿದ್ದವಿದೆ. ಆದರೆ ಶೂನ್ಯ ವೇಳೆಯಲ್ಲಿ ಚರ್ಚೆಗೆ ಅವಕಾಶ ನೀಡಲು ಬರುವುದಿಲ್ಲ. ವಿರೋಧ ಪಕ್ಷದವರು ಯಾವ ನಿಯಮದಲ್ಲಿ ಚರ್ಚೆಗೆ ಅವಕಾಶ ಕೇಳುತ್ತಿದ್ದಾರೆ ಎಂಬುವುದನ್ನು ಸದನಕ್ಕೆ ಹೇಳಲಿ, ತುರ್ತು ಪರಿಸ್ಥಿತಿ ಎಂಬ ಪದವನ್ನು ಕಡತದಿಂದ ತೆಗೆಯಬೇಕು ಎಂದು ಮನವಿ ಮಾಡಿದರು


