ನಾನು ರಾಹುಲ್ ಗಾಂಧಿಯ ಅಭಿಮಾನಿ.. ರಾಹುಲ್ ಗಾಂಧಿಯನ್ನು ನೋಡಬೇಕು.. ಭೇಟಿ ಮಾಡಬೇಕು ಎಂಬ ಆಸೆಯಿದೆ. ಭಾರತ್ ಜೋಡೋ ಯಾತ್ರೆಯಿಂದ ನಾನು ಪ್ರೇರಿತನಾಗಿದ್ದೇನೆ. ನನಗೆ ಫಿಟ್ನೆಸ್ ಎಂದರೇ ತುಂಬಾ ಇಷ್ಟ.. ದೇಶದ ಸಲುವಾಗಿ ರಾಹುಲ್ ಗಾಂಧಿ ಹೆಜ್ಜೆ ಹಾಕುತ್ತಿದ್ದಾರೆ..
ಹೀಗಂತ ಹೇಳಿದ್ದು ಸ್ಯಾಂಡಲ್ವುಡ್ ನ ಸೂಪರ್ ಸ್ಟಾರ್ ನಟ ಶಿವರಾಜ್ ಕುಮಾರ್..
ಶಿವಮೊಗ್ಗದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನಟ ಶಿವಣ್ಣ(Shivarajkumar), ರಾಹುಲ್ ಗಾಂಧಿ(Rahul Gandhi)ಯ ಕಾರ್ಯವೈಖರಿ, ದೇಶದೆಡೆಗೆ ಇರುವ ಅವರ ಬದ್ಧತೆಯನ್ನು ಹೊಗಳಿದರು. ರಾಹುಲ್ ಗಾಂಧಿಯ ಅಭಿಮಾನಿ ನಾನಾಗಿದ್ದೇನೆ ಎಂದು ತಿಳಿಸಿದ್ರು.
📌#FLASHBACK: IT'S A WORTH TO REMEMBER THAT the #SuperStar of the #SandalwoodIndustry said Openly on record to the People of Karnataka that
[1] I'm the fan of #RahulGandhi
[2] I Was Inspired by his #BharatJodoYatra
[3] Rahul Walked for Country's Purpose.#ShimogaLoksabha2024 pic.twitter.com/sz0rffZ9ZU— Gururaj Anjan (@Anjan94150697) March 2, 2024
ಶಿವರಾಜ್ ಕುಮಾರ್ ಅವರ ಈ ಹೇಳಿಕೆಯ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಈಗ ಸಖತ್ ವೈರಲ್ ಆಗಿದೆ.
ಅಂದ ಹಾಗೆ, ಶಿವಮೊಗ್ಗ (Shimoga)ಲೋಕಸಭೆ ಕ್ಷೇತ್ರದಿಂದ ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ (Geeta Shivarajkumar)ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಲು ಬಯಸುತ್ತಿದ್ದಾರೆ.