ಬ್ರಿಟನ್‌ನ ಸಾರ್ವತ್ರಿಕ ಚುನಾವಣೆಯಲ್ಲಿ ಹಾಲಿ ಪ್ರಧಾನಿ ರಿಷಿ ಸುನಕ್ ಸೋಲೊಪ್ಪಿಕೊಂಡಿದ್ದಾರೆ. ವಿರೋಧ ಪಕ್ಷ ಲೇಬರ್ ಪಾರ್ಟಿ 300ಕ್ಕೂ ಅಧಿಕ ಸ್ಥಾನ ಗಳಿಸಿದ್ದರೆ ರಿಷಿ ಸುನಕ್ ಅವರ ಕನ್ಸರ್ವೇಟಿವ್ ಪಕ್ಷ 61 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಭಾರತ ಮೂಲದ ಬ್ರಿಟನ್ ಪ್ರಧಾನಿ ರಿಷಿ ಸುನಕ್ಗೆ ಹೀನಾಯ ಸೋಲಾಗುವ ಸಾಧ್ಯತೆ ಇದೆ ಎಂದು ಮತಗಟ್ಟೆ ಸಮೀಕ್ಷೆಗಳು ಹೇಳಿವೆ.
ಬ್ರಿಟನ್ ಪ್ರಧಾನಿಯಾಗಲು ಸಜ್ಜಾಗಿರುವ ಲೇಬರ್ ಪಕ್ಷದ ಸ್ಟಾರ್ಮರ್, ಈ ಚುನಾವಣೆಯಲ್ಲಿ ಲೇಬರ್ ಪಕ್ಷಕ್ಕಾಗಿ ಪ್ರಚಾರ ಮಾಡಿದ ಪ್ರತಿಯೊಬ್ಬರಿಗೂ ನಮಗೆ ಮತ ಚಲಾಯಿಸಿದ ಮತ್ತು ನಮ್ಮ ಪಕ್ಷದ ಬಗ್ಗೆ ನಂಬಿಕೆ ಇಟ್ಟ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದು ಹೇಳಿದ್ದಾರೆ.
ಕೀರ್ ಸ್ಟಾರ್ಮರ್ ಬ್ರಿಟನ್‌ನ ಮುಂದಿನ ಪ್ರಧಾನಿಯಾಗಲಿದ್ದಾರೆ ಎಂದು ಎಕ್ಸಿಟ್ ಪೋಲ್‌ನಲ್ಲಿ ಬಹಿರಂಗವಾಗಿತ್ತು. ಅವರ ಲೇಬರ್ ಪಕ್ಷವು ಸಂಸತ್ತಿನ ಚುನಾವಣೆಯಲ್ಲಿ ಭಾರಿ ಬಹುಮತದೊಂದಿಗೆ ಗೆಲ್ಲುತ್ತದೆ ಎಂದು ಹೇಳಲಾಗಿತ್ತು. 650 ಸ್ಥಾನಗಳ ಸಂಸತ್ತಿನಲ್ಲಿ ಲೇಬರ್ ಪಕ್ಷ 410 ಸ್ಥಾನಗಳನ್ನು ಗೆಲ್ಲಲಿದೆ ಎಂದು ಎಕ್ಸಿಟ್ ಪೋಲ್‌ಗಳು ತೋರಿಸಿದ್ದು, ಈ ಕಾರಣದಿಂದಾಗಿ 14 ವರ್ಷಗಳ ಕನ್ಸರ್ವೇಟಿವ್ ನೇತೃತ್ವದ ಸರ್ಕಾರ ಈ ಬಾರಿ ಪತನವಾಗಲಿದೆ.
ಇಲ್ಲಿಯವರೆಗಿನ ಎಣಿಕೆಯಿಂದ ಇದು ಒಂದೇ ಆಗಿರುವಂತಿದೆ. ಸುನಕ್ ಅವರ ಪಕ್ಷವು ಕೇವಲ 131 ಸ್ಥಾನಗಳನ್ನು ಪಡೆಯುತ್ತದೆ ಎಂದು ಅಂದಾಜಿಸಲಾಗಿದೆ, ಆದರೆ ಮೊದಲು ಕನ್ಸರ್ವೇಟಿವ್ ಪಕ್ಷವು 346 ಸ್ಥಾನಗಳನ್ನು ಪಡೆದಿತ್ತು. ಈ ಸ್ಥಿತಿಗೆ ಪಕ್ಷದೊಳಗಿನ ಜಗಳವೇ ಕಾರಣ ಎನ್ನಲಾಗುತ್ತಿದೆ.
ಗುರುವಾರ ನಡೆದ ಮತದಾನದಲ್ಲಿ ಸ್ಥಳೀಯ ಮತಗಟ್ಟೆಗೆ ರಿಷಿ ಸುನಕ್ ದಂಪತಿ ಕೈಕೈ ಹಿಡಿದು ಆಗಮಿಸಿದ್ದರು. ಇಂದು ಮತ ಎಣಿಕೆ ನಡೆಯುತ್ತಿದೆ.
ಲೇಬರ್ ಮತ್ತು ಕನ್ಸರ್ವೇಟಿವ್ ಪಕ್ಷಗಳ ಜತೆಗೆ ಲಿಬರಲ್ ಡೆಮಾಕ್ರಟ್ಸ್, ಗ್ರೀನ್ ಪಾರ್ಟಿ, ಸ್ಕಾಟಿಷ್ ನ್ಯಾಷನಲ್ ಪಾರ್ಟಿ, ಎಸ್ಡಿಎಲ್ಪಿ, ಡೆಮಾಕ್ರೆಟಿಕ್ ಯೂನಿಯನಿಸ್ಟ್ ಪಾರ್ಟಿ, ಸಿನ್ ಫಿಯೆನ್, ಫ್ಲೈಡ್ ಸಿಮ್ರು, ವರ್ಕರ್ಸ್ ಪಾರ್ಟಿಗಳ ಅಭ್ಯರ್ಥಿಗಳು ಕಣದಲ್ಲಿದ್ದರು.
ಇಂಗ್ಲೆಂಡ್, ಸ್ಕಾಟ್ಲೆಂಡ್, ವೇಲ್ಸ್ ಮತ್ತು ಉತ್ತರ ಐರ್ಲೆಂಡ್ನ 650 ಕ್ಷೇತ್ರಗಳಿಗೆ ಮತದಾನ ನಡೆಯಿತು. ಯಾವುದೇ ಪಕ್ಷ ಅಧಿಕಾರಕ್ಕೆ ಬರಲು 326 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕಿದೆ.
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com