ನಾನು ಡಿ ಕೆ ಸುರೇಶ್ ಹೆಂಡತಿ ಎಂದು ಹೇಳಿದ್ದ ಮಹಿಳೆ ಮೇಲೆ ಎಫ್ಐಆರ್ ದಾಖಲಾಗಿದೆ. ಮಾಜಿ ಸಂಸದ ಡಿ ಕೆ ಸುರೇಶ್ ಅವರ ವಕೀಲ ಪ್ರದೀಪ್ ಕೊಟ್ಟ ದೂರಿನ ಮೇರೆಗೆ ರಾಮನಗರದ ಸೈಬರ್ ಅಪರಾಧಗಳ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಪವಿತ್ರಾ ಎಂಬ ಮಹಿಳೆ ಪವಿತ್ರಾಡಿಕೆಸುರೇಶ್ ಎಂಬ ಹೆಸರಿನ ಫೇಸ್ಬುಕ್ ಖಾತೆಯಲ್ಲಿ ತನ್ನನ್ನು ಡಿ ಕೆ ಸುರೇಶ್ ಪತ್ನಿ ಎಂದು ಹೇಳಿಕೊಂಡು ವೀಡಿಯೋಗಳನ್ನು ಹಾಕುತ್ತಿದ್ದರು.
ನಾನು ಡಿಕೆ ಸುರೇಶ್ ಪತ್ನಿ. ನಾನು ಡಿ ಕೆ ಸುರೇಶ್ ಹೆಂಡ್ತಿಯಾಗಿ ಹೇಳ್ಬೇಕಾದ್ರೆ ನಾನು ಫಸ್ಟ್ ಡಿ ಕೆ ಸುರೇಶ್ ಅವರಿಗೆ ಅಭಿಮಾನಿ. 3 ಬಾರಿ ಸಂಸದರಾಗಿ ಮಾಡಿರುವ ಕೆಲಸ ಯಾರೂ ಮಾಡಕ್ಕಾಗಲ್ಲ
ಡಿ ಕೆ ಸುರೇಶ್ ಮಾಡಿರುವ ಕೆಲಸವನ್ನು ಯುವಕರೂ ಮಾಡಕ್ಕಾಗಲ್ಲ. ಡಿಕೆ ಸುರೇಶ್ ವೆರಿ ಹ್ಯಾಪಿ, ಆಕ್ಟೀವ್, ಇಂಟೆಲಿಜೆಂಟ್, ಶ್ರಮಜೀವಿ. ಎಲ್ಲರೂ ಬಂದು ಕೋಟಿಗಟ್ಟಲೇ ದುಡ್ಡು ಮಾಡ್ಕೊಂಡು ಹೋಗ್ತಾರೆ
ಆದರೆ ಡಿಕೆ ಸುರೇಶ್ ಕೆಲಸ ಮಾಡಿದ್ದಾರೆ. ಡಿಕೆ ಸುರೇಶ್ ಮಾಡಿರುವ ಕೆಲಸವನ್ನು ಕರ್ನಾಟಕದ ಯಾವ ರಾಜಕಾರಣಿಯೂ ಮಾಡಿಲ್ಲ. ನನ್ನನ್ನು ಎಲ್ಲರೂ ಪವಿತ್ರಾಡಿಕೆಸುರೇಶ್ ಅಂತಾನೇ ಕರೀತಾರೆ ಎಂದು
ಫೇಸ್ಬುಕ್ ವೀಡಿಯೋದಲ್ಲಿ ಮಹಿಳೆ ಹೇಳಿಕೊಂಡಿದ್ದರು.
ಈಕೆಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ 5 ಸೆಕ್ಷನ್ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ. ಕಲಂ 237 – ಉದ್ದೇಶಪೂರ್ವಕವಾಗಿ ಸುಳ್ಳು ಹೇಳುವುದು, ಕಲಂ 319 – ಮತ್ತೊಬ್ಬರಂತೆ ನಟಿಸಿ ಮೋಸ ಮಾಡುವುದು, ಕಲಂ 336 – ವಂಚನೆ ಉದ್ದೇಶಕ್ಕಾಗಿ ನಕಲಿ ದಾಖಲೆ ಸೃಷ್ಟಿ, ಕಲಂ 353 – ಸಾರ್ವಜನಿಕ ಕಿಡಿಗೇಡಿತನದ ಹೇಳಿಕೆ ಆರೋಪದಡಿ ಎಫ್ಐಆರ್ ದಾಖಲಾಗಿದೆ.