Wednesday, April 30, 2025
30.3 C
Bengaluru
LIVE
ಮನೆ#Exclusive NewsAcress Vijayalakshmi: ಇದೇ ಕೊನೆ ವಿಡಿಯೋ.. ಆತ್ಮಹತ್ಯೆ ಮಾಡಿಕೊಳ್ತಿರುವೆ..; ಆತಂಕ ಮೂಡಿಸಿದ ನಟಿ ವೀಡಿಯೋ

Acress Vijayalakshmi: ಇದೇ ಕೊನೆ ವಿಡಿಯೋ.. ಆತ್ಮಹತ್ಯೆ ಮಾಡಿಕೊಳ್ತಿರುವೆ..; ಆತಂಕ ಮೂಡಿಸಿದ ನಟಿ ವೀಡಿಯೋ

ಇದೇ ನನ್ನ ಕೊನೆಯ ವೀಡಿಯೋ.. ಸಿಮಾನ್ ಕಾರಣ ನಾನು ಆತ್ಮಹತ್ಯೆ ಮಾಡಿಕೊಳ್ತಿರುವೆ ಎಂದು ನಟಿ ವಿಜಯಲಕ್ಷ್ಮಿ ರಹಸ್ಯ ಸ್ಥಳದಿಂದ ವಿಡಿಯೋ ಮಾಡಿರೋದು ಆತಂಕಕ್ಕೆ ಕಾರಣವಾಗಿದೆ.

ವಿಜಯಲಲಕ್ಷ್ಮಿ ಮಂಗಳವಾರ ಬಿಡುಗಡೆ ಮಾಡಿದ ವಿಡಿಯೋದಲ್ಲಿ,

ಮೀಡಿಯಾ ಮಿತ್ರರಿಗೆ ನಮಸ್ಕಾರ.. ಫೆಬ್ರವರಿ 29ರಂದು ಒಂದು ವಿಡಿಯೋ ಬಿಡುಗಡೆ ಮಾಡಿದ್ದೆ.. ನಾಮ್ ತಮಿಳರ್ ಕಟ್ಚಿ ಸಂಚಾಲಕ ಸಿಮಾನ್ ನನ್ನೊಂದಿಗೆ ಮಾತನಾಡಬೇಕು.. ನನ್ನೊಂದಿಗೆ ಜೀವನ ನಡೆಸಬೇಕು ಎಂದು ಕೋರಿದ್ದೆ.. ಈಗ ಮಾರ್ಚ್ 5ರ ದಿನಾಂಕ ಮುಗಿದಿದೆ..

ನಾನು ತುಂಬಾ ನೋವಲ್ಲಿ ಆ ವೀಡಿಯೋ ಕಳಿಸಿದ್ದೆ.. ಆತ್ಮಹತ್ಯೆ ಮಾಡಿಕೊಳ್ತೀನಿ ಎಂದು ಹೇಳಿದೆ. ನನ್ನನ್ನು ಮದುವೆಯಾಗುವುದಾಗಿ ನಂಬಿಸಿ ನನ್ನೊಂದಿಗೆ ಮೂರು ವರ್ಷ ರಹಸ್ಯ ಜೀವನ ಸಾಗಿಸಿದರು. ನನ್ನ ಜೀವನ ನಾಶ ಮಾಡಿದರು. ನನ್ನನ್ನು ನಡು ರಸ್ತೆಯಲ್ಲಿ ಬಿಟ್ಟರು.

ಈಗ ನನಗೆ ಯಾರೂ ಸಹಕರಿಸ್ತಿಲ್ಲ. ಯಾರೇ ಸಹಕರಿಸಲು ನೋಡಿದರೂ ಅವರನ್ನು ಓಡಿಸುತ್ತಿದ್ದಾರೆ. ಈಗ ಕರ್ನಾಟಕದಲ್ಲಿ ಜೀವಿಸಲಾಗದ ಪರಿಸ್ಥಿತಿಯಲ್ಲಿ ಇರುವೆ. ಇದು ನನ್ನ ಕೊನೆಯ ವೀಡಿಯೋ.. ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವೆ..

ಕರ್ನಾಟಕ ಪೊಲೀಸರು ಮುಂದಿನ ವಿಚಾರ ತಿಳಿಸಲಿದ್ದಾರೆ. ನನ್ನ ಸಾವಿಗೆ ಸಿಮಾನ್ ವಿವರಣೆ ನೀಡಬೇಕಾಗುತ್ತದೆ.

ಎಂದು ನಟಿ ವಿಜಯಲಕ್ಷ್ಮಿ ವಿಡಿಯೋ ಮಾಡಿದ್ದಾರೆ. ಇದು ಆತಂಕಕ್ಕೆ ಕಾರಣವಾಗಿದೆ.ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಸಮಸ್ಯೆ ಮಾಡಿಕೊಂಡಿರುವ ನಾಗಮಂಡಲ ಖ್ಯಾತಿಯ ನಟಿ ವಿಜಯಲಕ್ಷ್ಮಿ ಅದರಿಂದ ಹೊರಬರಲಾಗದೇ ಒದ್ದಾಡುತ್ತಿದ್ದಾರೆ

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments