ಸಿನಿಮಾಸುದ್ದಿ

ಪುತ್ತೂರಿನಲ್ಲಿ ಹೈಡ್ರಾಮಾ; ‘ದಿ ಕೇರಳ ಸ್ಟೋರಿ 2’ ನೋಡಲು ಹೋದ ವಿದ್ಯಾರ್ಥಿನಿಯರಿಗೆ ಬೆದರಿಕೆ?

ದಕ್ಷಿಣ ಕನ್ನಡ: ಪುತ್ತೂರಿನಲ್ಲಿ ಈಗ ‘ದಿ ಕೇರಳ ಸ್ಟೋರಿ 2’ ಸಿನಿಮಾ ದೊಡ್ಡ ಮಟ್ಟದ ಚರ್ಚೆಗೆ ಹಾಗೂ ವಿವಾದಕ್ಕೆ ಕಾರಣವಾಗಿದೆ. ಬಿಡುಗಡೆಗೂ ಮುನ್ನವೇ ಸಾಕಷ್ಟು ಸಂಚಲನ ಮೂಡಿಸಿದ್ದ ಈ ಚಿತ್ರವನ್ನು, ಲವ್ ಜಿಹಾದ್ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಪುತ್ತೂರಿನಲ್ಲಿ ವಿದ್ಯಾರ್ಥಿನಿಯರಿಗಾಗಿ ಉಚಿತ ಪ್ರದರ್ಶನ ಆಯೋಜಿಸಲಾಗಿತ್ತು. ನೂರಾರು ಯುವತಿಯರು ಈ ಚಿತ್ರವನ್ನು ವೀಕ್ಷಿಸಲು ಆಗಮಿಸುತ್ತಿದ್ದಾರೆ. ಆದರೆ, ಈ ಸಿನಿಮಾ ನೋಡಲು ಹೋದ ಕೆಲವು ಯುವತಿಯರಿಗೆ ಅಪರಿಚಿತರಿಂದ ಬೆದರಿಕೆ ಕರೆಗಳು ಬಂದಿವೆ ಎಂಬ ಗಂಭೀರ ಆರೋಪವನ್ನು ಆಯೋಜಕರು ಮಾಡಿದ್ದಾರೆ.

ಸಿನಿಮಾ ಪ್ರದರ್ಶನಕ್ಕೆ ಅಡ್ಡಿಪಡಿಸುವ ಉದ್ದೇಶದಿಂದ ಇಂತಹ ಬೆದರಿಕೆಗಳನ್ನು ಹಾಕಲಾಗುತ್ತಿದೆ ಎಂದು ದೂರಲಾಗಿದ್ದು, ಈ ವಿಚಾರ ಪುತ್ತೂರಿನಲ್ಲಿ ತೀವ್ರ ಉದ್ವಿಗ್ನತೆಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತಾದ ವೀಡಿಯೋಗಳು ಈಗ ವೈರಲ್ ಆಗುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ. ಜಾಗೃತಿ ಮೂಡಿಸುವ ಉದ್ದೇಶದ ಈ ಪ್ರದರ್ಶನದ ನಡುವೆ ಬೆದರಿಕೆ ಕರೆಗಳು ಬಂದಿರುವುದು ಜಿಲ್ಲಾಡಳಿತಕ್ಕೂ ದೊಡ್ಡ ಸವಾಲಾಗಿ ಪರಿಣಮಿಸಿದೆ.

Comments (0)

Your email address will not be published. Required fields are marked *

Back to top button