ಕ್ರೈಂ ಸ್ಟೋರಿ

ನನ್ ಹೆಂಡ್ತಿಗೆ 4 ಜನ ಬಾಯ್​ಫ್ರೆಂಡ್ಸ್​; ರಕ್ಷಣೆ ಕೋರಿ ಸಿಎಂ ಪತ್ರ ಬರೆದ ಭೂಪ

ಮಧ್ಯಪ್ರದೇಶ:  ನನ್ನ ಹೆಂಡ್ತಿಗೆ ಒಬ್ಬರಲ್ಲ, ನಾಲ್ಕು ಜನ ಪ್ರಿಯಕರರಿದ್ದಾರೆ. ಆಕೆ ತನ್ನ ಪ್ರಿಯಕರರೊಂದಿಗೆ ಸೇರಿ ನನ್ನ ಮಗನ ಕೊಲ್ಲಲು ಷಡ್ಯಂತ್ರ ಮಾಡಿದ್ದಾಳೆ ಎಂದು ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ 38 ವರ್ಷದ ವ್ಯಕ್ತಿಯೊಬ್ಬ ಗಂಭಿರ ಆರೋಪ ಮಾಡಿದ್ದಾನೆ.

ಈಗಾಗಲೇ ಚಿಕ್ಕ ಮಗನನ್ನು ತನ್ನೊಂದಿಗೆ ಕರೆದುಕೊಂಡು ಹೋಗಿದ್ದಾಳೆ. ಈಗ ನನ್ನ ಕೊಲ್ಲಲು ಕೂಡ ಪ್ಲ್ಯಾನ್ ಮಾಡಿಕೊಂಡಿದ್ದಾಳೆ. ನಾಲ್ವರು ಪ್ರೇಮಿಗಳಲ್ಲಿ ಒಬ್ಬನೊಂದಿಗೆ ಲೀವ್ ಇನ್ ರಿಲೇಷನ್​​ಶೀಪ್​ನಲ್ಲಿ ಇದ್ದಾಳೆ. ನನ್ನ ಪತ್ನಿ, ಆಕೆಯ ಬಾಯ್​ಫ್ರೆಂಡ್​ಗಳು ನನ್ನನ್ನು ಸಾಯಿಸ್ತಾರೆ. ಇತ್ತೀಚೆಗೆ ಈ ಹಿಂದೆ ಗಂಡನನ್ನು ಹತ್ಯೆ ಮಾಡಿ ಡ್ರಮ್​​​ನಲ್ಲಿ ತುಂಬಿಸಿದ ಮೀರತ್​ನಲ್ಲಿ ನಡೆದ ಮಾದರಿಯಲ್ಲಿಯೇ ಹತ್ಯೆ ಪ್ಲ್ಯಾನ್ ಮಾಡಿದ್ದಾರೆ. ದಯವಿಟ್ಟು ನನ್ನನ್ನು ಕಾಪಾಡಿ ಎಂದು ಮಧ್ಯಪ್ರದೇಶದ ಸಿಎಂ ಮೋಹನ್ ಯಾದವ್ ಅವರಿಗೆ ಪತ್ರ ಬರೆದಿದ್ದಾನೆ.

ಸಂತ್ರಸ್ತ ಹೇಳುವ ಪ್ರಕಾರ ಈಗಾಗಲೇ ಆತ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾನಂತೆ. ಆದರೆ ಪೊಲೀಸರು ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹೀಗಾಗಿ ನಾನೀಗ ನಿಸ್ಸಾಹಯಕನಾಗಿದ್ದೇನೆ ಎಂದು ಗ್ವಾಲಿಯರ್​​ನ ಪುಲ್​ಭಾಗ್​ ರಸ್ತೆಯ ನಡುವೆ ಕುಳಿತು ಪ್ರತಿಭಟನೆ ಮಾಡಿದ್ದಾನೆ. ಸಿಎಂಗೆ ಪತ್ರ ಬರೆದು ನನ್ನ ನೋವನ್ನು ಮುಖ್ಯಮಂತ್ರಿಗಳು ಅರ್ಥಮಾಡಿಕೊಂಡು ನನಗೆ ನ್ಯಾಯ ಒದಗಿಸುತ್ತಾರೆ ಎಂದು ಭರವಸೆಯಿಟ್ಟುಕೊಂಡಿದ್ದೇನೆ ಎಂದು ಹೇಳಿದ್ದಾನೆ.

Comments (0)

Your email address will not be published. Required fields are marked *

Back to top button