ಬೆಂಗಳೂರು: ಪತ್ನಿಯ ಕಿರುಳಕ್ಕೆ ಬೇಸತ್ತು ಪತಿ ಆತ್ಮಹತ್ಯೆ ಶರಣಾಗಿರುವ ಘಟನೆ ಗಿರಿನಗರದಲ್ಲಿ ನಡೆದಿದೆ.. ಗಗನ್ ನೇಣಿಗೆ ಶರಣಾದ ವ್ಯಕ್ತಿ.
ಬ್ಯಾಂಕ್ ಉದ್ಯೋಗ ಮಾಡುತ್ತಿದ್ದ ಗಗನ್ ಎಂಟು ತಿಂಗಳ ಹಿಂದೆ ಮೇಘನಾ ಜತೆ ವಿವಾಹವಾಗಿದ್ದರು. ಕಳೆದ ಕೆಲ ದಿನಗಳಿಂದ ನಿತ್ಯವೂ ದಂಪತಿ ನಡುವೆ ಜಗಳ ನಡೆಯುತ್ತಿತ್ತು. ಹೀಗಾಗಿ ಮನನೊಂದು ಗಗನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬಸ್ಥರು ಪತ್ನಿ ಮೇಘನ ಜಾದವ್ ವಿರುದ್ದ ದೂರು ನೀಡಿದ್ದಾರೆ..
ಆದರೆ ಪತ್ನಿ ಮೇಘನಾ ಜಾದವ್ ಈ ಆರೋಪಗಳನ್ನು ಸಂಪೂರ್ಣ ತಿರಸ್ಕರಿಸಿದ್ದಾರೆ. ಪೊಲೀಸ್ ವಿಚಾರಣೆಯಲ್ಲಿ ಅವರು ನೀಡಿದ ಹೇಳಿಕೆಯಂತೆ, ಮದುವೆಯಾದ ಎರಡೇ ದಿನಕ್ಕೆ ಗಗನ್‌ಗೆ ಬೇರೆ ಯುವತಿಯೊಂದಿಗೆ ಅನೈತಿಕ ಸಂಬಂಧವಿತ್ತು ಎಂಬ ವಿಚಾರ ಗೊತ್ತಾಗಿತ್ತು. ಆದರೂ ನಾವಿಬ್ಬರೂ ತುಂಬಾ ಚೆನ್ನಾಗಿದ್ದೆವು. ಅವರ ಕುಟುಂಬದಲ್ಲಿ ಅಕ್ಕ ನಮ್ಮ ಮದುವೆಗೇ ಬಂದಿರಲಿಲ್ಲ.
ಬಲವಂತವಾಗಿ ಅವರ ಕುಟುಂಬದವರು ನನ್ನ ಜೊತೆ ಮದುವೆ ಮಾಡಿಸಿದ್ದರು” ಎಂದು ಹೇಳಿದ್ದಾರೆ. ಅಲ್ಲದೇ ನಾನು ಅವರಿಗೆ ‘ಬೇರೆಯವರ ಸಹವಾಸ ಬಿಟ್ಟುಬಿಡಿ, ನಾವಿಬ್ಬರೂ ಚೆನ್ನಾಗಿರೋಣ’ ಎಂದು ಹೇಳಿದ್ದೆ. ನಿನ್ನೆ ಮನೆಗೆ ಬಂದವರು ‘ನೀನು ಚೆನ್ನಾಗಿರು’ ಎಂದು ಹೇಳಿ ರೂಮ್ ಬಾಗಿಲು ಹಾಕಿಕೊಂಡರು. ಸ್ವಲ್ಪ ಹೊತ್ತಿನಲ್ಲೇ ಲಾಕ್ ಮಾಡಿ ನೇಣು ಹಾಕಿಕೊಂಡಿದ್ದರು. ಕೆಳಗಿಳಿಸುವಾಗ ಸ್ಲಿಪ್ ಆಗಿ ಬಿದ್ದು ಹಣೆಗೆ ಗಾಯವಾಗಿತ್ತು ಎಂದಿದ್ದಾರೆ.


