Wednesday, April 30, 2025
32 C
Bengaluru
LIVE
ಮನೆರಾಜ್ಯಶ್ರೀಕಾಂತ್ ಪೂಜಾರಿಗೆ ಷರತ್ತುಬದ್ಧ ಜಾಮೀನು ಮಂಜೂರು, ನಾಳೆ ಬಿಡುಗಡೆ

ಶ್ರೀಕಾಂತ್ ಪೂಜಾರಿಗೆ ಷರತ್ತುಬದ್ಧ ಜಾಮೀನು ಮಂಜೂರು, ನಾಳೆ ಬಿಡುಗಡೆ

 

ಹುಬ್ಬಳ್ಳಿ: ಶ್ರೀರಾಮ ಜನ್ಮ ಭೂಮಿ ಗಲಭೆ ಸಂಬಂಧ ನ್ಯಾಂಯಾಂಗ ಬಂಧನದಲ್ಲಿರುವ ಕರಸೇವಕ ಶ್ರೀಕಾಂತ್​ ಪೂಜಾರಿಗೆ ಹುಬ್ಬಳ್ಳಿಯ 1ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಅಯೋಧ್ಯಾ ಶ್ರೀರಾಮ ಮಂದಿರ ನಿರ್ಮಾಣದ ವಿಚಾರವಾಗಿ 1992ರ ಗಲಭೆ ಪ್ರಕರಣದಲ್ಲಿ ಎ೩ ಆರೋಪಿ ಶ್ರೀಕಾಂತ್​ ಪೂಜಾರಿ ಅವರು ಡಿ.29ರಂದು ಶಹರ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿ ಶ್ರೀಕಾಂತ್​ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಆರೋಪಿ ಶ್ರೀಕಾಂತ್​ ಪೂಜಾರಿಯನ್ನ ನ್ಯಾಯಾಂಗ ಬಂಧನಕ್ಕೆ ನೀಡಿದ್ದ ಘನ ನ್ಯಾಯಾಲಯ ವಾದ-ಪ್ರತಿವಾದವನ್ನು ಆಲಿಸಿ ತೀರ್ಪು ಪ್ರಕಟಿಸಿದೆ. ಆರೋಪಿಯ ಪರ ವಕೀಲರಾದ ಸಂಜಯ ಬಡಸ್ಕರ್, ಅಶೋಕ ಅನ್ವೇಕರ ವಾದ ಮಂಡಿಸಿದ್ದರು. ಸರ್ಕಾರದ ಪರವಾಗಿ ಅಮರಾವತಿ ಬಿ.ಎನ್. ವಾದ ಮಂಡಿಸಿದ್ದರು.

 

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments