ಹುಬ್ಬಳ್ಳಿ: ರಾಮಜನ್ಮಭೂಮಿ ಹೋರಾಟಗಾರ ಶ್ರೀಕಾಂತ ಪೂಜಾರಿ ಬಂಧನ ಬಳಿಕ ಹುಬ್ಬಳ್ಳಿಯಲ್ಲಿ ಇಂದು ಹೋರಾಟ ತೀವ್ರಗೊಂಡಿದ್ದು, ಈ ಹಿನ್ನೆಲೆಯಲ್ಲಿ ಶಹರ ಠಾಣೆಯ ಪೊಲೀಸರಿಗೆ ಕಡ್ಡಾಯ ರಜೆ ನೀಡಿ ಠಾಣೆಗೆ ಪ್ರಭಾರಿ ಇನ್ಸ್ಪೆಕ್ಟರ್ ನಿಯೋಜನೆ ಮಾಡಲಾಗಿದೆ.
ಕಳೆದ ವಾರದಂದ ಹುಬ್ಬಳ್ಳಿಯ ರಾಮಜನ್ಮಭೂಮಿ ಹೋರಾಟಗಾರ ಎ3 ಆರೋಪಿ ಶ್ರೀಕಾಂತ್ ಪೂಜಾರಿಯವರನ್ನು, ಶಹರ ಠಾಣೆ ಇನ್ಸ್ಪೆಕ್ಟರ್ ಮಹಮ್ಮದ್ ರಫೀಕ್ ತಹಶೀಲ್ದಾರವರು ಬಂಧನ ಮಾಡಿದರು. ಈ ಸುದ್ದಿ ಹೊರಬಿದ್ದ ಬಳಿಕ ಅಂದೇ ಹಿಂದೂಪರ ಹೋರಾಟಗಾರ ಹಾಗೂ ನ್ಯಾಯವಾದಿ ಸಂಜಯ ಬಡಸ್ಕರಗ ನೇತೃತ್ವದಲ್ಲಿ ಠಾಣೆಯ ಮುಂಭಾಗದಲ್ಲಿ ಪ್ರತಿಭಟನೆ ಮಾಡಲಾಗಿತ್ತು. ಅದರ ಮುಂದುವರೆದ ಭಾಗವಾಗಿ ಬಿಜೆಪಿ ವಿಪಕ್ಷ ನಾಯಕ ಆರ್ ಅಶೋಕ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಇದರ ಬೆನ್ನಲ್ಲೇ ಹು-ಧಾ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರವರು ಇನ್ಸ್ಪೆಕ್ಟರ್ ತಹಶೀಲ್ದಾರಿಗೆ ಕಡ್ಡಾಯ ರಜೆ ನೀಡಿದ್ದಾರೆ ಎಂದು ಹೇಳಲಾಗಿದೆ.
ಶಹರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ತಹಶಿಲ್ದಾರಗೆ ಕಡ್ಡಾಯ ರಜೆ ನೀಡಿದ ಹಿನ್ನೆಲೆಯಲ್ಲಿ ಈಗ ಠಾಣೆಗೆ ಪ್ರಭಾರಿ ಇನ್ಸ್ಪೆಕ್ಟರ್ ಆಗಿ ಬಿ ಎ ಜಾಧವ್ ಅವರನ್ನು ನಿಯೋಜನೆ ಮಾಡಿ ಹು-ಧಾ ನಗರ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ ಆದೇಶ ಮಾಡಿದ್ದಾರೆ. ಸದ್ಯ ಈಗ ಠಾಣೆಯ ಪ್ರಭಾರಿ ಇನ್ಸ್ಪೆಕ್ಟರ್ ಬಿ ಎ ಜಾಧವ್ ಅವರು ಅಧಿಕಾರ ಸ್ವೀಕರಿಸಿದ್ದಾರೆ.