ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ನಡೆದಿದ್ದ ಗಲಭೆ ಪ್ರಕರಣವನ್ನು ಪೊಲೀಸರು ರೀ ಒಪನ್ ಮಾಡಿದ್ದು, ಇದಕ್ಕೆ ರೋಚಕ ಟ್ವೀಸ್ಟ್ ಸಿಕ್ಕಿದೆ. ರಾಜ್ಯದಲ್ಲಿ ತೀವ್ರ ಚರ್ಚೆಗೆ ಕಾರಣವಾದ ಶ್ರೀಕಾಂತ ಪೂಜಾರಿಯ ಜಾಮೀನು ಅರ್ಜಿಯ ವಿಚಾರಣೆ ಮುಗಿದಿದ್ದು, ಇಂದು ಆದೇಶ ಹೊರ ಬೀಳಲಿದೆ.
ಹುಬ್ಬಳ್ಳಿ ಶಹರ ಪೊಲೀಸರಿಂದ ಬಂಧನಕ್ಕೊಳಗಾಗಿ ಜೈಲು ಪಾಲಾಗಿರುವ ಶ್ರೀಕಾಂತ ಪೂಜಾರಿಯ ಜಾಮೀನಿಗಾಗಿ ನ್ಯಾಯವಾದಿ ಸಂಜೀವ ಬಡಸ್ಕರ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆಯು ಕಳೆದ ದಿನ 5ನೇಯ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ನಡೆದಿದ್ದು, ಕಳೆದ ದಿನ ವಾದ ಪ್ರತಿವಾದ ಆಲಿಸಿರೋ ನ್ಯಾಯಾಧೀಶರು ಇಂದು ತೀರ್ಪು ಕಾಯ್ದಿರಿಸಿದ್ದರು. ಈಗ ನ್ಯಾಯಾಧೀಶರ ತೀರ್ಪುಗೆ ಈಡೀ ರಾಜ್ಯವೆ ತಿರುಗಿನೋಡುತ್ತಿದೆ. ಇನ್ನೂ ಶ್ರೀಕಾಂತ ಪೂಜಾರಿ 1992 ರ ಸಮಯದಲ್ಲಿ ಭಾಗಿಯಾಗಿದ್ದರೆನ್ನಲಾದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದರು. ಈ ವಿಷಯ ರಾಜ್ಯದಲ್ಲಿ ತೀವ್ರ ಸದ್ದು ಮಾಡಿ, ಬಿಜೆಪಿ ಹೋರಾಟ ನಡೆಸಿತ್ತು. ಇಂದು ನ್ಯಾಯಾಧೀಶರು ಆರೋಪಿಯ ಜಾಮೀನು ಕುರಿತು ಅಂತಿಮ ತೀರ್ಪು ನೀಡಲಿದ್ದಾರೆ.