ನಿಮಗೆ ಸಂಬಳ ಸೇರಿ ವರ್ಷಕ್ಕೆ ಬರುವ ಆದಾಯ 10 ಲಕ್ಷ ರೂ ದಾಟುತ್ತಿದ್ದರೆ ಬಹಳಷ್ಟು ತೆರಿಗೆ ಪಾವತಿಸಬೇಕಾಗಬಹುದು. ಒಂದ್ವೇಳೆ ನೀವು ಓಲ್ಡ್ ಟ್ಯಾಕ್ಸ್ ರೆಜಿಮೆಯಲ್ಲಿ ಮುಂದುವರಿಯುತ್ತಿದ್ದರೆ ಈ 10 ಲಕ್ಷ ರೂ ಆದಾಯಕ್ಕೆ ಸ್ವಲ್ಪವೂ ತೆರಿಗೆ ಕಟ್ಟದ ಹಾಗೆ ನೋಡಿಕೊಳ್ಳಬಹುದು… ಹೇಗೆ ಅಂತೀರಾ ಇಲ್ಲಿದೆ ಡಿಟೈಲ್ಸ್…
ಒಬ್ಬ ವ್ಯಕ್ತಿಗೆ 10 ಲಕ್ಷ ರೂ ಆದಾಯ ಇದ್ದರೆ ಟ್ಯಾಕ್ಸ್ ಇಲ್ಲದಂತೆ ಮಾಡುವ ಒಂದೊಳ್ಳೆ ಉಪಾಯವಿದೆ. ಎನ್ಪಿಎಸ್, ಇನ್ಷೂರೆನ್ಸ್ ಸೇರಿದಂತೆ ವಿವಿಧ ಹೂಡಿಕೆಗಳ ಮೂಲಕ 4 ಲಕ್ಷ ರೂಗೂ ಹೆಚ್ಚು ಮೊತ್ತಕ್ಕೆ ಡಿಡಕ್ಷನ್ ಪಡೆಯಬಹುದು.
ಓಲ್ಡ್ ಟ್ಯಾಕ್ಸ್ ರೆಜಿಮೆಯಲ್ಲಿ ನೀವು ಮುಂದುವರಿಯುತ್ತಿದ್ದರೆ ಈ 10 ಲಕ್ಷ ರೂ ಆದಾಯಕ್ಕೆ ಸ್ವಲ್ಪವೂ ತೆರಿಗೆ ಬೀಳದ ಹಾಗೆ ನೋಡಿಕೊಳ್ಳಲು ಸಾಧ್ಯ. ಹೊಸ ಟ್ಯಾಕ್ಸ್ ರೆಜಿಮೆಯಲ್ಲಿ ಟ್ಯಾಕ್ಸ್ ರಿಬೇಟ್ ಇರುವುದರಿಂದ ಎಂಟು ಲಕ್ಷ ರೂ ಒಳಗಿನ ಆದಾಯಕ್ಕೆ ತೆರಿಗೆ ಬೀಳುವುದಿಲ್ಲ. ಆದರೆ, 10 ಲಕ್ಷ ರೂ ಆದಾಯ ಇದ್ದರೆ ಹಳೆಯ ರೆಜಿಮೆಯ ಮೂಲಕ ತೆರಿಗೆ ಉಳಿಸಬಹುದು. ನಿಮ್ಮ ವಾರ್ಷಿಕ ಆದಾಯ 10 ಲಕ್ಷ ರೂ ಆದಾಯದಲ್ಲಿ, 50,000 ರೂ ಸ್ಟ್ಯಾಂಡರ್ಡ್ ಡಿಡಕ್ಷನ್ ತೆಗೆಯಿರಿ. ನಿಮ್ಮ ಟ್ಯಾಕ್ಸಬಲ್ ಇನ್ಕಮ್ ಅಥವಾ ತೆರಿಗೆಗೆ ಅರ್ಹವಾದ ಆದಾಯ 9.50 ಲಕ್ಷ ರೂ ಆಗುತ್ತದೆ. ಸೆಕ್ಷನ್ 80ಸಿ ಅಡಿಯಲ್ಲಿ ಒಂದೂವರೆ ಲಕ್ಷ ರೂ ಹೂಡಿಕೆ ಮಾಡಿದ್ದರೆ ಆಗ ಟ್ಯಾಕ್ಸಬಲ್ ಇನ್ಕಮ್ 8 ಲಕ್ಷ ರೂ ಆಗುತ್ತದೆ.
ಆದಾಯ ತೆರಿಗೆ ಸೆಕ್ಷನ್ 80ಸಿಸಿಡಿ ಅಡಿಯಲ್ಲಿ ಎನ್ಪಿಎಸ್, ಅಥವಾ ನ್ಯಾಷನಲ್ ಪೆನ್ಷನ್ ಸಿಸ್ಟಂ ಯೋಜನೆಯಲ್ಲಿ ವರ್ಷಕ್ಕೆ 50,000 ರೂವರೆಗಿನ ಹೂಡಿಕೆಗೆ ಟ್ಯಾಕ್ಸ್ ಡಿಡಕ್ಷನ್ ಇರುತ್ತದೆ. ಎನ್ಪಿಎಸ್ ಎಂಬುದು ಮಾರುಕಟ್ಟೆಗೆ ಜೋಡಿತವಾದ ಉತ್ತಮ ಪಿಂಚಣಿ ಯೋಜನೆ. ನಿಮ್ಮ ಹಣ ಸುಮ್ಮನೆ ವ್ಯರ್ಥವಾಗುವುದಿಲ್ಲ. ವರ್ಷಕ್ಕೆ ಶೇ. 9ರಿಂದ 15ರವರೆಗೆ ನೀವು ರಿಟರ್ನ್ಸ್ ನಿರೀಕ್ಷಿಸಬಹುದು. ಈ ಎರಡು ಸೆಕ್ಷನ್ ಅನ್ನು ನೀವು ಉಪಯೋಗಿಸಿದ ಬಳಿಕ ನಿಮ್ಮ 10 ಲಕ್ಷ ರೂ ಆದಾಯದಲ್ಲಿ ತೆರಿಗೆಗೆ ಅರ್ಹವಾದ ಆದಾಯ 7.50 ಲಕ್ಷ ರೂಗೆ ಕಡಿತವಾಗುತ್ತದೆ. ಸೆಕ್ಷನ್ 80ಡಿ ಅಡಿಯಲ್ಲಿ ಹೆಲ್ತ್ ಇನ್ಷೂರೆನ್ಸ್ ಪ್ರೀಮಿಯಮ್ ಹಣಕ್ಕೆ ಟ್ಯಾಕ್ಸ್ ಡಿಡಕ್ಷನ್ ಪಡೆಯಬಹುದು. ನೀವು 60 ವರ್ಷದೊಳಗಿನ ವಯಸ್ಸಿವರಾಗಿ ನಿಮಗೊಬ್ಬರಿಗೇ ಹೆಲ್ತ್ ಇನ್ಷೂರೆನ್ಸ್ ಇದ್ದರೆ 25,000 ರೂವರೆಗೆ ಟ್ಯಾಕ್ಸ್ ಡಿಡಕ್ಷನ್ ಪಡೆಯಬಹುದು. ತಂದೆ ತಂದೆ, ಸಂಗಾತಿಗೂ ಹೆಲ್ತ್ ಇನ್ಷೂರೆನ್ಸ್ ಪಾಲಿಸಿ ಮಾಡಿಸಿದ್ದರೆ 50,000 ರೂವರೆಗೆ ಡಿಡಕ್ಷನ್ಗೆ ಅವಕಾಶ ಇರುತ್ತದೆ.
ಈಗ ನಿಮ್ಮ ಟ್ಯಾಕ್ಸಬಲ್ ಇನ್ಕಮ್ 7 ಲಕ್ಷ ರೂ ಆಗುತ್ತದೆ. ಮೇಲೆ ಹೇಳಿದ ಇಷ್ಟೂ ಯೋಜನೆಗಳು ತೆರಿಗೆ ಉಳಿಸಲು ಮಾತ್ರವಲ್ಲ, ಒಟ್ಟಾರೆಯಾಗಿ ಉತ್ತಮ ಹೂಡಿಕೆಗಳೇ ಆಗಿರುವುದರಿಂದ ನೀವು ಸದ್ಬಳಕೆ ಮಾಡಿಕೊಳ್ಳಬಹುದು.
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com