Tuesday, March 3, 2026
31.7 C
Bengaluru
Google search engine
LIVE
ಮನೆಆರೋಗ್ಯದಿಡೀರ್ ಅಂತ ಮಶ್ರೂಮ್ ಗ್ರೇವಿ ಮಾಡುವ ವಿಧಾನ

ದಿಡೀರ್ ಅಂತ ಮಶ್ರೂಮ್ ಗ್ರೇವಿ ಮಾಡುವ ವಿಧಾನ

ರುಚಿಕರವಾದ ಮಶ್ರೂಮ್ ಗ್ರೇವಿ ಮಾಡುವ ವಿಧಾನ ….

ಬೇಕಾಗುವ ಪದಾರ್ಥಗಳು ..

. ಮಶ್ರೂಮ್ – ಎರಡು ಪ್ಯಾಕೆಟ್

. ಬಟಾಣಿ – ಒಂದು ಬಟ್ಟಲು

. ಈರುಳ್ಳಿ-2

. ಟೊಮೆಟೊ-4

. ದನಿಯಾ ಪುಡಿ-2 ಚಮಚ

. ಗರಂ ಮಸಾಲ – 1 ಚಮಚ

. ಶುಂಠಿ-ಬೆಳ್ಳುಳ್ಳಿ ಪೇಸ್ಟ್ -1ಚಮಚ

.ಕಸ್ತೂರಿ ಮೇಥಿ-1ಚಮಚ

.ಸೋಂಪು ಕಾಳು-1ಚಮಚ

ಚಕ್ಕೆ-2

.ಲವಂಗ-2

.ಸ್ಟಾರ್ ಮಸಾಲ ಹೂ-2

.ಅನಾನಸ್ ಮೊ್ಗ್ಉ-2

.ಏಲಕ್ಕಿ-2

.ಎಣ್ಣೆ-4 ಟೇಬಲ್ ಸ್ಪೂನ್

. ಉಪ್ಪು-ರುಚಿಗೆ ತಕ್ಕಷ್ಟು

ಮಾಡುವ ವಿಧಾನ..

. ಪಾತ್ರೆಯಲ್ಲಿ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿಕೊಳ್ಳಬೇಕು. ಕಸ್ತೂರಿ ಮೇಥಿ, ಸೋಂಪು,ಚಕ್ಕೆ-ಲವಂಗ,ಸ್ಟಾರ್ ಮಸಾಲ ಹೂ, ಅನಾನಸ್ ಮೊಗ್ಗು, ಏಲಕ್ಕಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು.

. ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು. ಬಳಿಕ ಟೊಮೆಟೊ,ಶುಂಠಿ -ಬೆಳ್ಳುಳ್ಳಿ ಪೇಸ್ಟ್ ಹಾಗೂ ಸ್ವಲ್ಪ ಉಪ್ಪು ಹಾಕಿಕೊಂಡು ಬೆರಡಸಿಕೊಡಬೇಕು.

. ನಂತರ ಮಸಾಲ ಪುಡಿಗಳು ಹಾಗೂ ಬಟಾಣಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ನೀರನ್ನು ಹಾಕಿ 5 ನಿಮಿಷಗಳ ಕಾಲ ಬಟಾಣಿ ಬೇಯಲು ಬಿಡಿ. ಇದೀಗ ಕತ್ತರಿಸಿದ ಮಶ್ರೂಮ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

. 10 ರಿಂದ 15 ನಿಮಿಷ ಬೇಯಲು ಬಿಡಿ.ಕೊನೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಉದುರಿಸಿ. ಇದೀಗ ರುಚಿಕರವಾದ ಮಶ್ರೂಮ್ ಗ್ರೇವಿ ಸವಿಯಲು ಸಿದ್ದ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments