ರುಚಿಕರವಾದ ಪನ್ನೀರ್ ಪಕೋಡಾ ಮಾಡುವ ವಿಧಾನ ….
ಬೇಕಾಗುವ ಪದಾರ್ಥಗಳು…..
. ಪನ್ನೀರ್ ಕ್ಯೂಬ್ಸ್ – 500 ಗ್ರಾಂ
. ಕಡ್ಲೆ ಹಿಟ್ಟು – 1 ಬಟ್ಟಲು
. ಕಾರ್ನ್ ಫ್ಲೋರ್ – 3-4 ಚಮಚ
. ಅಚ್ಚಖಾರದ ಪುಡಿ – 1 ಚಮಚ
. ಉಪ್ಪು- ರುಚಿಗೆ ತಕ್ಕಷ್ಟು
. ಜೀರಿಗೆ ಪುಡಿ – ಅರ್ಧ ಚಮಚ
. ಅಡುಗೆ ಸೋಡಾ – 1 ಚಮಚ
. ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು
. ಚಾಟ್ ಮಸಾಲ – ಸ್ವಲ್ಪ
ಮಾಡುವ ವಿಧಾನ …
. ಮೊದಲಿಗೆ ಒಂದು ಪಾತ್ರೆಯಲ್ಲಿ ಕಡ್ಲೆಹಿಟ್ಟು ಹಾಗೂ ಕಾರ್ನ್ ಫ್ಲೋರ್ ಹಾಕಿಕೊಂಡು ಅದಕ್ಕೆ ನೀರು, ಅಚ್ಚಖಾರದ ಪುಡಿ, ಜೀರಿಗೆ ಪುಡಿ, ಅರಶಿಣ ಮತ್ತು ಸೋಡಾ ಹಾಕಿಕೊಂಡು ಮಿಕ್ಸ್ ಮಾಡಿಕೊಂಡು ದಪ್ಪ ಮಿಶ್ರಣವನ್ನು ಮಾಡಿಕೊಳ್ಳಿ.
. ಪನ್ನೀರ್ ಕ್ಯೂಬ್ಸ್ ಅನ್ನು ಮಿಶ್ರಣದಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ , ಪನ್ನೀರ್ ಗೆ ಚೆನ್ನಾಗಿ ಹೊಂದಿಕೊಳ್ಳುವಂತೆ ಕೋಟಿಂಗ್ ಮಾಡಿ.
. ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಬಿಸಿಗಿಟ್ಟು, ಕಾದ ಎಣ್ಣೆಗೆ ಕಡ್ಲೆಹಿಟ್ಟಿನ ಮಿಶ್ರಣದೊಂದಿಗೆ ಅದ್ದಿದ್ದ ಪನ್ನೀರ್ ಕ್ಯೂಬ್ಸ್ ಅನ್ನು ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಅದೇ ರೀತಿ ಎಲ್ಲಾ ಪನ್ನೀರ್ ಕ್ಯೂಬ್ಸ್ಗಳನ್ನು ಫ್ರೈ ಮಾಡಿ.
.ನಂತರ ಅದನ್ನು ಎಣ್ಣೆಯಿಂದ ತೆಗೆದು ಅದರ ಮೇಲೆ ಸ್ವಲ್ಪ ಚಾಟ್ ಮಸಾಲ ಪುಡಿಯನ್ನು ಹಾಕಿಕೊಂಡು ಕೆಚಪ್ ಅಥವಾ ಗ್ರೀನ್ ಚಟ್ನಿಯೊಂದಿಗೆ ಸವಿಯಿರಿ.