Monday, June 23, 2025
26.3 C
Bengaluru
Google search engine
LIVE
ಮನೆ#Exclusive NewsTop Newsಭಾರತದ ಬತ್ತಳಿಕೆಯಲ್ಲಿದ್ದ ಹೊಸ ಅಸ್ತ್ರ ಪ್ರಯೋಗ

ಭಾರತದ ಬತ್ತಳಿಕೆಯಲ್ಲಿದ್ದ ಹೊಸ ಅಸ್ತ್ರ ಪ್ರಯೋಗ

ಪಾಕಿಸ್ತಾನಕ್ಕೆ ಕಾಳರಾತ್ರಿ ಅಂದ್ರೇನು ಎಂಬುದನ್ನು ಭಾರತ ತೋರಿಸಿದೆ. ತ್ರಿವಿಧ ದಳಗಳು ಅತ್ಯಂತ ಸಮನ್ವಯದಿಂದ ನಿರ್ವಹಿಸಿದ ಆಪರೇಷನ್​ ಸಿಂದೂರದಲ್ಲಿ ಭಾರತೀಯ ಸೇನೆಯ ಬತ್ತಳಿಕೆಯಲ್ಲಿದ್ದ ಅತ್ಯಾಧುನಿಕ ಆಯುಧಗಳನ್ನು ಬಳಕೆ ಮಾಡಿದೆ.

ಆತ್ಮಾಹುತಿ ಡ್ರೋನ್, ಸ್ಕಾಲ್ಪ್ ಕ್ಷಿಪಣಿ, ಹ್ಯಾಮರ್ ಬಾಂಬ್​ ಗಳನ್ನು ಬಳಸಿದೆ. ವಾಸ್ತವದಲ್ಲಿ ಮಿಲಿಟರಿ ಆಪರೇಷನ್​ ಗಳಲ್ಲಿ ಯಾವ ಮಾದರಿಯ ಆಯುಧಗಳನ್ನು ಬಳಸಲಾಗಿದೆ ಎಂಬುದನ್ನು ಯಾವತ್ತಿಗೂ ಬಹಿರಂಗ ಮಾಡಲ್ಲ.ಆದ್ರೆ, ಅವು ಛೇದಿಸಿದ ವೈಖರಿ ಆಧರಿಸಿ ಯಾವ ಶಸ್ತ್ರಾಸ್ತ್ರ ಅಂತಾ ಅಂದಾಜಿಸಲಾಗುತ್ತದೆ. ಈಗ ಆಪರೇಷನ್ ಸಿಂಧೂರದಲ್ಲಿ ಉಗ್ರದಾಣಗಳನ್ನು ನಾಶ ಮಾಡಲು ಬೇರೆ ಬೇರೆ ಕಡೆಯಿಂದ ಏಕಕಾಲದಲ್ಲಿ ದಾಳಿ ಸಂಘಟಿಸಲಾಗಿದೆ.

ಉಗ್ರ ಸ್ಥಾವರಗಳ ಮೇಲೆ ಆತ್ಮಾಹುತಿ ಡ್ರೋನ್ ದಾಳಿ
ಆಪರೇಷನ್ ಸಿಂಧೂರದಲ್ಲಿ ಆತ್ಮಾಹುತಿ ಡ್ರೋನ್​ ಗಳನ್ನು ವಿನಿಯೋಗಿಸಿರುವುದು ಗೊತ್ತಾಗುತ್ತದೆ. ಇದನ್ನು ಲೈಟರಿಂಗ್ ಮ್ಯೂನಿಷನ್ ಎಂದು ಹೇಳಲಾಗುತ್ತದೆ. ಇವು ನಿರ್ದೇಶಿಸಿದ ಪ್ರಾಂತ್ಯಗಳನ್ನು ತಲುಪಿ ಲಕ್ಷ್ಯಗಳನ್ನು ಗುರುತಿಸಿ ಅವುಗಳ ಮೇಲೆ ಅಪ್ಪಳಿಸುತ್ತವೆ. ಇವುಗಳಲ್ಲಿ ನಿಗಾ ಸಾಮಾರ್ಥ್ಯ ಸಹ ಇದೆ. ಭಾರತದ ಬತ್ತಳಿಕೆಯಲ್ಲಿ ಈ ರೀತಿಯ ಡ್ರೋನ್​ ಗಳು ತುಂಬಾ ಇವೆ. ಇವುಗಳ ಬಳಕೆಯಿಂದ ನಮ್ಮ ಸೇನೆಗೆ ಆಗುವ ಸಾವು ನೋವನ್ನು ತಪ್ಪಿಸಬಹುದು.

ಶತ್ರುದೇಶಕ್ಕೆ ನುಗ್ಗಿದ್ವು ಸ್ಕಾಲ್ಪ್ ಕ್ಷಿಪಣಿ
ಸ್ಕಾಲ್ಪ್ ಕ್ಷಿಪಣಿಗಳನ್ನು ಸ್ಟ್ರಾಮ್ ಶಾಡೋ ಅಂತಾನು ಕರೆಯಲಾಗುತ್ತದೆ. ಇದನ್ನು ಫ್ರಾನ್ಸ್ ಅಭಿವೃದ್ಧಿಪಡಿಸಿದೆ. ಇದು ದೀರ್ಘ ಶ್ರೇಣಿಯ ಕ್ರ್ಯೂಸ್ ಮಿಸೈಲ್. ಸರಿಸುಮಾರು 250 ಕಿಲೋಮೀಟರ್ ದೂರದ ಲಕ್ಷ್ಯಗಳನ್ನು ಛೇದಿಸುವ ಸಾಮರ್ಥ್ಯ ಇದಕ್ಕೆ ಇದೆ. ಶತ್ರುದೇಶಕ್ಕೆ ನುಗ್ಗಿ ದಾಳಿ ನಡೆಸುವುದಕ್ಕೆ ಇದನ್ನು ಬಳಕೆ ಮಾಡಲಾಗುತ್ತದೆ.ಇವುಗಳನ್ನು ಯುದ್ಧ ವಿಮಾನಗಳಿಂದ ಪ್ರಯೋಗಿಸಬಹುದು..

ಬಂಕರ್​ ಗಳನ್ನು ಧ್ವಂಸ ಮಾಡುವ ಹ್ಯಾಮರ್
ಬಲವಾಗಿ ನಿರ್ಮಿಸಿದ ಬಹುಮಹಡಿ ಕಟ್ಟಡ, ಬಂಕರ್ ಧ್ವಂಸ ಮಾಡಲು ಹ್ಯಾಮರ್ ಬಾಂಬ್​ ಗಳನ್ನು ಬಳಸ್ತಾರೆ. ಇದು ಸ್ಮಾರ್ಟ್ ಬಾಂಬ್​ ಗಳ ಸಾಲಿಗೆ ಸೇರುತ್ತೆ. ಇವುಗಳನ್ನು 50-70 ಕಿಲೋಮೀಟರ್ ದೂರದಿಂದ ಪ್ರಯೋಗ ಮಾಡಬಹುದು.. ಎಷ್ಟು ಎತ್ತರದಿಂದ ಇವುಗಳನ್ನು ಪ್ರಯೋಗಿಸಲಾಗುತ್ತದೆ ಎಂಬುದನ್ನು ಇದು ಆಧರಿಸಿರುತ್ತದೆ

ಭಾರತ ದಾಳಿ ನಡೆಸಿದ ಪ್ರಾಂತ್ಯಗಳ ಪಟ್ಟಿಯಲ್ಲಿ ಬಹವಾಲ್​ಪುರದ ಮರ್ಕಜ್ ಸುಭಾನ್ ಕೂಡ ಇದೆ. ಇದು ಗಡಿಯಿಂದ 100 ಕಿಲೋಮೀಟರ್ ದೂರದಲ್ಲಿದೆ. ಇನ್ನು ಲಷ್ಕರ್ ಹೆಡ್ ಕ್ರಾರ್ಟರ್ಸ್ ಮರ್ಕಜ್ ತೊಯ್ಬಾ ಕೂಡ ಈ ಪಟ್ಟಿಯಲ್ಲಿತ್ತು. ಇದು ಗಡಿಯಿಂದ ಕೇವಲ 30 ಕಿಲೋಮೀಟರ್ ದೂರದಲ್ಲಿದೆ

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments