Top Newsಹಣಕಾಸು

ರೆಪೋ ದರ ಇಳಿಕೆಯಿಂದ ಗೃಹಸಾಲದ ಇಎಂಐ ಭಾರ ಹೇಗೆ ಇಳಿಕೆ..? ಯಾವ ಆಯ್ಕೆ ಉತ್ತಮ?

ಗೃಹ ಸಾಲ ಪಡೆದವರ ಇಎಂಐ ಭಾರ ಮತ್ತಷ್ಟು ಇಳಿಕೆ.. ಫ್ಲೋಟಿಂಗ್ ರೇಟ್ ಮೇಲೆ ಗೃಹ ಸಾಲ ಪಡೆದವರಿಗೆ ಬಿಗ್ ರಿಲೀಫ್.. ಆದ್ರೆ, 2019ರ ಅಕ್ಟೋಬರ್ ಗೆ ಮೊದಲು ಸಾಲ ಪಡೆದವರಿಗೆ ಇಲ್ಲ ರಿಲೀಫ್.. ಹೊಸದಾಗಿ ಗೃಹ ಸಾಲ ಪಡೆಯುವವರಿಗೂ ಕಡಿಮೆ ಬಡ್ಡಿದರ ಅನ್ವಯ… ಹೆಚ್ಚು ಮೊತ್ತ ಗೃಹಸಾಲ ಪಡೆಯಲು ಇದು ಅನುಕೂಲಕರ ಸಮಯ..

ಗೃಹಸಾಲ ಪಡೆದವರಿಗೆ ಆರ್​ಬಿಐ ಗುಡ್ ನ್ಯೂಸ್.. ಸತತ ಮೂರನೇ ಬಾರಿಗೆ ರೆಪೋ ದರ ಇಳಿಕೆ
ಎಲ್ಲರ ನಿರೀಕ್ಷೆ ಮೀರಿ 50 ಬೇಸಿಸ್ ಪಾಯಿಂಟ್‌ ಕಡಿತ.. ಪರಿಣಾಮ ರೆಪೋ ಬಡ್ಡಿ ದರ ಶೇ.6 ರಿಂದ ಶೇ.5.50ಕ್ಕೆ ಇಳಿಕೆ.. ಆರ್ಬಿಐ ಹೀಗೆ ರೆಪೋ ದರ ಇಳಿಸ್ತಿರೋದು ಈ ವರ್ಷದಲ್ಲಿ ಮೂರನೇ ಬಾರಿ.. ಒಟ್ಟಾರೆ 1 ಪರ್ಸೆಂಟ್ ಬಡ್ಡಿ ಇಳಿಸಿದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ

ರೆಪೋ ದರ ಇಳಿಕೆ.. ಗೃಹಸಾಲ ಪಡೆದವರ ಮುಂದೆ ಈಗ 2 ಆಯ್ಕೆ
ಆಯ್ಕೆ 1 – ತಿಂಗಳ ಇಎಂಐ ಮೊತ್ತವನ್ನು ಕಡಿಮೆ ಮಾಡಿಕೊಳ್ಳುವುದು
ಆಯ್ಕೆ 2 – ಇಎಂಐ ಪಾವತಿಸುವ ಅವಧಿಯನ್ನು ಕಡಿಮೆ ಮಾಡಿಕೊಳ್ಳುವುದು

ಬ್ಯಾಂಕಿಂಗ್ ತಜ್ಱರ ಪ್ರಕಾರ ಗೃಹಸಾಲ ಪಡೆದವರು 2ನೇ ಆಯ್ಕೆ ಚೂಸ್ ಮಾಡೋದು ಉತ್ತಮ.. ಇದರಿಂದ ದೀರ್ಘಕಾಲ ಪಾವತಿಸುವ ಹೆಚ್ಚು ಮೊತ್ತದ ಬಡ್ಡಿಯನ್ನು ಸೇವ್ ಮಾಡಬಹುದು.. ನೀವು ಹೀಗೆ ಮಾಡಬೇಕು ಎಂದರೇ, ಈಗಿರುವಷ್ಟೇ ಇಎಂಐ ಮೊತ್ತ ಪ್ರತಿ ತಿಂಗಳು ಪಾವತಿಸಬೇಕು

ರೆಪೋ ದರ ಕಡಿತದಿಂದ ನಿಮ್ಮ ಗೃಹಸಾಲದ ಮೇಲಿನ ಇಎಂಐ ಭಾರ ಎಷ್ಟು ಕಡಿಮೆ ಆಗುತ್ತೆ..

ಉದಾಹರಣೆಗೆ..

ನೀವು ಈ ವರ್ಷದ ಜನವರಿಯಲ್ಲಿ 20 ವರ್ಷದ ಮಟ್ಟಿಗೆ 50 ಲಕ್ಷ ಸಾಲ ಪಡೆದಿದ್ದೀರಿ ಎಂದಿಟ್ಟುಕೊಳ್ಳಿ..
ಆಗ ಬ್ಯಾಂಕ್ ಬಡ್ಡಿ ದರ 8.50% ಇದ್ರೆ ತಿಂಗಳಿಗೆ 43,391 ರೂ. ಇಎಂಐ ಪಾವತಿಸಬೇಕಿತ್ತು.. ಆದರೆ, ಈಗ ಮೂರು ಬಾರಿ ರೆಪೋ ದರ ಕಡಿತ ಆಗಿರುವ ಕಾರಣ ಇಎಂಐ ಮೊತ್ತ 40,280 ರೂ.ಗೆ ಇಳಿಕೆ ಆಗಲಿದೆ. ಅಂದ್ರೆ ತಿಂಗಳಿಗೆ ಹೆಚ್ಚು ಕಡಿಮೆ 3000 ರೂಪಾಯಿಗೂ ಮೇಲ್ಪಟ್ಟು ನಿಮಗೆ ಉಳಿತಾಯ ಆಗುತ್ತೆ.. ಅಂದ್ರೆ ವರ್ಷಕ್ಕೆ ಅಂದಾಜು 40ಸಾವಿರ ರೂಪಾಯಿವರೆಗೂ ನಿಮಗೆ ಉಳಿತಾಯ ಆಗುತ್ತೆ.. ದೀರ್ಘಾವಧಿಯಲ್ಲಿ ನೀವು ಪಾವತಿಸುವ ಮೊತ್ತದಲ್ಲಿ 7.12 ಲಕ್ಷ ರೂಪಾಯಿ ಬಡ್ಡಿ ಉಳಿತಾಯ ಆಗಲಿದೆ

ಒಂದೊಮ್ಮೆ ನೀವು ಇಎಂಐ ಮೊತ್ತವನ್ನು ಹಿಂದಿನಷ್ಟೇ ಪಾವತಿಸಿ… ಕಾಲಾವಧಿ ತಗ್ಗಿಸಿದಲ್ಲಿ..

ನಿಮ್ಮ ಸಾಲ ಮರುಪಾವತಿಯ ಗಡುವು ಮೂರು ವರ್ಷ ಇಳಿಕೆ ಆಗುತ್ತದೆ.. ಅಂದ್ರೆ ಈ ಜನವರಿಯಲ್ಲಿ 240 ತಿಂಗಳ ಅವಧಿಗೆ 50 ಲಕ್ಷ ಸಾಲ ಪಡೆದಿದ್ರೆ, ಈಗ ಆರ್ಬಿಐ ರಿಲೀಫ್ ಕಾರಣ ಈ ಕಾಲಾವಧಿ 206 ತಿಂಗಳಿಗೆ ಇಳಿಕೆ ಆಗುತ್ತದೆ.. ಅಂದ್ರೆ ಬಡ್ಡಿ ಮೊತ್ತದಲ್ಲಿ ಬರೋಬ್ಬರಿ 14.78 ಲಕ್ಷ ರೂಪಾಯಿ ಉಳಿತಾಯ ಆಗುತ್ತದೆ

ಆಯ್ಕೆ ನಿಮ್ಮದು

Comments (0)

Your email address will not be published. Required fields are marked *

Back to top button