ರುಚಿಕರವಾದ ರವೆ ಇಡ್ಲಿ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು….
. ರವೆ – 1 ಬಟ್ಟಲು
. ಮೊಸರು – 1 ಬಟ್ಟಲು
. ಉಪ್ಪು – ರುಚಿಗೆ ತಕ್ಕಷ್ಟು
. ಅಡುಗೆ ಎಣ್ಣೆ – 2 ಚಮಚ
. ಬೇಕಿಂಗ್ ಸೋಡಾ – ಸ್ವಲ್ಪ
ಮಾಡುವ ವಿಧಾನ…..
1] ಒಂದು ಪಾತ್ರೆಯಲ್ಲಿ ರವೆ, ಉಪ್ಪು, ಮೊಸರು ತೆಗೆದುಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಈ ಮಿಶ್ರಣ 10-15 ನಿಮಿಷ ನೆನೆಯಲು ಬಿಡಿ.
2] ನಂತರ ಇಡ್ಲಿ ಮಿಶ್ರಣಕ್ಕೆ ಚಿಟಿಕೆಯನ್ನು ಅಡುಗೆ ಸೋಡಾ ಸೇರಿಸಿ ಇಡ್ಲಿ ಹಿಟ್ಟಿನ ಹದಕ್ಕೆ ನೀರನ್ನು ಸೇರಿಸಿಕೊಳ್ಳಿ.
3] ನಂತರ ಇಡ್ಲಿ ಮಿಶ್ರಣದ ಹಿಟ್ಟನ್ನು ಎಣ್ಣೆ ಸವರಿದ ಇಡ್ಲಿ ಪಾತ್ರೆಗೆ ಹಾಕಿ. ಸ್ಟೀಮರ್​ನಲ್ಲಿ ನೀರನ್ನು ಮೊದಲು ಸ್ವಲ್ಪ ಕುದಿಸಿ ಅದರಲ್ಲಿ ಇಡ್ಲಿಗಳನ್ನು ಸುಮಾರು 14-15 ನಿಮಿಷಗಳ ಕಾಲ ಬೇಯಲು ಬಿಡಿ. ಇದೀಗ ಹೋಟೇಲ್ ಸ್ಟೈಲ್ ರವೆ ಇಡ್ಲಿ ಸವಿಯಲು ಸಿದ್ಧ.

By admin

Leave a Reply

Your email address will not be published. Required fields are marked *

Verified by MonsterInsights