ಹದಿಹರಯದ ದಿನಗಳಲ್ಲಿ ಸಾಮಾನ್ಯವಾಗಿ ಮೊಡವೆ ಕಾಣಿಸಿಕೊಳ್ಳುತ್ತದೆ. ವಿಟಮಿನ್ ‘ಎ‘ ಕೊರತೆಯಿಂದಲೂ ಮೊಡವೆ ಕಾಣಿಸಿಕೊಳ್ಳುತ್ತದೆ. ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳದೇ ಇರುವುದು, ತ್ವಚೆಗೆ ಸೂಕ್ತವಲ್ಲದ ಬ್ಯೂಟಿ ಪ್ರೊಡಕ್ಟ್ಸ್ಗಳನ್ನು ಬಳಸುವುದು, ಅತಿಯಾದ ಎಣ್ಣೆ ಪದಾರ್ಥಗಳನ್ನು ತಿನ್ನುವುದು, ಮಾನಸಿಕ ಒತ್ತಡ, ಧೂಳು ಇತ್ಯಾದಿ ಗಳಿಂದ ಮೊಡವೆಗಳು ಕಾಣಿಸಿಕೊಳ್ಳುತ್ತದೆ.
ಮೊಡವೆ ಮೇಲೆ ಲಿಂಬೆ ಹಣ್ಣು ಹಚ್ಚುವುದರಿಂದ ಉರಿಯುತ್ತದೆ. ಆದರೆ ಕಾಲಕ್ರಮೇಣ ಮೊಡವೆಗಳು ಕಡಿಮೆಯಾಗುತ್ತದೆ. ಇನ್ನು ಸೂಕ್ಷ್ಮವಾದ ಚರ್ಮ ಉಳ್ಳವರು ಲಿಂಬೆ ಹಣ್ಣು ಮೊಡವೆ ಮೇಲೆ ಹಚ್ಚಬೇಕೆಂದಿಲ್ಲ. ಇನ್ನು ಮೊಡವೆ ನಿವಾರಣೆಗೆ ಜಾಸ್ತಿ ನೀರು ಕುಡಿಯಲು ಅಭ್ಯಾಸ ಮಾಡಿಕೊಳ್ಳಲು ಬಯಸುವವರು ನೀರಿನ ಬದಲು ಲೆಮನ್ ಜ್ಯೂಸ್ ಕೂಡ ಕುಡಿಯಬಹುದು. ಇದರಿಂದ ದೇಹದ ಉಷ್ಣಾಂಶ ಸಮತೋಲನದಲ್ಲಿರುತ್ತದೆ.
ಅಡುಗೆ ಮನೆಯಲ್ಲಿ ಸಿಗುವ ಕಡ್ಲೆ ಹಿಟ್ಟಿನ ಬಗ್ಗೆಯೂ ಗಮನ ಇರಲಿ. ಫೇಸ್‌ವಾಶ್‌ಗಳನ್ನು ಮೊಡವೆಗಳ ಮೇಲೆ ಉಜ್ಜುವ ಬದಲು ಮುಖ ತೊಳೆಯಲು ಕಡ್ಲೆ ಹಿಟ್ಟನ್ನು ಬಳಸಿ. ಕಡ್ಲೆ ಹಿಟ್ಟಿನಿಂದ ನಯವಾಗಿ ಉಜ್ಜಿ ಉಗುರು ಬೆಚ್ಚಿಗಿನ ನೀರಿನಿಂದ ತೊಳೆಯವ ಅಭ್ಯಾಸವನ್ನು ರೂಢಿಸಿಕೊಳ್ಳಿ, ಈ ಅಭ್ಯಾಸದಿಂದ ದಿನ ಕಳೆದಂತೆ ಮೊಡವೆಗಳು ಕಡಿಮೆಯಾಗುತ್ತದೆ.
ಆರೋಗ್ಯ ಕಾಪಾಡುವ ಅರಶಿನವನ್ನು ನೀರಿನೊಂದಿಗೆ ಕಲುಹಿಸಿ ಮೊಡವೆಗಳ ಮೇಲೆ ಲೇಪಿಸುವುದರಿಂದ ಮೊಡವೆಗಳು ಕಡಿಮೆಯಾಗುತ್ತದೆ.
ಅಲೋವೇರಾ ಗಿಡ ಚಿಕ್ಕದಾಗಿ ಕಂಡರೂ ಇದರ ಔಷಧೀಯ ಗುಣಗಳು ಮಾತ್ರ ಹೇಳತೀರದು. ಅನೇಕ ಕಾಯಿಲೆಗಳಿಗೆ ಔಷಧವಾಗಿರುವ ಅಲೋವೇರಾ ಮೊಡವೆಗೆ ರಾಮಬಾಣ. ಯಾವುದೇ ಇತರ ವಸ್ತುಗಳನ್ನು ಮಿಶ್ರಣ ಮಾಡದೇ ಅಲೋವೇರಾ ಲೋಳೆಯನ್ನು ಪ್ರತಿ ನಿತ್ಯ ಮುಖಕ್ಕೆ ಹಚ್ಚುವುದರಿಂದ ಮೊಡವೆಗಳು ಕಡಿಮೆಯಾಗುತ್ತದೆ.
ಒಬ್ಬ ಆರೋಗ್ಯವಂತ ವ್ಯಕ್ತಿ ದಿನಕ್ಕೆ 2-3 ಲೀಟರ್ ನೀರನ್ನು ಕುಡಿಯಬೇಕು. ಇನ್ನು ಮುಖದಲ್ಲಿ ಮೊಡವೆ ಇರುವವರು ಹೆಚ್ಚಾಗಿ ನೀರು ಕುಡಿಯುದರಿಂದ ದೇಹದ ಉಷ್ಣತೆಯನ್ನು ಸಮತೋಲದಲ್ಲಿ ಇರಿಸಿ ಮೊಡವೆಗಳು ಕಡಿಮೆ ಮಾಡಲು ನೆರವಾಗುತ್ತದೆ. ಇನ್ನು ಆಗಾಗ ಶುದ್ಧ ನೀರಿನಿಂದ ಮುಖ ತೊಳೆಯವುದು ಮೊಡವೆಗಳ ನಿವಾರಣೆಗೆ ಸಿಂಪಲ್ ಆದ ಪರಿಹಾರ.
ಮೆಂತೆ ಸೊಪ್ಪನ್ನು ನೆನೆಸಿ ಮುಖಕ್ಕೆ ಹಚ್ಚಿಕೊಳ್ಳಿ ಮತ್ತು ಇದನ್ನು ಒಣಗಲು ಬಿಡಿ ಮತ್ತು ಸ್ವಲ್ಪ ಹೊತ್ತಿನ ನಂತರ ತೊಳೆಯಿರಿ. ಸ್ವಲ್ಪ ದಿನಗಳವರೆಗೆ ಇದನ್ನು ಅನುಸರಿಸಿ ಇದರಿಂದ ಮೊಡವೆಗಳು ಮಾಯವಾಗುತ್ತವೆ ಮತ್ತು ಚರ್ಮವನ್ನು ಮೃದುವಾಗಿಸುತ್ತದೆ.
ಮೊಡವೆ ಆದಾಗ ಮಸಾಜ್ ಮಾಡಿ ಇದು ಮೊಡವೆ ಕಲೆಗಳನ್ನು ಕಡಿಮೆ ಮಾಡಿ ಮೊಡವೆಯನ್ನು ಹೊರಹಾಕಲು ಸಹಾಯ ಮಾಡುತ್ತವೆ.
ಜೇನಿನ ಸಿಹಿ ನಿಮ್ಮ ದಿನವನ್ನು ಹೊಳೆಯುವಂತೆ ಮಾಡಬಹುದು,ಹಾಗೆಯೇ ಜೇನು ನಿಮ್ಮ ಮುಖವನ್ನು ಕೂಡ ಹೊಳೆಯುವಂತೆ ಮಾಡುತ್ತದೆ. ಜೇನನ್ನು ಮುಖಕ್ಕೆ ಮತ್ತು ಕಲೆಗಳಿಗೆ ಹಚ್ಚಿ ಇದರಿಂದ ನಿಮ್ಮ ಮುಖ ಹೊಳೆಯುತ್ತದೆ ಮತ್ತು ನೀವು ಯಂಗ್ ಆಗಿ ಕಾಣಿಸುವಿರಿ.