ವಿಜಯನಗರ: ರಾಜ್ಯದಲ್ಲಿ ತುಘಲಕ್ ದರ್ಬಾರ್ ಸರ್ಕಾರ ಆಡಳಿದಲ್ಲಿದೆ ಎಂದು ಸೋಮವಾರ ಮಾಜಿ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಜಂಗಲ್ ರಾಜ್ಯ ಮಾಡಲು ಹೊರಟಿದೆ. ರಾಜ್ಯದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲದಂತಾಗಿದೆ. ಇದರಿಂದಾಗಿ ಮಹಿಳೆಯರು ನಿರ್ಭಯದಿಂದ ಓಡಾಡಲು ಭಯ ಪಡುವಂತಾಗಿದೆ ಎಂದು ಸಚಿವ ಶ್ರೀರಾಮುಲು ತಿಳಿಸಿದರು.
ಕಾನುನು ಸುವ್ಯವಸ್ಥೆ ಸಂಪೂರ್ಣವಾಗಿ ರಾಜ್ಯದಲ್ಲಿ ಹದಗೆಟ್ಟಿದೆ, ಈ ಕೊಲೆ ಪ್ರಕರಣವನ್ನು ಸರ್ಕಾರ ಈ ಕೂಡಲೆ ಸಿಬಿಐಗೆ ವಹಿಸಬೇಕು. ಮೊನ್ನೆ ತಾನೆ ಗದಗದಲ್ಲಿ ನಾಲ್ವರನ್ನು ಹತ್ಯೆ ಮಾಡಲಾಯಿತು ಎಂದರು.
ಬೆಂಗಳೂರಿನಲ್ಲೇ ಜೋಡಿ ಕೊಲೆ ,ಬೀದರನಲ್ಲಿಯೂ ಹತ್ಯೆಯಾಗುತ್ತೆ, ಈ ಸರ್ಕಾರದಲ್ಲಿ ಸಾರ್ವಜನಿಕರಿಗೆ ರಕ್ಷಣೆಯೆ ಇಲ್ಲದಂತಾಗಿದೆ, ಗೃಹ ಮಂತ್ರಿಗಳು ನೈತಿಕ ಹೊಣೆ ಹೊತ್ತು ಕೂಡಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ನೇಹ ಹಿರೇಮಠ್ ಕೊಲೆ ಪ್ರಕರಣ ಸೇರಿದಂತೆ ರಾಜ್ಯದಲ್ಲಿನ ಅರಾಜುಕತೆ ಸೃಷ್ಟಿಯಾಗಿದೆ ಈ ಬಗ್ಗೆ ರಾಜ್ಯಪಾಲರ ಬಳಿ ನಿಯೋಗ ಕರೆದುಕಂಡು ಹೋಗುತ್ತೆವೆ ಎಂದು ಶ್ರೀರಾಮುಲು ಹೇಳಿದರು.