ಗದಗ: ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚೆನ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವರಾದ ಡಾ.ಎಚ್.ಕೆ.ಪಾಟೀಲ ಅವರು ಗುರುವಾರ ಸಾಯಂಕಾಲ ಪಾಪನಾಶಿ ಹತ್ತಿರದ ನಿಯೋಜಿತ ಕುಡಿಯುವ ನೀರಿನ ಕೆರೆ ನಿರ್ಮಾಣದ ಸ್ಥಳ ವೀಕ್ಷಿಸಿದರು.

ಗದಗ-ಬೆಟಗೇರಿ ಅವಳಿ ನಗರಕ್ಕೆ ಸಮರ್ಪಕ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಬೃಹತ ಕೆರೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಇದರಿಂದ ಅವಳಿ ನಗರದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಲಿದೆ. ಕೆರೆ ನಿರ್ಮಾಣ ಮಾಡಿ ತುಂಗಭದ್ರ ನದಿಯ ನೀರನ್ನು ಕೆರೆಗೆ ತುಂಬಿಸಿ ಅದರಿಂದ ಅವಳಿ ನಗರಕ್ಕೆ ನೀರು ನೀಡುವ ಯೋಜನೆ ಇದಾಗಿದೆ. ಇದನ್ನು ಇಂದು ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳ ಪರಿಶೀಲಿಸಿ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದರು. ಈ ಕೆರೆ ನಿರ್ಮಾಣವಾದ್ರೆ ಗದಗ ಬೆಟಗೇರಿ ಜನ ನೀರಿನ ಬರದಿಂದ ದೂರ ಉಳಿದು ಹೆಚ್ ಪಾಟೀಲ್ ರನ್ನ ಭಗೀರಥನಂತೆ ಭಾವಿಸೋದ್ರಲ್ಲಿ ಯಾವ ಅನುಮಾನವೂ ಇಲ್ಲ.