ಬೆಂಗಳೂರು: ನೀವು ಮನೆಯಲ್ಲೇ ಕುಳಿತು ಲಕ್ಷ ಲಕ್ಚ ಸಂಪಾದನೆ ಮಾಡ್ಬೇಕಾ.? ಸಿಂಪಲ್ ನಿಮ್ಮ ಬಳಿ ಸ್ಮಾರ್ಟ್ ಫೋನ್ ಇದ್ರೆ ಸಾಕು ನಾವು ನಿಮ್ಮನ್ನ ಶ್ರೀಮಂತರಾಗಿಸುತ್ತೇವೆ ಅಂತ ಕತೆ ಶುರು ಮಾಡುವ ಅನೈತಿಗಳ ಬಗ್ಗೆ ಇರಲಿ ಎಚ್ಚರ ನೆಟ್ ಬಳಸುವ ನಾಗರಿಕರೇ. ಪಕ್ಸಟ್ಟೆ ಗಂಡ ಹೊಟ್ಟೆ ತುಂಬಾ ಉಂಡಾ ಅನ್ನೊ ಗಾದೆ ಮಾತಿನಂತೆ, ಕುಳಿತಲ್ಲಿಯೇ ಕಷ್ಟಾನೆ ಪಡೆದೆ ಲಕ್ಷ ಲಕ್ಷ ಸಂಪಾದನೆ ಮಾಡೋ ಆಸೆಗೆ ಬಿದ್ದ, ನಿರುದ್ಯೋಗಿಗಳು ಹಾಗೂ ಸದಾ ನೆಟ್ ಬಳಸುವ ಕಾಲೇಜು ವಿದ್ಯಾರ್ಥಿಗಳ ಟಾರ್ಗೆಟ್ ಮಾಡಿಕೊಂಡ ಸೈಬರ್ ವಂಚಕರು ಕಾಯುತ್ತಿದ್ದಾರೆ. ಇವರ ಮಾತಿಗೆ ಮರುಳಾದ್ರೆ ಕಂಬಿಯಿಂದೆ ನೀವು ಮುದ್ದೆ ಮುರಿಯುವ ಸಾಧ್ಯತೆಗಳು ಹೆಚ್ಚಾಗಿವೆ ಅಷ್ಟಕ್ಕು ಅದು ಹೇಗೆ ಅಂತಿರಾ ಈ ಸ್ಟೋರಿ ಸಂಪೂರ್ಣವಾಗಿ ಓದಿ ನಿಮಗೆ ಗೊತ್ತಾಗುತ್ತದೆ.
ಕುಳಿತಲ್ಲೇ ಚಂದ್ರ ಲೋಕ ತೋರಿಸಿ; ಕಂಬಿ ಹಿಂದೆ ತಳ್ಳುತ್ತಾರೆ ಎಚ್ಚರ
ಸ್ಮಾರ್ಟ್ ಫೋನ್ ಬಳಸುವ ಕಾಲೇಜು ವಿದ್ಯಾರ್ಥಿಗಳು ಹಾಗೂ ನಿರೋದ್ಯೋಗಿಗಳು ಸೈಬರ್ ವಂಚಕರ ಕೈಯಲ್ಲಿ ತಮಗೆ ಗೊತ್ತಿಲ್ಲದಂತೆ ಸಿಲುಕಿ ಕೊಳ್ಳುತ್ತಿದ್ದಾರೆ. ಟೆಲಿಗ್ರಾಂ, ಫೇಸ್ ಬುಕ್ ಇತ್ಯಾದಿ ಆಪ್ ಗಳ ಮೂಲಕ ನಿಮ್ಮನ್ನ ಸಂಪರ್ಕ ಮಾಡುವ ಖಧಿಮರು, ಆನ್ ಲೈನ್ ಜಾಬ್ ಮನೆಯಿಂದ ಕೆಲಸ ಮಾಡಿ, ಪಾರ್ಟ್ ಟೈಮ್ ಜಾಬ್ ಅಂತ ಗ್ರೂಪ್ ಕ್ರಿಯೇಟ್ ಮಾಡಿ ನಿಮ್ಮನ್ನ ಈ ಖೆಡ್ಡಾಗೆ ಬೀಳಿಸ್ತಾರೆ. ಮುಖ್ಯವಾಗಿ ಟೆಲಿಗ್ರಾಮ್ ಆ್ಯಪ್ ಬಳಸುವವರೇ ಕೊಂಚ ಎಚ್ಚರಿಕೆ, ನೀವು ಈ ಆ್ಯಪ್ ಬಳಸ್ತಿದ್ರೆ ಮಾಡ್ತಿದ್ರೆ, ಈಗಲೇ ಒಮ್ಮೆ ಚೆಕ್ ಮಾಡಿಕೊಳ್ಳಿ.
ಕೆಲಸ ಸಿಂಪಲ್ ತಗ್ಲಾಕೊಂಡ್ರೆ ಮಾತ್ರ ಅಂದರ್.!
ಇನ್ನು ವಂಚಕರು ಇಂತಹ ಆ್ಯಪ್ ಗಳನ್ನು ಬಳಸಿ ಅವರು ಹೇಳುವ ಕೆಲಸ ಮಾತ್ರ ಸಿಂಪಲ್, ನಿಮ್ಮ ಅಕೌಂಟ್ ಗೆ ಒಂದಷ್ಟು ಹಣವನ್ನು ಹಾಕ್ತಾರೆ, ಬಳಿಕ ಅದನ್ನ ಅವರಿಗೆ ಬೃಕಾಗಿರಿವಂತಹ ಅನ್ನೋ ಅಕೌಂಟ್ ಗಳಿಗೆ ವರ್ಗಾವಣೆ ಮಾಡಲು ಹೇಳ್ತಾರೆ.
ಅದಕ್ಕೆ ನಿಮಗೆ ಅವರು ಇಂತಿಷ್ಟು ಅಂತ ಕಮಿಷನ್ ಕೂಡ ಕೊಡ್ತಾರೆ. ಆದ್ರೆ ಒಂದು ವಿಷ್ಯ ಬರುತ್ತೆ ಅಂತ ಗೊತ್ತಾ.? ಇದು ಪಕ್ಕಾ ಸೈಬರ್ ವಂಚಕರ ಫ್ರಾಡ್ ಕೆಲಸಗಳಿಂದ. ಈ ಹಣವನ್ನ ನಿಮ್ಮ ಖಾತೆಗಳ ಮೂಲಕ ಅವರು ತಮ್ಮ ಅಕೌಂಟ್ ಗಳಿಗ ವರ್ಗಾವಣೆ ಮಾಡಿಕೊಳ್ತಾರೆ. ಅದಕ್ಕೆ ಅವರು ನಿಮ್ಮನ್ನ ಉಪಯೋಗಿಸಿಕೊಳ್ತಾರೆ. ಸದ್ಯ ಈ ರೀತಿ ವಂಚನೆ ಪ್ರಕರಣವನ್ನ ಬೆಂಗಳೂರಿನ ಕೇಂದ್ರ ವಿಭಾಗದ ಸೆನ್ ಇನ್ಸ್ಪೆಕ್ಟರ್ ಸುರೇಶ್ ಮತ್ತು ಅವರ ತಂಡ ಪತ್ತೆ ಮಾಡಿದ್ದು, ಮೈಸೂರು ಮೂಲದ ಒಬ್ಬ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಮುಂದಾಗಿದ್ದಾರೆ. ಅದೇನೆ ಇರ್ಲಿ ಕಾನೂನು ತನ್ನಪಾಡಿಗೆ ತಾನು ಕೆಲಸ ಮಾಡುತ್ತಾ ನಯವಂಚಕರಿಗೆ ಬುದ್ಧಿಕಲಿಸುತ್ತೆ ಆದ್ರೆ ಸುಖಾ ಸುಮ್ಮನೆ ನಿಮ್ಮದಲ್ಲದ ತಪ್ಪಿಗೆ ನೀವು ಇಂತಹ ವಂಚಕರ ಸಿಲುಕಿ, ಕಾನೂನಿ ಸಂಕಷ್ಟಕ್ಕೆ ಸಿಲುಕಿ ನರಳಾಡುವಂತಾಗದಿರಲು ಖಂಡಿತ ಕೊಂಚ ಎಚ್ಚರವಹಿಸಿ ಅನ್ನೋದೆ ನಮ್ಮ ಆಶಯ.



