Saturday, August 30, 2025
20.5 C
Bengaluru
Google search engine
LIVE
ಮನೆ#Exclusive NewsTop Newsತನ್ನ ಪಕ್ಷದ ಚಿಹ್ನೆ ಮತ್ತು ಧ್ವಜವನ್ನು ಪರಿಚಯಿಸಿದ ದಳಪತಿ ವಿಜಯ್

ತನ್ನ ಪಕ್ಷದ ಚಿಹ್ನೆ ಮತ್ತು ಧ್ವಜವನ್ನು ಪರಿಚಯಿಸಿದ ದಳಪತಿ ವಿಜಯ್

2026ರಲ್ಲಿ ತಮಿಳುನಾಡನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೂ ಮುನ್ನ ಅಲ್ಲಿನ ರಾಜಕೀಯ ರಂಗದಲ್ಲಿ ಮಹತ್ವದ ಬೆಳವಣಿಗೆಯಾಗಿದೆ.ಈ ಹಿಂದೆ ರಾಜಕೀಯಕ್ಕೆ ಎಂಟ್ರಿ ಕೊಡೋದಾಗಿ ಹೇಳಿದ್ದ ದಳಪತಿ ವಿಜಯ್,ಇದೀಗ ಅಧಿಕೃತವಾಗಿ ಪಾಲಿಟಿಕ್ಸ್‌ಗೆ ಎಂಟ್ರಿ ಕೊಟ್ಟಿದ್ದಾರೆ.ನಟ ವಿಜಯ್ ಅವರು ತಮಿಳಗ ವೇಟ್ರಿ ಕಳಗಂ ಪಕ್ಷವನ್ನು ಸ್ಥಾಪಿಸಿದ್ದು,ಈ ನೂತನ ಪಕ್ಷದ ಚಿಹ್ನೆ ಮತ್ತು ಧ್ವಜವನ್ನು ಇಂದು ತಮ್ಮ ಪಕ್ಷದ ಮುಖ್ಯ ಕಚೇರಿಯಲ್ಲಿ ಪರಿಚಯಿಸಿದರು. ಕಡುಗೆಂಪು ಮತ್ತು ಹಳದಿ ಬಣ್ಣದ ಧ್ವಜವು ಎರಡು ಆನೆಗಳ ನಡುವೆ ವಾಗ್ಟೈಲ್ ಅನ್ನು ಒಳಗೊಂಡಿದೆ.

ಪಕ್ಷದ ಚಿಹ್ನೆ ಮತ್ತು ಧ್ವಜವನ್ನು ಅನಾವರಣಗೊಳಿಸಿದ ಬಳಿಕ ಪಣಯೂರಿನ ಸಪಕ್ಷದ ಕಚೇರಿಯಲ್ಲಿ ನಟ ಹಾಗೂ ತಮಿಳಗ ವೇಟ್ರಿ ಕಳಗಂ ಪಕ್ಷದ ಮುಖ್ಯಸ್ಥ ವಿಜಯ್ ಅವರು ಪಕ್ಷದ ಧ್ವಜಾರೋಹಣ ಮಾಡಿದರು.ಈ ವರ್ಷದ ಫೆಬ್ರವರಿಯಲ್ಲಿ ನಟ ದಳಪತಿ ವಿಜಯ್ ಅವರು ರಾಜಕೀಯ ಪಕ್ಷವನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದರು. ಇದೀಗ ಅಧಿಕೃತವಾಗಿ ರಾಜಕೀಯಕ್ಕೆ ಎಂಟ್ರಿ ಕೊಡುವ ಮೂಲಕ 2026ರಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments