
ರಾಜ್ಯದ ವಿವಿಧೆಡೆ ಗಣೇಶೋತ್ಸವ ಮತ್ತು ಈದ್ ಮಿಲಾದ್ ಆಚರಣೆ ವೇಳೆ ಗಲಾಟೆ ಗದ್ದಲಗಳು ನಡೆದಿವೆ. ಇದೆ ಸಂದರ್ಭದಲ್ಲಿ ನಾಳೆ(ಸೆ.28) ಕೋಟೆನಾಡು ಚಿತ್ರದುರ್ಗದಲ್ಲಿ ಹಿಂದೂ ಮಹಾಗಣಪತಿ ಶೋಭಾಯಾತ್ರೆ ಮತ್ತು ವಿಸರ್ಜನೆ ನಡೆಯುತ್ತಿದೆ. ಗಣೇಶನ ಮೆರವಣಿಗೆಯಲ್ಲಿ ಲಕ್ಷಾಂತರ ಜನ ಭಾಗಿ ಆಗಲಿದ್ದು ದುರ್ಗ ಮದುವಣಗಿತ್ತಿಯಂತೆ ಅಲಂಕೃತಗೊಂಡಿದೆ. ಜೊತೆಗೆ ಪೊಲೀಸರು ಕೂಡ ಹೈ ಅಲರ್ಟ ಆಗಿದ್ದಾರೆ. ಈ ಕುರಿತು ವರದಿ ಇಲ್ಲಿದೆ.
ಚಿತ್ರದುರ್ಗ, ಸೆ.27: ಚಿತ್ರದುರ್ಗ(Chitradurga) ನಗರದ ಜೈನಧಾಮದಲ್ಲಿ ಭಜರಂಗದಳ ಮತ್ತು ವಿಶ್ವಹಿಂದೂ ಪರಿಷತ್ ನೇತೃತ್ವದಲ್ಲಿ ಹಿಂದೂ ಮಹಾಗಣಪತಿ ಪ್ರತಿಷ್ಠಾಪಿಸಲಾಗಿದೆ. ನಾಳೆ(ಸೆ.28) ಹಿಂದೂ ಮಹಾಗಣಪತಿ ಶೊಭಾಯಾತ್ರೆ ಮತ್ತು ವಿಸರ್ಜನೆ ಆಯೋಜಿಸಲಾಗಿದೆ. ಪ್ರತಿ ವರ್ಷದಂತೆ ನಾಳೆಯೂ ಐದಾರು ಲಕ್ಷ ಜನ ಗಣಪತಿಯ ಮೆರವಣಿಗೆಯಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ. ಜೊತೆಗೆ ನಿರಾತಂಕದಿಂದ ಭಕ್ತರು ಗಣೇಶೊತ್ಸವದಲ್ಲಿ ಭಾಗಿ ಆಗಬೇಕೆಂದು ಆಯೋಜಕರು ಹೇಳಿದ್ದಾರೆ.
ರೂಟ್ ಮ್ಯಾಪ್ ಇಲ್ಲಿದೆ
ಸೆ.28ರಂದು ಚಿತ್ರದುರ್ಗ ನಗರದ ಬಿ. ಡಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿರ್ಭಂಧಿಸಲಾಗಿದೆ. ಚಿತ್ರದುರ್ಗ ನಗರದ ಹೊರವಲಯದ ಬೈಪಾಸ್ ರಸ್ತೆಗಳ ಮೂಲಕ ಸಂಚರಿಸಲು ಸೂಚಿಸಲಾಗಿದೆ. ಅಂತೆಯೇ ಬಿ ಡಿ ರಸ್ತೆ ಉದ್ದಕ್ಕೂ ವಾಹನಗಳಿಗೆ ಎಂಟ್ರಿ ನೀಡದಂತೆ ಬ್ಯಾರಿಕೇಡ್ಗಳನ್ನು ನಿರ್ಮಾಣ ಮಾಡಲಾಗಿದೆ.


