ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ಗೆ ಜೀವ ಭಯ ಕಾಡುತ್ತಿದ್ಯಾ..? ಈ ಪ್ರಶ್ನೆ ಯಾಕೆಂದರೆ ಅವರ ಹಿಂದೆ ಇರುವ ನೂರಾರು ಪೊಲೀಸರ ಭದ್ರತೆಯೇ ಕಾರಣ.. ಮಾತಿನ ಮಲ್ಲ ಪ್ರದೀಪ್ ಈಶ್ವರ್ಗೆ ಈಗ ಹೋದಲ್ಲಿ ಬಂದಲ್ಲೆಲ್ಲಾ ಪೊಲೀಸರು ಹೈ ಸೆಕ್ಯೂರಿಟಿ ಕೊಡ್ತಿದ್ದಾರೆ.
ಚಿಕ್ಕಬಳ್ಳಾಪುರದ ಜರಬಂಡಹಳ್ಳಿ ಸೇರಿದಂತೆ ಹಲವು ಗ್ರಾಮಗಳಿಗೆ ಶಾಸಕ ಪ್ರದೀಪ್ ಈಶ್ವರ್ ಭೇಟಿ ನೀಡಿದ್ದರು. ಆದ್ರೆ ಈ ವೇಳೆ ಅವರ ಹಿಂದೆ ಬೆಂಬಲಿಗರಿಗಿಂತಲೂ ಹೆಚ್ಚಾಗಿ ಪೊಲೀಸರೇ ಕಂಡುಬಂತು. ಪ್ರದೀಪ್ ಈಶ್ವರ್ ಅವ್ರಿಗೆ ಭದ್ರತೆಯಾಗಿ ಇಡೀ ಚಿಕ್ಕಬಳ್ಳಾಪುರದ ಪೊಲೀಸರ ಭದ್ರಕೋಟೆಯೇ ನಿರ್ಮಾಣವಾಗಿದೆ.
ಶಾಸಕರ ವಿರುದ್ಧವೇ ಚಿಕ್ಕಬಳ್ಳಾಪುರ ಕಾಂಗ್ರೆಸ್ನಲ್ಲಿ ಅಸಮಾಧಾನ ಇದೆ. 3 ದಿನದ ಹಿಂದಷ್ಟೇ ಅಸಮಾಧಾನಿತರ ಗುಂಪು ಗೌಪ್ಯ ಸಭೆ ನಡೆಸಿತ್ತು. ಈಗ ಪ್ರದೀಪ್ ಈಶ್ವರ್ಗೆ ಮುತ್ತಿಗೆ ಹಾಕುವ ಸಾಧ್ಯತೆಗಳೂ ಇವೆ.
ಇದರ ಜೊತೆಗೆ ಮಾರ್ಚ್ನಲ್ಲಿ ನಡೆದಿದ್ದ ಕೈವಾರ ತಾತಯ್ಯ ಜಯಂತಿ ಕಾರ್ಯಕ್ರಮದಲ್ಲಿ ಬಿಜೆಪಿಗರ ವಿರುದ್ಧ ಪ್ರದೀಪ್ ಈಶ್ವರ್ ಬಾಯಿಗೆ ಬಂದಂತೆ ಮಾತನಾಡಿದ್ದರು. ಕೈವಾರ ತಾತಯ್ಯನ ಕಾರ್ಯಕ್ರಮ ನಿಮ್ಮಪ್ಪನದ್ದಲ್ಲ ಅಂತ ಬಿಜೆಪಿಗರಿಗೆ ನೇರವಾಗಿ ಟಾಂಗ್ ಕೊಟ್ಟಿದ್ದರು. ಇದು ಬಿಜೆಪಿ ಆಕ್ರೋಶಕ್ಕೂ ಕಾರಣವಾಗಿತ್ತು..
ಪ್ರದೀಪ್ ಈಶ್ವರ್ ಮಾತಿನ ಚಾಳಿಯೇ ಅವರಿಗೆ ಕಂಟಕವಾದಂತಿದೆ. ಬರೀ ಮಾತು ಮಾತು ಮಾತು.. ಕೆಲಸಕ್ಕಿಂತಲೂ ಪ್ರದೀಪ್ ಈಶ್ವರ್ ಡೈಲಾಗ್ಗಳೇ ಜಾಸ್ತಿ ಆಗಿದ್ವು. ಇದು ಚಿಕ್ಕಬಳ್ಳಾಪುರ ಮತದಾರರ ಆಕ್ರೋಶಕ್ಕೂ ಕಾರಣವಾಗಿದೆ. ಹೀಗಾಗಿ ಪ್ರದೀಪ್ ಈಶ್ವರ್ಗೆ ಹೋದಲ್ಲಿ ಬಂದಲ್ಲಿ ಪ್ರತಿಭಟನೆ, ಮುತ್ತಿಗೆ ಹೆಚ್ಚಾಗುವ ಸಾಧ್ಯತೆಗಳಿದೆ. ಅಲ್ಲದೆ ದೈಹಿಕ ಹಲ್ಲೆ, ಮೊಟ್ಟೆ ಎಸೆತದಂತ ಘಟನೆಗಳೂ ನಡೆಯಬಹುದು ಎನ್ನುವ ಕಾರಣಕ್ಕೆ ಪ್ರದೀಪ್ ಈಶ್ವರ್ ಸುತ್ತಲೇ ಪೊಲೀಸರ ದಂಡು ಸುತ್ತುತ್ತಿದೆ.