ಭಾರತ ಮತ್ತು ಬಾಂಗ್ಲಾದೇಶ್ ನಡುವಣ 5 ಪಂದ್ಯಗಳ ಸರಣಿ ಮುಕ್ತಾಯಗೊಂಡಿದೆ. ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿದ್ದ ಟೀಮ್ ಇಂಡಿಯಾ ಟಿ20 ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಆಗಿ ಮಾಡಿಕೊಂಡಿದೆ. ಈ ಎರಡು ಸರಣಿಗಳಲ್ಲಿ ಬಾಂಗ್ಲಾ ವಿರುದ್ಧ ಪಾರುಪತ್ಯ ಮೆರೆದಿರುವ ಭಾರತ ತಂಡವು ಇದೀಗ ನ್ಯೂಝಿಲೆಂಡ್ ವಿರುದ್ಧದ ಪಂದ್ಯಗಳಿಗೆ ಸಜ್ಜಾಗಬೇಕಿದೆ.
ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಟೆಸ್ಟ್ ಸರಣಿಯು ಅಕ್ಟೋಬರ್ 16 ರಿಂದ ಶುರುವಾಗಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ ಮೂರು ಪಂದ್ಯಗಳನ್ನಾಡಲಿದೆ. ಇದಾದ ಬಳಿಕ ಭಾರತ ಮತ್ತು ಸೌತ್ ಆಫ್ರಿಕಾ ನಡುವೆ ಟಿ20 ಸರಣಿ ನಡೆಯಲಿದೆ. ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಮುಕ್ತಾಯದ ಬೆನ್ನಲ್ಲೇ ಆಸ್ಟ್ರೇಲಿಯಾ ಹಾಗೂ ಭಾರತ ನಡುವಣ ಪ್ರತಿಷ್ಠಿತ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿ ಶುರುವಾಗಲಿದೆ. ಈ ಎಲ್ಲಾ ಸರಣಿಗಳ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ…
ಭಾರತ vs ನ್ಯೂಝಿಲೆಂಡ್ ಸರಣಿ:
ಅಕ್ಟೋಬರ್-ನವೆಂಬರ್ನಲ್ಲಿ ಭಾರತ ತಂಡವು ನ್ಯೂಝಿಲೆಂಡ್ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಭಾರತದಲ್ಲಿ ಜರುಗಲಿರುವ ಈ ಸರಣಿಯ ವೇಳಾಪಟ್ಟಿ ಇಲ್ಲಿದೆ. ಇನ್ನು ಭಾರತ ಮತ್ತು ನ್ಯೂಝಿಲೆಂಡ್ ಟೆಸ್ಟ್ ವೇಳಾಪಟ್ಟಿಯಲ್ಲಿ ಮೊದಲನೇ ಟೆಸ್ಟ್ ಇದೇ ತಿಂಗಳು 16ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಾಣದಲ್ಲಿ ನಡಯಲಿದೆ. ಎರಡನೇ ಟೆಸ್ಟ್ ಸರಣಿಯು ಅಕ್ಟೋಬರ್ 24ರಂದು ಪುಣೆಯಲ್ಲಿ ನಡೆಯಲಿದೆ. ಇನ್ನು ಭಾರತ ಮತ್ತು ನ್ಯೂಝಿಲೆಂಡ್ ನಡುವೆ ನಡೆಯುವ ಈ ವರ್ಷದ ಕೊನೆಯ ಟೆಸ್ಟ್ ಸರಣಿಯು ನವೆಂಬರ್ 1ರಂದು ಮುಂಬೈಯಲ್ಲಿ ವಾಂಖೆಡೆ ಸ್ಟೇಡಿಯಂನಲ್ಲಿ ಎರಡು ಪಂದ್ಯಗಳು ಸೆಣೆಸಾಟ ಮಾಡಲಿವೆ.
ಭಾರತ vs ಸೌತ್ ಆಫ್ರಿಕಾ:
ಟಿ20 ವಿಶ್ವಕಪ್ನ ಫೈನಲಿಸ್ಟ್ಗಳಾದ ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳು ನವೆಂಬರ್ನಲ್ಲಿ ಮತ್ತೆ ಮುಖಾಮುಖಿಯಾಗಲಿದೆ. 4 ಟಿ20 ಪಂದ್ಯಗಳ ಈ ಸರಣಿಗೆ ಸೌತ್ ಆಫ್ರಿಕಾ ಆತಿಥ್ಯವಹಿಸಲಿದೆ. ವಿದೇಶದಲ್ಲಿ ಜರುಗಲಿರುವ ಪಂದ್ಯಗಳ ವೇಳಾಪಟ್ಟಿ. ಭಾರತ ಮತ್ತು ಸೌತ್ ಆಫ್ರಿಕಾ ನಡುವೆ ಮೊದಲನೇ ಟಿ20 ಸರಣಿಯು ನವೆಂಬರ್ 8ರಂದು ದಕ್ಷಿಣ ಆಫ್ರಿಕಾದ ಕ್ವಾಜುಲು-ನಟಾಲ್ನ ಡರ್ಬನ್ನಲ್ಲಿರುವ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಎರಡನೇ ಟಿ20 ಪಂದ್ಯಸರಣಿಯು ನವೆಂಬರ್ 10ರದು ಗ್ಕೆಬರ್ಹಾನಲ್ಲಿ ನಡೆಯಲಿದೆ. ಮೂರನೇ ಟಿ20 ಪಂದ್ಯವುಸರಣಿ ನವೆಂಬರ್ 13ರಂದು ಸೆಂಚುರಿಯನ್ನಲ್ಲಿ ನಡೆಯಲಿದೆ. ಇನ್ನು ಕೊನೆಯ ನಾಲ್ಕನೇ ಪಂದ್ಯವು ನವೆಂಬರ್ 15ರಂದು ಜೋಹಾನ್ಸ್ಬರ್ಗ್ರಂದು ನಡೆಯಲಿದೆ.
ಭಾರತ vs ಆಸ್ಟ್ರೇಲಿಯಾ ಸರಣಿ:
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಕೊನೆಯ ಟೆಸ್ಟ್ ಸರಣಿಯನ್ನು ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಆಡಲಿದೆ. ಕಾಂಗರೂಗಳ ನಾಡಿನಲ್ಲಿ ನಡೆಯಲಿರುವ ಈ ಸರಣಿಯಲ್ಲಿ ಒಟ್ಟು 5 ಟೆಸ್ಟ್ ಪಂದ್ಯಗಳನ್ನಾಡಲಾಗುತ್ತದೆ. ಈ ಸರಣಿಯ ವೇಳಾಪಟ್ಟಿ ಈ ಕೆಳಗಿನಂತಿದೆ. ಇದೇ ವರ್ಷದ ಕೊನೆಯಲ್ಲಿ ನಡೆಯುವ ಪಂದ್ಯಗಳಾಗಿದ್ದು, ಮೊದಲನೇ ಟೆಸ್ಟ್ ಸರಣಿಯು ಆಸ್ಟ್ರೇಲಿಯಾ vs ಭಾರತವು ನವೆಂಬರ್ 22ರಂದು ಪರ್ತ್ನಲ್ಲಿ ನಡೆಯಲಿದೆ. ಎರಡನೇ ಟೆಸ್ಟ್ ಸರಣಿಯು ಡಿಸೆಂಬರ್ 6ರಂದು ಅಡಿಲೇಡ್ನಲ್ಲಿ ನಡೆಯಲಿದೆ. ಮೂರನೇ ಟೆಸ್ಟ್ ಸರಣಿಯು ಡಿಸೆಂಬರ್ 14ರಂದು ಬ್ರಿಸ್ಬೇನ್ನಲ್ಲಿ ನಡೆಯಲಿದೆ. ನಾಲ್ಕನೇ ಟೆಸ್ಟ್ ಸರಣಿಯು ಡಿಸೆಂಬರ್ 24ರಂದು ಮೆಲ್ಬೋರ್ನ್ನಲ್ಲಿ ನಡೆಯಲಿದೆ. ಇನ್ನು ಕೊನೆಯ ಐದನೇ ಪಂದ್ಯವು 3 ಜನವರಿ 2025ರಂದು ಸಿಡ್ನಿಯಲ್ಲಿ ಅಂತಿಮ ಪಂದ್ಯವಾಗಿ ನಡೆಯಲ್ಲಿದೆ.
ಭಾರತ vs ಇಂಗ್ಲೆಂಡ್ ಸರಣಿ:
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯೊಂದಿಗೆ ಟೀಮ್ ಇಂಡಿಯಾ ಹೊಸ ವರ್ಷಕ್ಕೆ ಕಾಲಿಡಲಿದ್ದು, 2025 ರಲ್ಲಿ ಟೀಮ್ ಇಂಡಿಯಾ ತನ್ನ ಮೊದಲ ಸರಣಿಯಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಭಾರತದಲ್ಲಿ ಜರುಗಲಿರುವ ಈ ಸರಣಿಯಲ್ಲಿ ಟೀಮ್ ಇಂಡಿಯಾ 5 ಟಿ20 ಹಾಗೂ 3 ಏಕದಿನ ಪಂದ್ಯಗಳನ್ನಾಡಲಿದೆ. ಇನ್ನು ಭಾರತ ಮತ್ತು ಇಂಗ್ಲೆಂಡ್ ನಡುವೇ 5 ಟಿ20 ಪಂದ್ಯಗಳು ಜನವರಿ 22ರಿಂದ ಫೆಬ್ರವರಿ 2ರವರೆಗೆ ಪಂದ್ಯಗಳು ನಡಯಲಿವೆ. ಭಾರತ ಮತ್ತು ಇಂಗ್ಲೆಂಡ್ ನಡುವೆ ಏಕದಿನ ಪಂದ್ಯಗಳು ಫೆಬ್ರವರಿ 6ರಿಂದ 12ರವರೆಗೆ ನಡೆಯಲಿದೆ.
ಚಾಂಪಿಯನ್ಸ್ ಟ್ರೋಫಿ:
ಫೆಬ್ರವರಿ ಮೂರನೇ ವಾರದಿಂದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಶುರುವಾಗುವ ಸಾಧ್ಯತೆಯಿದ್ದು, ಈ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸಲಿವೆ. ಅಲ್ಲದೆ ಈ ಟೂರ್ನಿಯ ಬಳಿಕ ಭಾರತೀಯ ಆಟಗಾರರು ಐಪಿಎಲ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.