ಇಂದು ಕರ್ನಾಟಕದಾದ್ಯಂತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇವತ್ತು 16 ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುವ ಮುನ್ಸೂಚನೆ ವರದಿಯಾಗಿದೆ.
ಉಡುಪಿ, ಧಾರವಾಡ, ಹಾವೇರಿ, ಗದಗ, ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು, ಹಾಸನ,ಮಂಡ್ಯ, ತುಮಕೂರು, ಚಿಕ್ಕಬಳ್ಳಾಪುರ , ಮೈಸೂರು,ರಾಮನಗರ, ಬೆಂಗಳೂರು ನಗರ ಹಾಗೂ ಕೋಲಾರದಲ್ಲಿ ಮಳೆಯಾಗುತ್ತೆ ಎಂದು ಹವಮಾನ ವರದಿ ತಿಳಿಸಿದೆ..
ಏಪ್ರಿಲ್ 20, 21ರಂದು ರಾಜ್ಯದಲ್ಲಿ ಮತ್ತೆ ಭಾರೀ ಮಳೆಯಾಗುವ ಸಾಧ್ಯತೆ ಇದೆ .ಕರ್ನಾಟಕದಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.ಜನವರಿಯಿಂದ ಏಪ್ರಿಲ್ 17ರವರೆಗೆ ವಾಡಿಕೆ ಮಳೆ 26 ಮಿಲಿಮೀಟರ್ ಮಳೆಯಾಗುತ್ತಿತ್ತು..ಆದ್ರೆ ಈ ವರ್ಷದಲ್ಲಿ 45 ಮಿಲಿಮೀಟರ್ ಮಳೆಯಾಗಿದೆ..ಮಳೆ ಹೆಚ್ಚಾಗಿರುವ ಕಾರಣ 14 ಡ್ಯಾಂಗಳಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದೆ.ಕಳೆದ ವರ್ಷ 227 ಟಿಎಂಸಿ ನೀರು ಸಂಗ್ರಹಗೊಂಡಿತ್ತು.ಆದ್ರೆ ಈ ವರ್ಷ 328 ಟಿಎಂಸಿ ನೀರು ಸಂಗ್ರಹವಾಗಿದೆ.