Top News

12 ವರ್ಷಗಳ ಅವಧಿಯಲ್ಲಿ ಸಾರ್ವಕಾಲಿಕ ದಾಖಲೆ ಬರೆದ ನಮ್ಮ ಮೆಟ್ರೋ

ಬೆಂಗಳೂರು: ಲಾಲ್‌ಬಾಗ್ ಪುಷ್ಪ ಪ್ರದರ್ಶನ ಹಾಗೂ ಸಾಲು ಸಾಲು ರಜೆಯ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋದಲ್ಲಿ ಸಂಚರಿಸುವವರ ಸಂಖ್ಯೆ ಹೆಚ್ಚಾಗಿದೆ. ಒಂದೇ ದಿನದಲ್ಲಿ ಗರಿಷ್ಠ ಪ್ರಯಾಣಿಕರ ಸಂಖ್ಯೆ ದಾಖಲಾಗಿದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ನಿನ್ನೆ ಬುಧವಾರದಂದು ನಮ್ಮ ಮೆಟ್ರೋ ರೈಲಿನಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಪ್ರಯಾಣಿಕರು ಸಂಚಾರ ನಡೆಸಿದ್ದಾರೆ. ಬರೋಬ್ಬರಿ 9.17 ಲಕ್ಷ ಮಂದಿ ಸಂಚರಿಸಿದ್ದಾರೆ. ಇದು ಈವರೆಗಿನ ಅತಿ ಹೆಚ್ಚು ಪ್ರಯಾಣದ ಸಂಖ್ಯೆಯಾಗಿದ್ದು, ಸಾರ್ವಕಾಲಿಕ ದಾಖಲೆಯಾಗಿದೆ. ಮತ್ತೆ ಪ್ರಯಾಣಿಕರು ಕಳೆದ ಒಂದೆರೆಡು ತಿಂಗಳಿನಿಂದ ಕ್ರಮೇಣ ಹೆಚ್ಚಾಗುತ್ತಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ರಜಾದಿನ, ಪುಷ್ಪ ಪ್ರದರ್ಶನ ಹಾಗೂ ರಜೆಗಳಿರುವುದರಿಂದ ಪ್ರಯಾಣಿಕರು ಮತ್ತಷ್ಟು ಏರಿಕೆಯಾಗಿದ್ದಾರೆ ಎಂದು ಹೇಳಿದ್ದಾರೆ.

ಆಗಸ್ಟ್ 6ರಂದು ಒಂದೇ ದಿನದಂದು 8.26 ಲಕ್ಷ ಜನರು ಪ್ರಯಾಣಿಸಿರುವುದು ಈವರೆಗಿನ ದಾಖಲೆಯಾಗಿತ್ತು. ಇದೀಗ ಒಂದೇ ವಾರದಲ್ಲಿ ಆ ದಾಖಲೆ ಮುರಿಯಲಾಗಿದೆ. ಇದು ಮೆಟ್ರೋ ಆರಂಭವಾದ ಕಳೆದ ಸುಮಾರು 12 ವರ್ಷಗಳ ಸಾರ್ವಕಾಲಿಕ ದಾಖಲೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ

Comments (0)

Your email address will not be published. Required fields are marked *

Back to top button