Tuesday, January 27, 2026
26.7 C
Bengaluru
Google search engine
LIVE
ಮನೆವೈರಲ್ ನ್ಯೂಸ್ಸೇನಾ ಶ್ವಾನಕ್ಕೆ ಆತ್ಮೀಯ ಬೀಳ್ಕೊಡುಗೆ : ನಿವೃತ್ತಿಯ ಬಳಿಕ ಎಸಿ ಕೋಚ್‌ನಲ್ಲಿ ಪ್ರಯಾಣ

ಸೇನಾ ಶ್ವಾನಕ್ಕೆ ಆತ್ಮೀಯ ಬೀಳ್ಕೊಡುಗೆ : ನಿವೃತ್ತಿಯ ಬಳಿಕ ಎಸಿ ಕೋಚ್‌ನಲ್ಲಿ ಪ್ರಯಾಣ

ಶ್ವಾನಗಳು ಮನುಷ್ಯರ ನೆಚ್ಚಿನ ಗೆಳೆಯರು. ನಿಯತ್ತಿಗೆ ಹೆಸರಾದ ಈ ಮುದ್ದು ಪ್ರಾಣಿಗಳು ಬರೀ ಮನೆಯನ್ನಷ್ಟೇ ಕಾಯುವುದಲ್ಲ. ದೇಶದ ಸೇವೆಯೂ ಮಾಡುತ್ತವೆ. ದೇಶದ ವಿವಿಧ ಭದ್ರತಾ ವಿಭಾಗಗಳಲ್ಲೂ ಶ್ವಾನಗಳು ಕರ್ತವ್ಯ ನಿರ್ವಹಿಸುತ್ತವೆ. ಪ್ರಮುಖವಾಗಿ ಪೊಲೀಸ್ ಹಾಗೂ ಸೈನ್ಯದಲ್ಲಿ ಶ್ವಾನಗಳ ಸೇವೆಯೂ ಪ್ರಮುಖವಾಗುತ್ತದೆ. ಮನುಷ್ಯರಷ್ಟೇ ಜವಾಬ್ದಾರಿಯುತವಾಗಿ ಈ ಪ್ರಾಣಿಗಳೂ ಕರ್ತವ್ಯ ನಿರ್ವಹಿಸುತ್ತವೆ. ಸಾಕಷ್ಟು ಸಂದರ್ಭಗಳಲ್ಲಿ ಪ್ರಮುಖ ಕಾರ್ಯಾಚರಣೆಯ ವೇಳೆಯೂ ಈ ಶ್ವಾನಗಳು ಮಹತ್ತರ ಪಾತ್ರವನ್ನೂ ವಹಿಸುತ್ತವೆ.

ಹೀಗೆ ಪ್ರಮುಖ ಇಲಾಖೆಗಳಲ್ಲಿ ತಮ್ಮದೇ ಆದ ರೀತಿಯಲ್ಲಿ ಕರ್ತವ್ಯ ನಿರ್ವಹಿಸುವ ಶ್ವಾನಗಳಿಗೆ ಸಾಕಷ್ಟು ತರಬೇತಿಯನ್ನೂ ನೀಡಲಾಗುತ್ತದೆ. ಜೊತೆಗೆ ಒಂದಷ್ಟು ವರ್ಷಗಳ ಬಳಿಕ ಇವುಗಳನ್ನು ಸೇವೆಯಿಂದ ನಿವೃತ್ತಿ ಕೂಡಾ ಮಾಡಲಾಗುತ್ತದೆ. ಬಹಳ ಆತ್ಮೀಯವಾಗಿಯೇ ಇವುಗಳನ್ನು ಬೀಳ್ಕೊಡಲಾಗುತ್ತದೆ. ಇಂತಹ ಹೃದಯಸ್ಪರ್ಶಿ ಕ್ಷಣಗಳನ್ನು ನೀವು ಕೂಡಾ ನೋಡಿರಬಹುದು. ಇದೀಗ ಅಂತಹದ್ದೇ ಫೋಟೋವೊಂದು ಸಖತ್ ವೈರಲ್ ಆಗುತ್ತಿದೆ.

ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಮೇರು ಎಂಬ ಶ್ವಾನದ ನಿವೃತ್ತಿಯ ಕ್ಷಣವಿದು. 22 ಆರ್ಮಿ ಡಾಗ್ ಯುನಿಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 9 ವರ್ಷದ ನಿಷ್ಠಾವಂತ ಶ್ವಾನ ಮೇರು ತನ್ನ ವೃತ್ತಿಜೀವನದ ನಂತರ ನಿವೃತ್ತಿ ಹೊಂದಿದ್ದಾನೆ. ನಿವೃತ್ತಿ ಬಳಿಕ ಇವನನ್ನು ಶ್ವಾನ ಘಟಕದಿಂದ ಮೀರತ್‌ಗೆ ಬಲು ಪ್ರೀತಿಯಿಂದಲೇ ಕಳುಹಿಸಲಾಯಿತು. ಸದ್ಯ ಮೇರುವಿನ ಪ್ರಯಾಣದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆದಿದೆ. ನಿವೃತ್ತಿಯ ನಂತರ ಮೇರುವನ್ನು ಪ್ರಥಮ ದರ್ಜೆಯ ಎಸಿ ಕೋಚ್‌ನಲ್ಲಿ ಮೀರತ್‌ಗೆ ಕಳುಹಿಸಲಾಯಿತು. ಚಿತ್ರದಲ್ಲಿ ಮೇರು ಹಾಯಾಗಿ ಪ್ರಯಾಣಿಸುತ್ತಿರುವುದನ್ನು ನೋಡಬಹುದು.

https://twitter.com/AshTheWiz/status/1791749864268898325?ref_src=twsrc%5Etfw%7Ctwcamp%5Etweetembed%7Ctwterm%5E1791749864268898325%7Ctwgr%5E1beecb61fb22168ec8d7aaec0e770c222d7a4854%7Ctwcon%5Es1_&ref_url=https%3A%2F%2Fvijaykarnataka.com%2Fviral-adda%2Ftrending%2Fheartwarming-pictures-of-a-army-dog-meru-travels-ac-first-class-after-retirement-is-going-viral%2Farticleshow%2F110304308.cms

ಮೇರು ತನ್ನ ನಿವೃತ್ತಿ ಜೀವನವನ್ನು ಮೀರತ್‌ನ ರಿಮೌಂಟ್ ಆಂಡ್ ವೆಟರ್ನರಿ ಕಾರ್ಪ್ಸ್ (ಆರ್‌ವಿಸಿ) ಕೇಂದ್ರದಲ್ಲಿ ಕಳೆಯಲಿದ್ದಾನೆ. ಸದ್ಯ ಈ ಪೋಸ್ಟ್‌ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಶ್ವಾನದ ಕಾರ್ಯ, ಅದರ ಬೀಳ್ಕೊಡುಗೆಗೆ ನೆಟ್ಟಿಗರು ಗೌರವ ವ್ಯಕ್ತಪಡಿಸಿದ್ದಾರೆ.

 

ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments