Wednesday, April 30, 2025
30.3 C
Bengaluru
LIVE
ಮನೆಆರೋಗ್ಯಭಯ, ಚಿಂತೆ, ಒತ್ತಡಕ್ಕೆ ಇಲ್ಲಿದೆ ಮುಕ್ತಿ, ಡಾ. ನವೀನ್ ಸಲಹೆ ಏನು?

ಭಯ, ಚಿಂತೆ, ಒತ್ತಡಕ್ಕೆ ಇಲ್ಲಿದೆ ಮುಕ್ತಿ, ಡಾ. ನವೀನ್ ಸಲಹೆ ಏನು?

ಜೀವನದಲ್ಲಿ ಆತಂಕ, ಭಯ, ಚಿಂತೆ, ಒತ್ತಡ ಬರದಿರುವ ಮನುಷ್ಯನೇ ಇಲ್ಲ. ಒಂದಲ್ಲಾ ಒಂದು ಸಂದರ್ಭಗಳಲ್ಲಿ ನಮಗೆ ಇದರ ಅನುಭವ ಆಗಿರುತ್ತದೆ. ಮಕ್ಕಳಿಗೆ ಪರೀಕ್ಷೆ ಭಯ, ಉದ್ಯೋಗಸ್ಥರಿಗೆ ಕೆಲಸದ ಒತ್ತಡ, ಹೀಗೆ ನೂರಾರು ಕಾರಣಗಳಿಂದ ನಮ್ಮ ನೆಮ್ಮದಿ ದೂರವಾಗಿ ಚಿಂತೆ ಆರಂಭವಾಗುತ್ತದೆ. ಇದಕ್ಕೆ ಕೆಲವರು ವೈದ್ಯರ ಬಳಿ ಓಡುತ್ತಾರೆ. ಅನೇಕ ರೀತಿಯ ಔಷಧಿಗಳನ್ನು ಸೇವನೆ ಮಾಡುತ್ತಾರೆ. ಆದರೆ ಇವುಗಳನ್ನು ಕ್ಷಣಾರ್ಧದಲ್ಲಿ ಕಡಿಮೆ ಮಾಡಿಕೊಳ್ಳಬಹುದು. ನಿಮಗೆ ಈ ಮಾತು ಆಶ್ಚರ್ಯ ಹುಟ್ಟಿಸಬಹುದು ಆದರೆ ಇದು ನಿಜ. ಹಾಗಾದರೆ ಇವುಗಳನ್ನು ಕಡಿಮೆ ಮಾಡುವುದು ಹೇಗೆ? ತಜ್ಞರು ಹೇಳುವುದೇನು? ಇಲ್ಲಿದೆ ಮಾಹಿತಿ.

ಡಾ. ನವೀನ್ ಎಂಬವರು ಯಾವುದೇ ರೀತಿಯ ಔಷಧಿಗಳಿಲ್ಲದೆ ಈ ಭಯ, ಆತಂಕ, ಚಿಂತೆ, ಒತ್ತಡ ಇವುಗಳನ್ನು ಕಡಿಮೆ ಮಾಡುವ ಸರಳ ವಿಧಾನವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ನೀವು ಕೂಡ ಇದನ್ನು ಪ್ರಯತ್ನಿಸಬಹುದಾಗಿದೆ. ಇದನ್ನು ಮನೆಯಲ್ಲಿ ಪ್ರಯತ್ನಿಸಬಹುದಾಗಿದ್ದು ಯಾವುದೇ ರೀತಿಯ ಅಡ್ಡಪರಿಣಾಮ ಇರುವುದಿಲ್ಲ.

ವೈದ್ಯರ ವಿಡಿಯೋ ಇಲ್ಲಿದೆ:

 

ಹೇಗೆ ಮಾಡುವುದು?

ನಿಮ್ಮ ತೋರುಬೆರಳನ್ನು ಕಿವಿಯೊಳಕ್ಕೆ ಹಾಕಿ, ಅದನ್ನು ಒತ್ತಡದಿಂದ ಕೆಳಗೆ ಎಳೆಯಿರಿ. ಆ ಸಮಯದಲ್ಲಿ ಆಳವಾದ ಉಸಿರನ್ನು ತೆಗೆದುಕೊಳ್ಳಿ. ನೋವಾಗದಂತೆ ಆರಾಮವಾಗಿ 3 ರಿಂದ 4 ಸಲ ಇದೇ ರೀತಿ ಮಾಡಿ. ಯಾವುದೇ ಕಾರಣಕ್ಕೂ ಜಾಸ್ತಿ ಒತ್ತಡ ಹಾಕಿ ನೋವು ಮಾಡಿಕೊಳ್ಳಬೇಡಿ. ಈ ರೀತಿ ಮಾಡುವುದರಿಂದ ಆತಂಕ, ಭಯ, ಚಿಂತೆ, ಒತ್ತಡ ಎಲ್ಲವೂ ಕಡಿಮೆಯಾಗುತ್ತದೆ. ಅದೂ ಅಲ್ಲದೆ ನಿಮಗೆ ಯಾವುದೇ ರೀತಿಯ ಮಾತ್ರೆ, ಔಷಧಿಗಳನ್ನು ಬಳಸುವ ಅವಶ್ಯಕತೆ ಇರುವುದಿಲ್ಲ. ಹಾಗಾಗಿ ಇದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಇರುವುದಿಲ್ಲ. ಜೊತೆಗೆ ಯಾರು ಬೇಕಾದರೂ ಇದನ್ನು ಮಾಡಬಹುದಾಗಿದೆ. ನೀವು ಕೂಡ ಪದೇ ಪದೇ ನಾನಾ ಕಾರಣಗಳಿಗೆ ಆತಂಕ, ಭಯ, ಒತ್ತಡ ಅನುಭವಿಸುತ್ತಿದ್ದರೆ ಇದನ್ನು ಪ್ರಯತ್ನಿಸಿ ನೋಡಿ. ಆರೋಗ್ಯವಾಗಿರಿ.

 

ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments