HealthTop News

ವೈದ್ಯರಿಗೆ ಗುಡ್ ನ್ಯೂಸ್​ – ವೇತನ ಹೆಚ್ಚಳ

ಗುತ್ತಿಗೆ ಆಧಾರಿತ ಸರ್ಕಾರಿ ವೈದ್ಯರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. NHM ಅಡಿಯಲ್ಲಿ ನೇಮಕವಾಗುವ ಗುತ್ತಿಗೆ ವೈದ್ಯರ ವೇತನವನ್ನ ಹೆಚ್ಚಿಸಿ ಆದೇಶಿಸಲಾಗಿದೆ.

ಕೇಂದ್ರದ ಅನುಮತಿ ಪಡೆದು ಶೇ 25 ರಿಂದ 50 ರಷ್ಟು ವೇತನವನ್ನು ಆರೋಗ್ಯ ಇಲಾಖೆ ಹೆಚ್ಚಳ ಮಾಡಿದೆ. 45 ಸಾವಿರ ಇದ್ದ MBBS ವೈದ್ಯರ ವೇತನವನ್ನು 75 ಸಾವಿರಕ್ಕೆ ಪರಿಷ್ಕರಿಸಲಾಗಿದೆ.

ಪ್ರಸ್ತುತ 1,10,000 ಇದ್ದ ಪಡೆಯುತ್ತಿದ್ದ ತಜ್ಞ ವೈದ್ಯರ ವೇತನವನ್ನು 1,40,000 ಕ್ಕೆ ಹೆಚ್ಚಿಸಲಾಗಿದೆ. ಅಲ್ಲದೇ ನರ್ಸ್ ಗಳ ವೇತನವನ್ನು 18 ರಿಂದ 22 ಸಾವಿರಕ್ಕೆ ಆರೋಗ್ಯ ಇಲಾಖೆ ಹೆಚ್ಚಿಸಿದೆ.

ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ಹಂಚಿಕೊಂಡಿದ್ದಾರೆ.

ವೇತನದಲ್ಲಿನ ಭಾರಿ ಹೆಚ್ಚಳದಿಂದಾಗಿ ನಾವು ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಅನೇಕ ಹುದ್ದೆಗಳನ್ನು ಭರ್ತಿ ಮಾಡಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ.

ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯರು ಹಾಗೂ ತಜ್ಞ ವೈದ್ಯರುಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಲು ಮುಂದಬರಬೇಕು ಎಂದು ನಾನು ಮನವಿ ಮಾಡುತ್ತೇನೆ ಎಂದು ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟಿದ್ದಾರೆ.

Comments (0)

Your email address will not be published. Required fields are marked *

Back to top button