Freedom Tv desk :

ರಸಭರಿತ ಹಣ್ಣು ಎಂದಾಕ್ಷಣ ನೆನಪಿಗೆ ಬರುವ ಮೊದಲ ಹಣ್ಣು ಎಂದರೆ, ಅದು ಕಲ್ಲಂಗಡಿ ಹಣ್ಣು. ಸಾಕಷ್ಟು ಮಂದಿ ಕಲ್ಲಂಗಡಿ ಹಣ್ಣು ಇಷ್ಟಪಟ್ಟು ಸೇವಿಸುತ್ತಾರೆ. ಹಣ್ಣಿನಲ್ಲಿ ನೀರಿನಾಂಶ ಹೆಚ್ಚಾಗಿರುವುದರಿಂದ ಬೇಸಿಗೆಯಲ್ಲಂತೂ ಈ ಹಣ್ಣು ಅಮೃತವೆಂದೇ ಸೇವಿಸುತ್ತೇವೆ.

ರಸಭರಿತ ಹಣ್ಣು ಎಂದಾಕ್ಷಣ ನೆನಪಿಗೆ ಬರುವ ಮೊದಲ ಹಣ್ಣು ಎಂದರೆ, ಅದು ಕಲ್ಲಂಗಡಿ ಹಣ್ಣು. ಸಾಕಷ್ಟು ಮಂದಿ ಕಲ್ಲಂಗಡಿ ಹಣ್ಣು ಇಷ್ಟಪಟ್ಟು ಸೇವಿಸುತ್ತಾರೆ. ಹಣ್ಣಿನಲ್ಲಿ ನೀರಿನಾಂಶ ಹೆಚ್ಚಾಗಿರುವುದರಿಂದ ಬೇಸಿಗೆಯಲ್ಲಂತೂ ಈ ಹಣ್ಣು ಅಮೃತವೆಂದೇ ಸೇವಿಸುತ್ತೇವೆ.

Health : ಇತ್ತೀಚಿನ ದಿನಗಳಲ್ಲಿ ಆರೋಗ್ಯಕರ ಆಹಾರ ಪದ್ಧತಿಯನ್ನು ಸಾಕಷ್ಟು ಜನರು ಅಳವಡಿಸಿಕೊಳ್ಳುತ್ತಿದ್ದು, ನೀರಿನಾಂಶ ಹೆಚ್ಚಾಗಿರುವ ಕಲ್ಲಂಗಡಿ ಹಣ್ಣನ್ನು ಹೆಚ್ಚಾಗಿ ಸೇವನೆ ಮಾಡುತ್ತಿದ್ದಾರೆ. ಅವುಗಳ ಸಿಪ್ಪೆ ಹಾಗೂ ಬೀಜಗಳನ್ನು ವಿವಿಧ ರೀತಿಯ ಆಹಾರ ಪದಾರ್ಥಗಳನ್ನು ಸಿದ್ಧಪಡಿಸಿಕೊಂಡು ಸೇವನೆ ಮಾಡುತ್ತಿದ್ದಾರೆ.

ಕಲ್ಲಂಗಡಿ ಹಣ್ಣಿನಲ್ಲಿರುವ ವಿಟಮಿನ್‌ ಎ ಹಾಗೂ ಸಿ ಅಂಶ ಚರ್ಮದ ಆರೋಗ್ಯಕ್ಕೆ ಬಹಳ ಉತ್ತಮ. ವಿಟಮಿನ್‌ ಸಿ ಚರ್ಮದಲ್ಲಿ ಕೊಲಾಜನ್‌ ಉತ್ಪತ್ತಿಗೆ ಕಾರಣವಾಗುತ್ತದೆ. ಇದರಲ್ಲಿ ಪೋಷಕಾಂಶ ಚರ್ಮ ಹಾಗೂ ಕೂದಲಿನ ಆರೋಗ್ಯಕ್ಕೆ ಉತ್ತಮ. ಅಧ್ಯಯನವೊಂದರ ಪ್ರಕಾರ ವಿಟಮಿನ್‌ ಸಿ ಅಂಶ ಹೊಂದಿರುವ ಹಣ್ಣು, ತರಕಾರಿ, ಆಹಾರಗಳ ಸೇವನೆಯಿಂದ ಚರ್ಮದಲ್ಲಿ ಸುಕ್ಕು ಹಾಗೂ ಒಣ ಚರ್ಮದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ವಿಟಮಿನ್‌ ಎ ಅಂಶದ ಚರ್ಮದ ಆರೋಗ್ಯಕ್ಕೆ ಅವಶ್ಯ, ಅಲ್ಲದೆ ಇದು ಚರ್ಮದ ಕೋಶಗಳನ್ನು ಸರಿಪಡಿಸುತ್ತದೆ.

ಉರಿಯೂತವು ಅನೇಕ ದೀರ್ಘಾವಧಿ ಕಾಯಿಲೆಗಳನ್ನು ಹರಡುತ್ತದೆ. ಇದರಲ್ಲಿರುವ ಲೈಕೊಪೀನ್‌, ವಿಟಮಿನ್‌ ಸಿ ಹಾಗೂ ಆಂಟಿಆಕ್ಸಿಡೆಂಟ್‌ಗಳ ಕಾರಣದಿಂದ ಉರಿಯೂತದ ಸಮಸ್ಯೆ ನಿವಾರಣೆಯಾಗುತ್ತದೆ. ಕಲ್ಲಂಗಡಿಯಲ್ಲಿರುವ ಕೆಲವೊಂದು ಪೋಷಕಾಂಶಗಳು ಹೃದಯ ಆರೋಗ್ಯಕ್ಕೆ ಉತ್ತಮ. ಹೃದಯ ಸಮಸ್ಯೆ ನಿಯಂತ್ರಣಕ್ಕೆ ಉತ್ತಮ ಆಹಾರ ಪದ್ಧತಿಯು ಮುಖ್ಯವಾಗುತ್ತದೆ. ಇದರ ಸೇವನೆಯಿಂದ ಅಧಿಕರಕ್ತದೊತ್ತಡ ಹಾಗೂ ಕೊಲೆಸ್ಟ್ರಾಲ್‌ ಪ್ರಮಾಣವು ನಿಯಂತ್ರಣಕ್ಕೆ ಬರುತ್ತದೆ. ಅಧ್ಯಯನಗಳ ಪ್ರಕಾರ ಲೈಕೊಪೀನ್‌ ಕೊಲೆಸ್ಟ್ರಾಲ್‌ ಹಾಗೂ ರಕ್ತದೊತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಕಲ್ಲಂಗಡಿಯಲ್ಲಿ ಹಲವು ರೀತಿ ಸಸ್ಯ ಸಂಯುಕ್ತಗಳಿವೆ. ಇದರಲ್ಲಿ ಲೈಕೊಪೀನ್‌ ಹಾಗೂ ಕುರ್ಬಿಟಾಸಿನ್‌ ಇ ಅಂಶಗಳಿದ್ದು ಇದು ಆಂಟಿಕ್ಯಾನ್ಸರ್‌ ಪರಿಣಾಮಗಳನ್ನು ಹೊಂದಿದೆ. ಲೈಕೊಪೀನ್‌ ಅಂಶ ಇರುವ ಆಹಾರ ಪದಾರ್ಥಗಳ ಸೇವನೆಯಿಂದ ಪ್ರಾಸ್ಟೇಟ್‌ ಹಾಗೂ ಕೊಲೊರೆಕ್ಟರ್‌ ಕ್ಯಾನ್ಸರ್‌ನ ಅಪಾಯದ ಸಂಭವ ಕಡಿಮೆ ಇರುತ್ತದೆ.
ಕಲ್ಲಂಗಡಿಯಲ್ಲಿ ಹಲವು ವಿಧದ ಪೋಷಕಾಂಶಗಳಿವೆ. ಇದರಲ್ಲಿ ಪೊಟ್ಯಾಶಿಯಂ, ಮೆಗ್ನಿಶಿಯಂ, ವಿಟಮಿನ್‌ ಎ ಹಾಗೂ ಸಿ ಅಂಶ ಸಮೃದ್ಧವಾಗಿದೆ. ಇದರಲ್ಲಿ ಸಿಟ್ರುಲಿನ್‌ ಸಮೃದ್ಧವಾಗಿದೆ. ಇದು ಅಮೈನೊ ಆಮ್ಲವಾಗಿದ್ದು, ವ್ಯಾಯಾಮದ ಕಾರ್ಯಕ್ಷಮತೆಯನ್ನೂ ಸುಧಾರಿಸುತ್ತದೆ. ವಿಟಮಿನ್‌ ಸಿ ಹಾಗೂ ಉತ್ಕರ್ಷಣ ವಿರೋಧಿ ಗುಣವನ್ನು ಹೊಂದಿದೆ. ಇದರಲ್ಲಿನ ಸಂಯಕ್ತಗಳು ಫ್ರಿ ರಾಡಿಕಲ್ಸ್‌ಗಳ ವಿರುದ್ಧ ಹೋರಾಡುತ್ತವೆ.

ಇದರಲ್ಲಿ ಸಾಕಷ್ಟು ನೀರಿನಂಶ ಹಾಗೂ ನಾರಿನಂಶವೂ ಇದ್ದು, ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ನಾರಿನಂಶ ಮಲಬದ್ಧತೆಯನ್ನು ನಿಯಂತ್ರಿಸುತ್ತದೆ.
ಕಲ್ಲಂಗಡಿ ಹಣ್ಣಿನ ಬೀಜ ಸೇವನೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿರಿಸಬಹುದು. ಬೀಜಗಳಲ್ಲಿ ಕಬ್ಬಿಣಾಂಶ ಇರವುದರಿಂದ ಇದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಹಣ್ಣಿನಲ್ಲಿ ಪಾಲಿಅನ್‌ಸ್ಯಾಚುರೇಟೆಡ್ ಮತ್ತು ಮೊನೊಸಾಚುರೇಟೆಡ್ ನಂತರ ಉತ್ತಮ ಕೊಬ್ಬಿನ ಅಂಶ ಇದ್ದು, ಇದು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಮತ್ತು ಹೃದಯದ ಆರೋಗ್ಯವನ್ನು ಹೆಚ್ಚಿಸಲು ಉತ್ತಮ .

ಕಲ್ಲಂಗಡಿ ಬೀಜಗಳನ್ನು ಯಾರು ಸೇವಿಸಬಹುದು?

. ಅಲರ್ಜಿ ಹೊಂದಿರುವವರು ಬಿಟ್ಟರೆ. ಎಲ್ಲರೂ ಹಣ್ಣಿನ ಬೀಜಗಳನ್ನು ಸೇವನೆ ಮಾಡಬಹುದು.
. ಗಂಟಲಲ್ಲಿ ಸಿಕ್ಕಿಹಾಕಿಕೊಂಡು ಸಮಸ್ಯೆ ಎದುರಾಗುವುದರಿಂದ 6-8 ತಿಂಗಳ ಕೆಳಗಿನ ಮಕ್ಕಳಿಗೆ ನೀಡದಂತೆ ಸಲಹೆ ನೀಡಲಾಗುತ್ತದೆ.

By admin

Leave a Reply

Your email address will not be published. Required fields are marked *

Verified by MonsterInsights