ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಮಾಜಿ ಮುಖ್ಯಮಂತ್ರಿ ಇಂದು ಚೆನ್ನೈ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬೆಂಗಳೂರಿಗೆ ಮರಳಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅಚ್ಚರಿಯ ಮಾಹಿತಿಯೊಂದನ್ನು ಹೊರಗೆಡವಿದ್ದಾರೆ. ಭಗವಂತ ನನ್ನನ್ನು ಕಾಪಾಡಿದ್ದಾನೆ. ನನಗಿದು ಮರುಜನ್ಮ ಎಂದಿದ್ದಾರೆ.
ಕುಮಾರಸ್ವಾಮಿಗೆ ಆಪರೇಷನ್ ಮಾಡಿದ್ದು ಸಾಯಿಬಾಬಾ ದೇವರು
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಶಸ್ತ್ರಚಿಕಿತ್ಸೆ ನೆರವೇರಿಸಿದ್ದು ಸಾಯಿಬಾಬಾ ಭಕ್ತರಾಗಿರುವ ವೈದ್ಯರು.. ಅವರು ತಮ್ಮ ಇಷ್ಟ ದೈವ ಸಾಯಿಬಾಬಾಗೆ ಪೂಜೆ ನೆರವೇರಿಸಿದ ನಂತರ ತಮಗೆ ಶಸ್ತ್ರಚಿಕಿತ್ಸೆ ನೆರವೇರಿಸಿದರು.. ನನಗೆ ಆಪರೇಷನ್ ಮಾಡಿದ್ದು ವೈದ್ಯರಲ್ಲ.. ಖುದ್ದು ಸಾಯಿಬಾಬಾ ದೇವರೇ ಆಪರೇಷನ್ ಮಾಡಿದರು ಎಂದು ವೈದ್ಯರು ತಿಳಿಸಿದ್ದಾರೆ ಅಂತಾ ಕುಮಾರಸ್ವಾಮಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ತಮಗೆ ಮರುಜನ್ಮ ನೀಡಿದ ಹಂಗೇರಿಯ ವೈದ್ಯರನ್ನು ಕುಮಾರಸ್ವಾಮಿ ಸ್ಮರಿಸಿಕೊಂಡಿದ್ದಾರೆ. ಮೂರ್ನಾಲ್ಕು ದಿನ ವಿಶ್ರಾಂತಿ ಪಡೆದು ರಾಜಕೀಯ ಅಖಾಡಕ್ಕೆ ಧುಮುಕುವುದಾಗಿ ಕುಮಾರಸ್ವಾಮಿ ತಿಳಿಸಿದ್ದಾರೆ