Friday, August 29, 2025
24.3 C
Bengaluru
Google search engine
LIVE
ಮನೆ#Exclusive NewsTop Newsಯುವ ಕಾಂಗ್ರೆಸ್ ಲೀಗಲ್ ಸೆಲ್ ಜನರಲ್ ಸೆಕ್ರೆಟರಿಯಾಗಿ ಹರ್ಷಿತಾ ರೆಡ್ಡಿ ನೇಮಕ

ಯುವ ಕಾಂಗ್ರೆಸ್ ಲೀಗಲ್ ಸೆಲ್ ಜನರಲ್ ಸೆಕ್ರೆಟರಿಯಾಗಿ ಹರ್ಷಿತಾ ರೆಡ್ಡಿ ನೇಮಕ

ಬೆಂಗಳೂರು: ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಕಾನೂನು ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಯುವ ವಕೀಲರಾದ ಹರ್ಷಿತಾ ರೆಡ್ಡಿಯವರನ್ನು ನೇಮಕ ಮಾಡಿ ಭಾರತೀಯ ಯುವ ಕಾಂಗ್ರೆಸ್ ಆದೇಶ ಹೊರಡಿಸಿದೆ. ಹರ್ಷಿತಾ ರೆಡ್ಡಿ ಅವರ ಜೊತೆಗೆ ಟಿವಿ ಮಣಿಕುಮಾರ್​, ಎಂ ಶಶಿಕುಮಾರ್​, ರಕ್ಷಿತಾ ಪಿ ಸಿಂಗ್ ಅವರು ಸ್ಟೇಟ್ ಜನರಲ್ ಸೆಕ್ರೇಟರಿಯಾಗಿ ನೇಮಕಗೊಂಡಿದ್ದಾರೆ.

ಮೂಲತಃ ಗೌರಿಬಿದನೂರು ತಾಲೂಕು ಕೆಂಕೆರೆ ಗ್ರಾಮದವರಾದ ಹರ್ಷಿತಾ ರೆಡ್ಡಿಯವರು ಬೆಂಗಳೂರಿನಲ್ಲಿ ಬದುಕು ಕಂಡುಕೊಂಡಿದ್ದಾರೆ. ಸೆಂಟ್ರಲ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ ಮೀಡಿಯಾ ಸ್ನಾತಕೋತ್ತರ ಪದವಿ ಪೂರೈಸಿ ಸುಮಾರು 15 ವರ್ಷಗಳ ಕಾಲ ಈಟಿವಿ ಕನ್ನಡ, ನ್ಯೂಸ್ 18 ಕನ್ನಡ, ಕಲರ್ಸ್ ಕನ್ನಡ, ಜನಶ್ರೀ, ಫ್ರೀಡಂಟಿವಿ ಸೇರಿ ವಿವಿಧ ವಾಹಿನಿಗಳಲ್ಲಿ ಪತ್ರಕರ್ತರಾಗಿ ಕೆಲಸ ಮಾಡಿದ್ದರು.

ವಿವೇಕಾನಂದ ಲಾ ಕಾಲೇಜಿನಲ್ಲಿ ಎಲ್​ಎಲ್​ ಬಿ ಪೂರೈಸಿದ ಹರ್ಷಿತಾ ರೆಡ್ಡಿ ಸದ್ಯ ಕರ್ನಾಟಕ ಹೈಕೋರ್ಟ್, ಸಿವಿಲ್ ಕೋರ್ಟ್ ಗಳಲ್ಲಿ ವಕೀಲಿಕೆ ಮಾಡುತ್ತಿದ್ದಾರೆ. ಹಿರಿಯ ವಕೀಲರಾದ ಸಿಹೆಚ್ ಹನುಮಂತರಾಯ ಅವರ ಬಳಿ ಜ್ಯೂನಿಯರ್ ಆಗಿ ಕೆಲಸ ಮಾಡಿದ್ದ ಹರ್ಷಿತಾ ರೆಡ್ಡಿ ಸದ್ಯ ಹಿರಿಯ ವಕೀಲ ಲಕ್ಷ್ಮಿಪತಿ ರೆಡ್ಡಿ ಅವರ ಬಳಿ ಜ್ಯೂನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇದೀಗ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಕಾನೂನು ಘಟಕದ ಜನರಲ್ ಸೆಕ್ರೇಟರಿಯಾಗಿ ಹರ್ಷಿತಾ ರೆಡ್ಡಿ ನೇಮಕಗೊಂಡಿದ್ದಾರೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments