SportsTop Newsಕ್ರಿಕೆಟ್ಸುದ್ದಿ

ಕಳೆದೊಂದು ದಶಕದಿಂದ ನಾನು ಧೋನಿಯ ಜೊತೆ ಮಾತನಾಡುತ್ತಿಲ್ಲ: ಹರ್ಭಜನ್ ಸಿಂಗ್- ಕಾರಣ ಏನು?

ತಾವು ಮತ್ತು ಎಂಎಸ್ ಧೋನಿ ಪರಸ್ಪರ ಮಾತನಾಡುವುದಿಲ್ಲ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಹೇಳಿದ್ದಾರೆ. ತಂಡದ ಮಾಜಿ ನಾಯಕ ಹಾಗೂ ತಾವು ಇಬ್ಬರೂ ಸ್ನೇಹಿತರಾಗಿ ಉಳಿದಿಲ್ಲ ಎಂದು ಬಾಂಬ್ ಸಿಡಿಸಿದ್ದಾರೆ ಟರ್ಬೊನೇಟರ್. ತಮ್ಮಿಬ್ಬರ ನಡುವೆ ಎಲ್ಲವೂ ಚೆನ್ನಾಗಿಲ್ಲ ಎಂಬ ಬಜ್ಜಿ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಇದರ ಅರ್ಥ ಮೈದಾನದಲ್ಲಿ ಅಗ್ರೆಸಿವ್ ಆಗಿರುತ್ತಿದ್ದ ಬಜ್ಜಿ ಮತ್ತು ಕ್ಯಾಪ್ಟನ್ ಕೂಲ್ ಎಂದೇ ಖ್ಯಾತರಾದ ಧೋನಿ ನಡುವೆ ವೈಮನಸ್ಸು ಇದೆ ಎಂದಲ್ಲ. ಆದರೆ ತಮಗೆ ಧೋನಿ ಜತೆ ಮೈದಾನದ ಆಚೆ ಮಾತನಾಡುವ ಪ್ರಮೇಯವೇ ಬಂದಿಲ್ಲ ಎಂದಿದ್ದಾರೆ ಅವರು.

ಹರ್ಭಜನ್ ಸಿಂಗ್ ಹಾಗೂ ಮಹೇಂದ್ರ ಸಿಂಗ್ ಧೋನಿ, 2007ರ ಟಿ -20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಸಂದರ್ಶನವೊಂದರಲ್ಲಿ ಹರ್ಭಜನ್ ಸಿಂಗ್, ಧೋನಿ ಬಗ್ಗೆ ಮಾತನಾಡಿದ್ದಾರೆ. ನಾನು ಧೋನಿ ಜೊತೆ ಮಾತನಾಡುವುದಿಲ್ಲ. ಮಾತು ನಿಲ್ಲಿಸಿ ಸುಮಾರು 10 ವರ್ಷ ಕಳೆದಿದೆ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.

ನಾನು ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡದಲ್ಲಿ ಆಡ್ತಿದ್ದ ಸಮಯದಲ್ಲಿ ನಮ್ಮಿಬ್ಬರ ಮಧ್ಯೆ ಮಾತುಕತೆ ಆಗ್ತಿತ್ತು. ಅದಾಗಿ ಈಗ ಹತ್ತು ವರ್ಷ ಕಳೆದಿದೆ ಎಂದು ಬಜ್ಜಿ ಹೇಳಿದ್ದಾರೆ. ಧೋನಿ ಜೊತೆ ಮಾತು ನಿಲ್ಲಿಸಲು ನನ್ನ ಬಳಿ ಯಾವುದೇ ಕಾರಣವಿಲ್ಲ. ಧೋನಿ ಬಳಿ ಇದ್ರೂ ಇರಬಹುದು ಎಂದು ಹರ್ಭಜನ್ ಹೇಳಿದ್ದಾರೆ.

ನಾನು ಧೋನಿಗೆ ಎಂದೂ ಫೋನ್ ಮಾಡುವ ಪ್ರಯತ್ನ ನಡೆಸಿಲ್ಲ ಎಂದು ಹರ್ಭಜನ್ ಹೇಳಿದ್ದಾರೆ. ನನ್ನ ಫೋನ್ ರಿಸೀವ್ ಮಾಡುವವರಿಗೆ ಮಾತ್ರ ನಾನು ಫೋನ್ ಮಾಡ್ತೇನೆ. ನನ್ನ ಸ್ನೇಹಿತರ ಜೊತೆ ನಾನು ಸಂಪರ್ಕದಲ್ಲಿ ಇರ್ತೇನೆ. ನಾನು ಒಂದೆರಡು ಬಾರಿ ಕರೆ ಮಾಡಿದ್ರೂ ನಿಮ್ಮಿಂದ ಉತ್ತರ ಬಂದಿಲ್ಲ ಎಂದಾಗ ನಾನು ಮತ್ತೆ ಕರೆ ಮಾಡಲು ಹೋಗೋದಿಲ್ಲ. ನನಗೆ ಎಷ್ಟು ಅವಶ್ಯವೋ ಅಷ್ಟಕ್ಕೆ ಅವರನ್ನು ಸೀಮಿತಗೊಳಿಸುತ್ತೇನೆ. ಸಂಬಂಧವು ಯಾವಾಗಲೂ ಎರಡೂ ಪಕ್ಷಗಳ ಸಹಕಾರವನ್ನು ಬಯಸುತ್ತದೆ. ನಾನು ನಿಮ್ಮನ್ನು ಗೌರವಿಸಿದರೆ, ನೀವು ನನ್ನನ್ನು ಗೌರವಿಸುತ್ತೀರಿ ಎಂದು ನಾನು ನಿರೀಕ್ಷಿಸುತ್ತೇನೆ ಎಂದು ಬಜ್ಜಿ ಹೇಳಿಕೊಂಡಿದ್ದಾರೆ.

ಅಷ್ಟೇ ಅಲ್ಲದೆ, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) 2018- 2020ರವರೆಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಕೂಡ ಧೋನಿ ನಾಯಕತ್ವದಲ್ಲಿ ಬಜ್ಜಿ ಆಡಿದ್ದರು.

ಮೈದಾನದಲ್ಲಿ ಮಾತ್ರ ಮಾತುಕತೆ

ಸಿಎಸ್‌ಕೆಯಲ್ಲಿ ಆಡುವಾಗ ಮೈದಾನದ ಹೊರಗೆ ಎಂದಿಗೂ ಧೋನಿ ಮತ್ತು ತಾವು ಮಾತನಾಡಿರಲಿಲ್ಲ ಎಂದು ಹರ್ಭಜನ್ ತಿಳಿಸಿದ್ದಾರೆ. ಮೈದಾನದಲ್ಲಿ ಕೂಡ ಬಹಳ ಸೀಮಿತ ಸಂಭಾಷಣೆಗಳು ನಡೆಯುತ್ತಿತ್ತಂತೆ. “ನಾನು ಧೋನಿ ಜತೆ ಮಾತನಾಡೊಲ್ಲ. ನಾನು ಸಿಎಸ್‌ಕೆಗೆ ಆಡುವಾಗ ನಾವು ಮಾತನಾಡಿದ್ದಷ್ಟೇ. ಆದರೆ, ಅದರಾಚೆ ನಾವು ಮಾತಾಡಿಲ್ಲ. ಈಗ ಹತ್ತು ವರ್ಷ ಕಳೆದಿದೆ. ಮಾತನಾಡಲು ನನ್ನ ಬಳಿ ಕಾರಣಗಳಿಲ್ಲ. ಬಹುಶಃ ಧೋನಿ ಬಳಿ ಇರಬಹುದು. ಇದಕ್ಕೆ ಕಾರಣಗಳು ಏನೆಂದು ನನಗೆ ತಿಳಿದಿಲ್ಲ. ನಾವು ಸಿಎಸ್‌ಕೆಗಾಗಿ ಐಪಿಎಲ್‌ನಲ್ಲಿ ಆಡುವಾಗ, ನಾವು ಮಾತನಾಡುತ್ತಿದ್ದೆವು. ಅದೂ ಕೂಡ ಮೈದಾನದ ಒಳಗೆ ಸೀಮಿತವಾಗಿತ್ತು. ಅದರ ಬಳಿಕ ಅವರು ನನ್ನ ಕೊಠಡಿಗೆ ಬಂದಿಲ್ಲ, ನಾನೂ ಅಲ್ಲಿಗೆ ಹೋಗಿಲ್ಲ” ಎಂದು ಸಂದರ್ಶನವೊಂದರಲ್ಲಿ ಆಫ್‌ ಸ್ಪಿನ್ನರ್ ತಿಳಿಸಿದ್ದಾರೆ.

Comments (0)

Your email address will not be published. Required fields are marked *

Back to top button