ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಎ1 ಪವಿತ್ರಾ ಗೌಡ ಅವರಿಗೆ ಸದ್ಯಕ್ಕೆ ಜಾಮೀನು ಸಿಕ್ಕಿದೆ. ಅವರು ಪರಪ್ಪನ ಅಗ್ರಹಾರ ಜೈಲಿನಿಂದ ಹೊರಗೆ ಬಂದಿದ್ದಾರೆ. ಕಾಕತಾಳೀಯ ಎಂಬಂತೆ ಪವಿತ್ರಾ ಗೌಡ ಅವರ ಮಾಜಿ ಪತಿ ಸಂಜಯ್ ಸಿಂಗ್ ಅವರು ಕೂಡ ಬೆಂಗಳೂರಿಗೆ ಬಂದಿದ್ದು, ಕೆಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.ಪವಿತ್ರಾ ಗೌಡ ಅವರಿಗೆ ಜಾಮೀನು ಸಿಕ್ಕಿರುವುದಕ್ಕೆ ಸಂಜಯ್ ಸಿಂಗ್ ಸಂತಸ ವ್ಯಕ್ತಪಡಿಸಿದ್ದಾರೆ. ಮಾಜಿ ಪತ್ನಿ ಸಲುವಾಗಿ ತಾವು ಹರಕೆ ಹೊತ್ತಿರುವುದಾಗಿ ತಿಳಿಸಿದ್ದಾರೆ.
‘ನಾನು ಬೆಂಗಳೂರಿಗೆ ಬಂದಿರುವುದು ಪವಿತ್ರಾ ಗೌಡ ಮೇಲಿನ ಒಲವಿನಿಂದ. ಬೇರೆ ಕೆಲಸದ ಮೇಲೆ ನಾನು ಬಂದಿದ್ದೇನೆ. ಆದರೆ ವಿಮಾನ ನಿಲ್ದಾಣಕ್ಕೆ ಬಂದಾಗ ಪವಿತ್ರಾ ಗೌಡಗೆ ಜಾಮೀನು ಸಿಕ್ಕಿದೆ ಎಂಬುದು ತಿಳಿಯಿತು. ಆ ದೇವರೇ ನನ್ನನ್ನು ಈ ಸಮಯದಲ್ಲಿ ಇಲ್ಲಿಗೆ ಕಳಿಸಿರುವುದು. ಇದನ್ನೆಲ್ಲ ಮಾಡಲು ನನಗೆ ಇಷ್ಟ ಇಲ್ಲ. ಮಾಧ್ಯಮದವರು ನನ್ನನ್ನು ಹುಡುಕಿಕೊಂಡು ಬರುತ್ತಾರೆ’ ಎಂದು ಸಂಜಯ್ ಸಿಂಗ್ ಹೇಳಿದ್ದಾರೆ.
‘ಮಾಜಿ ಪತಿ ಎಂಬ ಶಬ್ದಿ ಬಿಡಿ. ಪತಿ ಅಲ್ವಾ.. ಹಾಗಾಗಿ ಪವಿತ್ರಾ ಗೌಡಗೆ ಜಾಮೀನು ಸಿಕ್ಕಿದ್ದಕ್ಕೆ ಸಂತೋಷ ಆಗುತ್ತದೆ. ಹೇಗಾದರೂ ಅವರು ಹೊರಗೆ ಬರಲಿ ಅಂತ ನಾನು ಪ್ರತಿ ದಿನ ದೇವರಲ್ಲಿ ಬೇಡಿಕೊಳ್ಳುತ್ತಿದ್ದೆ. ಪವಿತ್ರಾ ಗೌಡ ಈ ಕೇಸ್ನಿಂದ ಶಾಶ್ವತವಾಗಿ ಹೊರಗೆ ಬರಲಿ ಅಂತ ಹರಕೆ ಹೊತ್ತುಕೊಂಡಿದ್ದೇನೆ’ ಎಂದಿದ್ದಾರೆ ಪವಿತ್ರಾ ಮಾಜಿ ಪತಿ ಸಂಜಯ್ ಸಿಂಗ್.