ಇಸ್ರೇಲ್ ಮತ್ತು ಹಮಾಸ್ ನಡುವೆ ಯುದ್ಧ ಮೊಳಗುತ್ತಿದೆ. ಈ ನಡುವೆ ಹಮಾಸ್ ಬಂಡುಕೋರರ ಪರವಾಗಿ ದೊಡ್ಡ ದೊಡ್ಡ ಉಗ್ರ ಸಂಘಟನೆಗಳು ಕೈ ಜೋಡಿಸುತ್ತಿವೆ. ಅದ್ರಲ್ಲೂ ಇಸ್ರೇಲ್ ಪರವಾಗಿ ಅದ್ಯಾವಾಗ ಅಮೇರಿಕಾ ಯುದ್ಧಕ್ಕೆ ಬೆನ್ನೆಲುಬಾಗಿ ನಿಂತಿತೋ ಆಗಲೇ ಉಗ್ರರು ಆಕ್ಟೀವ್ ಆದ್ರು., ಹೌತಿ ಉಗ್ರರು ಕೆಂಪು ಸಮುದ್ರದ ಮೇಲೆ ಅಟ್ಟಹಾಸ ಮೆರೆಯುತ್ತಿದ್ರೆ, ಅಮೇರಿಕಾ ಆರ್ಥೀಕತೆ ಮೇಲೆ ಹೊಡೆತ ಕೊಡೋಕೆ ಅಲ್ ಖೈದಾ ಉಗ್ರ ಸಂಘಟನೆ ಪ್ಲ್ಯಾನ್ ರೂಪಿಸಿದೆ.
ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಅಮೆರಿಕದ ನಿಲುವಿನಿಂದಾಗಿ ಭಯೋತ್ಪಾದಕ ಸಂಘಟನೆ ಅಲ್-ಖೈದಾ ಕೋಪಗೊಂಡಿದೆ. ಅಮೆರಿಕದ ದೈತ್ಯ ಉದ್ಯಮಿಗಳಾದ ಎಲೋನ್ ಮಸ್ಕ್, ಬಿಲ್ ಗೇಟ್ಸ್ ಮತ್ತು ಸತ್ಯ ನಾಡೆಲ್ಲಾ ಅವರನ್ನು ಕೊಲ್ಲುವುದಾಗಿ ಮತ್ತು ಅಮೆರಿಕದ ಆರ್ಥಿಕತೆಯನ್ನು ಗುರಿಯಾಗಿಸಿಕೊಂಡು ತನ್ನ ಚಾಟ್ ರೂಮ್ ಮೂಲಕ ಬೆದರಿಕೆ ಹಾಕಿದೆ.
ವರದಿಯ ಪ್ರಕಾರ ಪ್ಯಾನ್-ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆ ಅಲ್-ಖೈದಾ, ತನ್ನ ಬೆಂಬಲಿಗರಿಗೆ ಅಮೆರಿಕ, ಬ್ರಿಟಿಷ್ ಮತ್ತು ಫ್ರೆಂಚ್ ಕಂಪನಿಗಳು ನಿರ್ವಹಿಸುವ ವಿಮಾನಗಳ ಮೇಲೆ ದಾಳಿ ಮಾಡುವಂತೆ ಮನವಿ ಮಾಡಿದೆ. ಅಲ್-ಖೈದಾದ ಪಟ್ಟಿಯಲ್ಲಿ ಅಮೆರಿಕನ್ ಏರ್‌ಲೈನ್ಸ್, ಕಾಂಟಿನೆಂಟಲ್, ಡೆಲ್ಟಾ, ಬ್ರಿಟಿಷ್ ಏರ್‌ವೇಸ್, ಏರ್ ಫ್ರಾನ್ಸ್ ಮತ್ತು ಏರ್ ಫ್ರಾನ್ಸ್-ಕೆಎಲ್‌ಎಂ ಸೇರಿವೆ.
ಮಸ್ಕ್, ಗೇಟ್ಸ್ ಮತ್ತು ಮಾಜಿ ಯುಎಸ್ ಫೆಡರಲ್ ರಿಸರ್ವ್ ಅಧ್ಯಕ್ಷ ಬೆನ್ ಬರ್ನಾಂಕೆ ಯಹೂದಿ-ಅಮೆರಿಕ ಆರ್ಥಿಕತೆಯ ಭಾಗವಾಗಿದ್ದಾರೆ ಎಂದು ಅಲ್-ಖೈದಾ ಹೇಳಿದೆ. ಇದರಿಂದಾಗಿ ಆ ಜನರೆಲ್ಲ ನಮ್ಮ ಗುರಿಯಲ್ಲಿದ್ದಾರೆ. ಇಸ್ರೇಲ್‌ನ ಹಮಾಸ್ ಯುದ್ಧದಲ್ಲಿ ಅವರು ಯಹೂದಿಗಳನ್ನು ಬೆಂಬಲಿಸಿದ್ದಾರೆ ಎಂದು ಅಲ್-ಖೈದಾ ಹೇಳಿದೆ. ಇದರಿಂದಾಗಿ ಅವರೆಲ್ಲ ನಮ್ಮ ಗುರಿಯಾಗಿದ್ದಾರೆ. ಏಕೆಂದರೆ ಅವರು ಇಸ್ರೇಲ್-ಹಮಾಸ್ ಯುದ್ಧದಲ್ಲಿ ಯಹೂದಿಗಳನ್ನು ಬೆಂಬಲಿಸಿದ್ದಾರೆ ಎಂದು ತಿಳಿಸಿದೆ. ಉಗ್ರಗಾಮಿ ಸಾಹಿತ್ಯದ ಮೂಲಕ ಮುಸ್ಲಿಮರನ್ನು ಓಲೈಸಲು ಪ್ರಯತ್ನಿಸುತ್ತಿದೆ. ಇದಲ್ಲದೇ ಬಾಂಬ್ ತಯಾರಿಕೆಗೆ ಬೇಕಾದ ಮೂಲಭೂತ ತರಬೇತಿ ನೀಡಿ ಒಂಟಿ ತೋಳದಂತೆ ಕೆಲಸ ಮಾಡುವುದನ್ನು ಕಲಿಸಲಾಗುತ್ತಿದೆ.