ಖ್ಯಾತ ನಟಿ ಕಾಜಲ್ ಅಗರ್ವಾಲ್(Kajal aggarwal)ಗೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಕಹಿ ಅನುಭವ ಆಗಿದೆ. ಹೈದರಾಬಾದ್ನಲ್ಲಿ ಶಾಪಿಂಗ್ ಮಾಲ್ ಉದ್ಘಾಟನೆಗೆಂದು ತೆರಳಿದ್ದ ನಟಿ ಕಾಜಲ್ ಅಗರ್ವಾಲ್, ವಿಶ್ ಬೋರ್ಡ್ನಲ್ಲಿ ಸೈನ್ ಹಾಕ್ತಿರುವಾಗ ಯುವಕನೊಬ್ಬ ಅನುಚಿತ ವರ್ತನೆ ತೋರಿದ್ದಾನೆ
ಸೆಲ್ಫಿ ನೆಪದಲ್ಲಿ ಹತ್ತಿರಕ್ಕೆ ಬಂದ ಆ ಯುವಕ ನೇರವಾಗಿ ಕಾಜಲ್ ಅಗರ್ವಾಲ್ ಸೊಂಟಕ್ಕೆ ಕೈ ಹಾಕಲು ಯತ್ನಿಸಿದ್ದಾನೆ. ಇದಕ್ಕೆ ಕೂಡಲೇ ಏನಿದು? ಇದು ಸರಿಯಲ್ಲ ಎಂದು ಕಾಜಲ್ ಅಗರ್ವಾಲ್ ಪ್ರಶ್ನಿಸಿದ್ದಾರೆ. ಇದನ್ನು ಗಮನಿಸಿದ ಕೂಡ್ಲೇ ಅಂಗರಕ್ಷಕರು ಧಾವಿಸಿ, ಕಾಜಲ್ ಅಗರ್ವಾಲ್ಗೆ ರಕ್ಷಣೆ ಒದಗಿಸಿದ್ದಾರೆ. ಕಾಜಲ್ ಸೊಂಟಕ್ಕೆ ಕೈ ಹಾಕಲು ನೋಡಿದ ಆ ಯುವಕ ಜಾಗ ಖಾಲಿ ಮಾಡಿದ್ದಾನೆ.
ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದ್ದು, ಯುವಕನ ವರ್ತನೆಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ. ಅಭಿಮಾನದ ಹೆಸರಲ್ಲಿ ಹೀಗೆ ಮಾಡೋದು ಎಷ್ಟು ಸರಿ ಎಂದು ಪ್ರಶ್ನಿಸತೊಡಗಿದ್ದಾರೆ.
https://twitter.com/srk9484/status/1765714074401472563