#Exclusive Newsರಾಜ್ಯ

ಗುಡಿಬಂಡೆ ತಾಲೂಕು ಆರೋಗ್ಯಾಧಿಕಾರಿ ಲಂಚಕಾಂಡ

ಆರೋಗ್ಯ ಇಲಾಖೆ ಕೋಟ್ಯಂತರ ರೂಪಾಯಿಗಳ ಅನುದಾನವನ್ನು ಸರ್ಕಾರಿ ಆಸ್ಪತ್ರೆಗಳಿಗೆ ಪ್ರತಿ ವರ್ಷ ನೀಡುತ್ತೆ. ಬಜೆಟ್ ನಲ್ಲಿ ಆರೋಗ್ಯ ಇಲಾಖೆಗೆಂದೇ ದೊಡ್ಡ ಮೊತ್ತವನ್ನು ಸರ್ಕಾರ ಮೀಸಲಿಡುತ್ತೆ.

ಸಾರ್ವಜನಿಕರ ಆರೋಗ್ಯ ಕಾಪಾಡುವ ಜವಾಬ್ದಾರಿ ಆರೋಗ್ಯ ಇಲಾಖೆ ಮತ್ತು ಸರ್ಕಾರದ ಕರ್ತವ್ಯ. ಆದರೆ ಸರ್ಕಾರಿ ಅಧಿಕಾರಿಗಳು ವೃತ್ತಿಧರ್ಮ ಎಷ್ಟು ಪಾಲಿಸ್ತಿದಾರೆ ಅಂತ ನೋಡಿದ್ರೆ, ಉತ್ತರ ಸೊನ್ನೆ!

ತಾಲೂಕಿನ ಜನರ ಆರೋಗ್ಯ ಕಾಪಾಡುವ ಬದಲು ಇಲ್ಲೊಬ್ಬ THO ಹಾಡಹಗಲೇ ಜನರನ್ನ ಲೂಟಿ ಮಾಡ್ತಿದ್ದಾರೆ. ಫ್ರೀ ಸರ್ಜರಿಗೆ ಪೇಷೆಂಟ್ ಕಡೆಯವರಿಂದ ಲಂಚ ಪಡೆಯುವಾಗ  ಬೆಂಗಳೂರಿನ ಪಕ್ಕದಲ್ಲೇ ಇರುವ ಚಿಕ್ಕಬಳ್ಳಾಪರ ಜಿಲ್ಲೆಯ,ಗುಡಿಬಂಡೆ ತಾಲೂಕು ವೈದ್ಯಾಧಿಕಾರಿ ಮತ್ತು ಚೀಫ್ ಸರ್ಜನ್ ಡಾ ನರಸಿಂಹಮೂರ್ತಿ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.

ಗರ್ಭಕೋಶ ಚಿಕಿತ್ಸೆಗೆ ಬಂದವರ ಬಳಿ ಇಪ್ಪತ್ತು ಸಾವಿರ ಲಂಚ ಪಡೆದು ರೆಡ್ ಹ್ಯಾಂಡಾಗಿ ತಗಲಾಕೊಂಡಿದ್ದಾರೆ ಡಾ ನರಂಸಿಂಹಮೂರ್ತಿ.

ಪೇಷೆಂಟ್ ಕಡೆಯವರಿಂದ ನಾಲ್ಕೂವರೆ ಸಾವಿರ ಮುಂಗಡ ಹಣ ಪಡೆದು, ಉಳಿದಿದ್ದನ್ನು ಆಶಾ ವರ್ಕರ್ ಬಳಿ ಫೋನ್ ಪೇ ಮಾಡಿಸಿಕೊಳ್ಳೋಕೆ ಹೇಳ್ತಾನೆ ಈ ವೈದ್ಯ.

ದಿನವೊಂದಕ್ಕೆ ಕನಿಷ್ಟ ಐದರಿಂದ ಹತ್ತು ಆಪರೇಷನ್ ಮಾಡೋ ಈತ, ಪ್ರತಿ ಆಪರೇಷನ್ ಗೆ ಇಪ್ಪತ್ತು ಸಾವಿರ ಪೀಕ್ತಾನೆ. ಅದರ ಎಕ್ಸಕ್ಲೂಸಿವ್ ವಿಡಿಯೋ ಫ್ರೀಡಂ ಟಿವಿ ತೋರಿಡುತ್ತೆ ನೋಡಿ.

Comments (0)

Your email address will not be published. Required fields are marked *

Back to top button