Top Newsಕ್ರೈಂ ಸ್ಟೋರಿರಾಜ್ಯಸುದ್ದಿ
ಸಿಲಿಕಾನ್ ಸಿಟಿಯಲ್ಲಿ ಪುಡಿ ರೌಡಿಗಳ ಅಟ್ಟಹಾಸ – ಜೆಸಿಬಿ ಮೂಲಕ ಮನೆ ಗೋಡೆ ಧ್ವಂಸ

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಪುಡಿ ರೌಡಿಗಳ ಅಟ್ಟಹಾಸ ದಿನೇ ದಿನೇ ಮಿತಿ ಮೀರಿದೆ. ಜಾಗದ ವಿಚಾರಕ್ಕೆ ಮನೆ ಮಾಲೀಕನಿಗೆ ಥಳಿಸಿದ್ದಲ್ಲದೇ, ಜೆಸಿಬಿ ತಂದು ಮನೆಯ ಗೋಡೆ ಧ್ವಂಸಗೊಳಿಸಿರುವ ಘಟನೆ ನಡೆದಿದೆ.
ವೈಟ್‌ಫೀಲ್ಡ್‌ನಲ್ಲಿ 50ಕ್ಕೂ ಹೆಚ್ಚು ಪುಂಡರು ಬಂದು ಮನೆ ಮೇಲೆ ದಾಳಿ ನಡೆಸಿದ್ದಾರೆ. ಜಾಗದ ಮಾಲೀಕ ವಿಶಾಲ್ ಬಾಳಿಗ ಮನೆ ಮೇಲೆ ದಾಳಿ ನಡೆದಿದೆ. ಗೋಪಾಲ್ ಜವಹಾರ್ ಎಂಬಾತನ ವಿರುದ್ಧ ಆರೋಪ ಕೇಳಿಬಂದಿದೆ. ಮನೆ ಮಾಲೀಕರ ದೂರಿನನ್ವಯ ಎಫ್‌ಐಆರ್ ದಾಖಲಾಗಿದೆ.
ಘಟನೆ ಏನು?
50ಕ್ಕೂ ಹೆಚ್ಚು ಪುಂಡರು ಬೆಳಗ್ಗೆ 9:30ರ ಹೊತ್ತಿಗೆ ಗೋಪಾಲ್ ಎಂಬವರ ಮನೆಗೆ ಏಕಾಏಕಿ ನುಗ್ಗಿ ದಾಂಧಲೆ ಮಾಡಿದ್ದಾರೆ. 2 ಜೆಸಿಬಿ ಬಳಸಿ ಮನೆಯ ಗೋಡೆಗೆ ಗುದ್ದಿಸಿ ಧ್ವಂಸ ಮಾಡಿದ್ದಾರೆ. ಜಾಗದ ವಿಚಾರಕ್ಕೆ ಈ ಗಲಾಟೆ ನಡೆದಿದೆ.
ಹಲ್ಲೆ ಮಾಡುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸ್ಥಳೀಯರು ಕೂಡ ದೃಶ್ಯವನ್ನು ಮೊಬೈಲ್‌ಗಳಲ್ಲಿ ಸೆರೆ ಹಿಡಿದಿದ್ದಾರೆ. ಕೊನೆಗೂ ಮನೆ ಮಾಲೀಕರು ನೀಡಿದ ದೂರಿನನ್ವಯ ಎಫ್‌ಐಆರ್ ದಾಖಲಾಗಿದೆ.




