ರುಚಿಕರವಾದ ಗ್ರೀನ್ ಚಿಕನ್ ಕರ್ರಿ ಮಾಡುವ ವಿಧಾನ …
ಬೇಕಾಗುವ ಪದಾರ್ಥಗಳು…..
. ಎಣ್ಣೆ – 3 ಚಮಚ
. ಶುಂಟಿ -ಬೆಳ್ಳುಳ್ಳಿ ಪೇಸ್ಟ್ – 1 ಚಮಚ
. ಉಪ್ಪು – ರುಚಿಗೆ ತಕ್ಕಷ್ಟು
. ಅರಿಶಿಣದ ಪುಡಿ – ಸ್ವಲ್ಪ
. ಮೊಸರು -1/4 ಬಟ್ಟಲು
.ಗೋಡಂಬಿ-8
. ಈರುಳ್ಳಿ- ಎಣ್ಣೆಯಲ್ಲಿ ಫ್ರೈ ಮಾಡಿದ್ದು ಸ್ವಲ್ಪ
.ಹಸಿಮೆಣಸಿನ ಕಾಯಿ -2
. ಕೊತ್ತಂಬರಿ ಸೊಪ್ಪು – ಒಂದು ಹಿಡಿಯಷ್ಟು
. ಪುದೀನಅ – ಒಂದು ಹಿಡಿಯಷ್ಟು
. ಕಾಳು ಮೆಣಸಿನ ಪುಡಿ – ಸ್ವಲ್ಪ
. ಚಕ್ಕೆ-ಲವಂಗ ಪುಡಿ-ಸ್ವಲ್ಪ
. ದನಿಯಾ ಪುಡಿ-ಸ್ವಲ್ಪ
. ಗರಂ ಮಸಾಲಾ ಪುಡಿ-ಕಾಲು ಚಮಚ
ಮಾಡುವ ವಿಧಾನ…
. ಮೊದಲಿಗೆ ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ. ಕಾದ ನಂತರ ಅದಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಕೆಂಪಗೆ ಮಾಡಿಕೊಳ್ಳಿ.
. ಚಿಕನ್ ಪೀಸ್ಗಳನ್ನು ಹಾಕಿ. ನಂತರ ರುಚಿಗೆತಕ್ಕಷ್ಟು ಉಪ್ಪು, ಅರಿಶಿಣದ ಪುಡಿನ ಮೊಸರು ಹಾಕಿ-3 ನಿಮಿಷ ಬೇಯಿಸಿ
. ಬಳಿಕ ಮಿಕ್ಸಿ ಜಾರ್ಗೆ ಗೋಡಂಬಿ, ಈರುಳ್ಳಿ, ಹಸಿಮೆಣಸಿನ ಕಾಯಿ, ಪುದೀನಾ, ಕೊತ್ತಂಬರಿ ಸೊಪ್ಪು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಈ ಮಿಶ್ರಣವನ್ನು ಬೇಯಿಸಿದ ಚಿಕನ್ಗೆ ಹಾಕಿ 2ನಿಮಿಷ ಕುಡಿಯಲು ಬಿಡಿ
. ಕಾಳುಮೆಣಕಾಯಿ ಪುಡಿ, ಚಕ್ಕೆ-ಲವಂಗ ಪುಡಿ,ದನಿಯಾ ಪುಡಿ, ಗರಂ ಮಸಾಲಾ ಪುಡಿ ಹಾಕಿ. ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ 5-10 ನಿಮಿಷ ಕುದಿಯಲು ಬಿಡಿ, ಮಸಾಲೆ ಗಟ್ಟಿಗಾದ ಬಳಿಕ ಇಲೆಯಿಂದ ಇಳಿಸಿ ಕೊತ್ತಂಬರಿ ಸೊಪ್ಪನೊಂದಿಗೆ ಅಲಂಕರಿಸಿದರೆ ರುಚಿಕರವಾದ ಗ್ರೀನ್ ಚಿಕನ್ ಸವಿಯಲು ಸಿದ್ಧ.