ಬೆಂಗಳೂರು: ಗ್ಯಾರಂಟಿ ನಷ್ಟವನ್ನು ಭರಿಸಲು ಕರ್ನಾಟಕ ಸರ್ಕಾರ ಸಾರಿಗೆ ಇಲಾಖೆಯ ಆಸ್ತಿಗಳನ್ನು ಮಾರಾಟ ಮಾಡಲು ಮುಂದಾಗಿದೆ ಎಂದು ಬಿಜೆಪಿ ಆರೋಪ ವ್ಯಕ್ತಪಡಿಸುತ್ತಿದೆ. ಸಾರಿಗೆ ಇಲಾಖೆಯು ನೀಡಬೇಕಾದ 7154 ಕೋಟಿ ರೂ. ಅನ್ನು ರಾಜ್ಯ ಸರ್ಕಾರ ಬಾಕಿ ಉಳಿಸಿಕೊಂಡಿದೆ ಎಂದು ಬಿಜೆಪಿ ಆರೋಪಿಸಿದೆ. 2023-24ರ ಸಾಲಿನ ಶಕ್ತಿಯೋಜನೆಯಡಿಯ 1480 ಕೋಟಿ ರೂ., 2024-25ರ ಸಾಲಿನಲ್ಲಿ ಶಕ್ತಿಯೋಜನೆಯಡಿ 360 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಹೀಗಾಗಿ, ರಾಜ್ಯ ಸರ್ಕಾರ ಗ್ಯಾರಂಟಿಗಾಗಿ ಸಾರಿಗೆ ನಿಗಮವನ್ನ ಮಾರಟಕ್ಕಿಟ್ಟಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಭವಿಷ್ಯನಿಧಿ, ನಿವೃತ್ತ ನೌಕರರ ಬಾಕಿ, ಇಂಧನ, ಸಾಲದ ಬಾಕಿ ಮತ್ತು ಇತರೆ ಬಿಲ್‌ಗಳ ಬಾಕಿ ಸೇರಿದಂತೆ 5614 ಕೋಟಿ ರೂ, ಅನ್ನು ಸರ್ಕಾರ ಬಾಕಿ ಉಳಿಸಿಕೊಂಡಿದೆ ಎಂದರು.
ಈ ಹಿಂದೆ ಅಗಸ್ಟ್ 19ರಂದು ಶಾಲಿನಿರಜಿನೀಶ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಾರಿಗೆ ಸಂಸ್ಥೆಗಳ ಆರ್ಥಿಕ ವ್ಯವಸ್ಥೆಗಳ ಕುರಿತು ಚರ್ಚಿಸಲಾಗಿತ್ತು. ಇಂಧನ ವೆಚ್ಚವೇ ಪ್ರತಿ ದಿನಕ್ಕೆ 9.5 ಕೋಟಿ ರೂ. ಭರಿಸಲಾಗುತ್ತಿದೆ. ಸಿಬ್ಬಂದಿ ವೇತನ ಸೇರಿ 3650 ಕೋಟಿ ಹೊರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶೇ. 15ರಷ್ಟು ಪ್ರಯಾಣ ದರ ಹೆಚ್ಚಿಸುವಂತೆ ಸರ್ಕಾರಕ್ಕೆ ಪ್ರಸ್ತಾಪವನೆ ಸಲ್ಲಿಸಲು ಶಾಲಿನಿ ಅವರು ಸೂಚನೆ ನೀಡಿದ್ದಾರೆ ಎಂದು ಬಿಜೆಪಿ ಹೇಳಿದೆ.
ದರ ಹೆಚ್ಟಳ ಮಾಡಿದರೂ 1800 ಕೋಟಿ ರೂ. ನಿಗಮಕ್ಕೆ ನಷ್ಟವಾಗಲಿದೆ. ಹೀಗಾಗಿ ನಿಗಮದ 200 ಎಕರೆ ಭೂಮಿ ಲಭ್ಯವಿದ್ದು, ಆದಾಯ ಕೃಢೀಕರಣಕ್ಕೆ ಶಾಲಿನಿ ರಜಿನೀಶ್ ಸೂಚನೆ ನೀಡಿದ್ದಾರೆ. ಈ ಬಗ್ಗೆ ಶಾಲಿನಿ ರಜಿನೀಶ್ ನೇತೃತ್ವದ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಖಾಸಗಿಗಳಿಗೆ ನಿಗಮದ ಭೂಮಿ ಮಾರಾಟದ ಆರೋಪ ಕೇಳಿ ಬಂದಿದೆ. ನಿಗಮದ ಭೂಮಿಯನ್ನ ಆದಾಯ ಕ್ರೋಢೀಕರಣಕ್ಕೆ ಬಳಸಲು ವಿರೋಧ ವ್ಯಕ್ತವಾಗಿದೆ.