ಬೆಂಗಳೂರು : ದಲಿತರ ಪರವಾಗಿ ಸರಕಾರ ವಿವಿಧ ಯೋಜನೆಗಳನ್ನು ರೂಪಿಸಿದರೂ ಅನುಷ್ಠಾನಕ್ಕೆ ಬರುತ್ತಿಲ್ಲ. ಇನ್ನು ದಲಿತ ಉದ್ದಿಮೆದಾರರಿಗೆ ಮೀಸಲಾದ ಸ್ಥಳವನ್ನು ಅಧಿಕಾರಿಗಳು ಉಳ್ಳವರಿಗೆ ನೀಡುವ ಮೂಲಕ ದಲಿತರನ್ನು ಬಡವರಾಗಿಯೇ ಉಳಿಸುತ್ತಿದ್ದಾರೆ ಎಂದು ದಲಿತ ಉದ್ಯಮಿಗಳು ತಮ್ಮ ಬೇಸರ ವ್ಯಕ್ತಪಡಿಸಿದರು..ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಎಸ್ಡಿ ಎಸ್ಸಿ ಉದ್ಯಮಿಗಳು ಸುದ್ದಿಗೋಷ್ಟಿ ನಡೆಸಿ ದಲಿತ ಸಮುದಾಯದ ಉದ್ದಿಮೆದಾರರು ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಬಿಚ್ಚಿಟ್ಟರು.
ನಮ್ಮ ಹೋರಾಟದ ಫಲವಾಗಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ದಲಿತ ಉದ್ದಿಮೆದಾರರಿಗೆ ಶೇ.22.65ರಷ್ಟು ನಿವೇಶನ ಮೀಸಲಿಟ್ಟಿದೆ. ಆದರೆ, ಆ ಪ್ರಕಾರವಾಗಿ ಹಂಚಿಕೆಯಾಗುತ್ತಿಲ್ಲ. ಹಂಚಿಕೆಯಾಗಬೇಕಾದ ಜಾಗ ಉಳ್ಳವರ ಪಾಲಾಗುತ್ತಿದ್ದು, ಕನಿಷ್ಟ ಪರ್ಯಾಯ ಸ್ಥಳವನ್ನು ಗುರುತಿಸುವುದಕ್ಕೂ ಅಧಿಕಾರಿಗಳು ಮುಂದಾಗುತ್ತಿಲ್ಲ. ಪರಿಸ್ಥಿತಿ ಇದೇ ರೀತಿ ಮುಂದುವರಿದಲ್ಲಿ ದಲಿತ ಉದ್ದಿಮೆದಾರರು ಅಭಿವೃದ್ಧಿ ಹೊಂದುವುದು ಹೇಗೆ?’ ಎಂದು ಪ್ರಶ್ನಿಸಿದರು.ದಲಿತರ ಪರವಾಗಿ ಸರಕಾರ ವಿವಿಧ ಯೋಜನೆಗಳನ್ನು ರೂಪಿಸಿದರೂ ಅಧಿಕಾರಶಾಹಿ ಅದನ್ನು ಅನುಷ್ಠಾನಕ್ಕೆ ತರಲು ಅವಕಾಶ ನೀಡದೇ ಇರುವುದರಿಂದ ದಲಿತರ ಅಭಿವೃದ್ಧಿಗೆ ಕಂಟಕವಾಗಿದೆ’ ಎಂದು ದಲಿತ ಸಮುದಾಯದ ಉದ್ದಿಮೆದಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ದಲಿತರ ಪರವಾಗಿ ಎಲ್ಲ ಸರ್ಕಾರಗಳು ಯೋಜನೆಗಳನ್ನು ರೂಪಿಸಿವೆ.
ಇದರಲ್ಲಿ ರಾಜಕೀಯ ವ್ಯಕ್ತಿಗಳ ತಪ್ಪಿಲ್ಲ. ಇದನ್ನು ಸಮರ್ಪಕವಾಗಿ ಅನುಷ್ಠಾನ ಮಾಡಬೇಕಾದ ಅಧಿಕಾರಿಗಳು ಕಾಲಹರಣ ಮಾಡುತ್ತಾ, ಉದ್ಯಮಿಗಳ ಶಕ್ತಿ ಕುಂದಿಸುತ್ತಿದ್ದಾರೆ.ಕೆಐಎಡಿಬಿ ಯಿಂದ ಭೂಮಿ ಮೀಸಲಾತಿಯಲ್ಲಿ ನಿಯಮ ಉಲ್ಲಂಘನೆ ಮಾಡ್ತಿದೆ.ST -SC ಗೆ ಮೀಸಲಿಟ್ಟ ಸಾವಿರಕ್ಕೂ ಹೆಚ್ಚು ಎಕರೆ ಭೂಮಿ ಇತರರಿಗೆ ಹಂಚಿಕೆ ಮಾಡಲಾಗಿದೆ..ಕೂಡಲೇ ವಾಪಸು ಪಡೆಯಬೇಕು.ಜೊತೆಗೆ ರಾಜ್ಯ ಬಜೆಟ್ ನಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಹೆಚ್ಚು ಅನುದಾನ ನೀಡಬೇಕೆಂದು ಅಂತ ಕರ್ನಾಟಕ ದಲಿತ ಉದ್ದಿಮೆದಾರರ ಸಂಘ ಕಾರ್ಯಧ್ಯಕ್ಷ ಸಿ. ಜಿ. ಶ್ರೀನಿವಾಸನ್ ಒತ್ತಾಯಿಸಿದರು.