ಬೆಂಗಳೂರು : ಸರ್ಕಾರಗಳು ಸಿನಿಮಾ ತಾರೆಯರ ಅನಗತ್ಯ ಸ್ಮಾರಕಗಳನ್ನು ನಿರ್ಮಿಸಿ ಸಾರ್ವಜನಿಕರ ಹಣವನ್ನು ವ್ಯರ್ಥ ಮಾಡುತ್ತಿದೆ ಎಂದು ನಟ ಚೇತನ್ ಅಹಿಂಸಾ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಅವರು, ಚಿತ್ರರಂಗದ ತಾರೆಯೊಬ್ಬರಿಗೆ 10 ಗುಂಟೆ ಸ್ಮಾರಕ ನಿರ್ಮಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದ್ದು, ಇಂತಹ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ‘ನ್ಯಾಯಾಲಯದ ಸಮಯದ ವ್ಯರ್ಥ’ ಎಂದು ಕರೆದಿದೆ. ಇದು ನ್ಯಾಯಾಲಯಗಳ ಅತ್ಯಂತ ಅಗತ್ಯವಾದ ದೂರದೃಷ್ಟಿಯ ಕ್ರಮವಾಗಿದೆ ಎಂದರು.
ಸರ್ಕಾರಗಳು ಈಗಾಗಲೇ ಇಂತಹ ಚಲನಚಿತ್ರ ತಾರೆಯರ ಅನಗತ್ಯ ಸ್ಮಾರಕಗಳು ಮತ್ತು ಐತಿಹಾಸಿಕ ವ್ಯಕ್ತಿಗಳಿಗೆ ಅನುಪಯುಕ್ತ ಪ್ರತಿಮೆಗಳನ್ನು ನಿರ್ಮಿಸಲು ಸಾರ್ವಜನಿಕ ಹಣವನ್ನು ವ್ಯರ್ಥ ಮಾಡುತ್ತಿವೆ ಎಂದು ಹೇಳಿದ್ದಾರೆ.

ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com


