ಕ್ರೈಂ ಸ್ಟೋರಿ

ಬಸ್​​ನಲ್ಲಿ ಅನುಚಿತ ವರ್ತನೆ ಬಿತ್ತು ಗೂಸಾ..!

ಕೊಪ್ಪಳ: ಜಿಲ್ಲೆಯ KSRTC ಬಸ್‌ವೊಂದರಲ್ಲಿ ಓರ್ವ ಪುರುಷ ಪ್ರಯಾಣಿಕನಿಗೆ ಮಹಿಳಾ ಪ್ರಯಾಣಿಕರು ಸೇರಿ ಥಳಿಸಿದ ಘಟನೆಯೊಂದು ನಡೆದಿದೆ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ಮಾರ್ಗ ಮಧ್ಯೆ ಸರ್ಕಾರಿ ಬಸ್‌ನಲ್ಲಿ ಹೋಗುವಾಗ ಗಲಾಟೆಯಾಗಿದೆ. ಬಸ್ ಕುಷ್ಟಗಿಯಿಂದ ಕೊಪ್ಪಳಕ್ಕೆ ಹೊರಟಿತ್ತು. ಈ ವೇಳೆ ಬಸ್‌ನಲ್ಲಿದ್ದ ಮಹಿಳೆಯರು ಹಾಗೂ ಓರ್ವ ಪುರುಷನ ನಡುವೆ ಗಲಾಟೆ ಆರಂಭವಾಗಿದೆ. ಗಲಾಟೆ ನಡುವೆಯೇ ಮಹಿಳೆಯರು ಪುರುಷನಿಗೆ ಥಳಿಸಿದ್ದು, ಗಲಾಟೆಗೆ ನಿಖರವಾದ ಕಾರಣ ಏನು ಎಂದು ತಿಳಿದುಬಂದಿಲ್ಲ.

ಬಸ್‌ನಲ್ಲಿದ್ದ ಮಹಿಳಾ ಪ್ರಯಾಣಿಕರ ಜೊತೆ ಪುರುಷ ಅನುಚಿತವಾಗಿ ವರ್ತಿಸಿದ್ದು, ಗಲಾಟೆಗೆ ಕಾರಣ ಎಂದು ಶಂಕಿಸಲಾಗಿದೆ.

Comments (0)

Your email address will not be published. Required fields are marked *

Back to top button