ಕರ್ನಾಟಕದಲ್ಲಿ ಸೆಪ್ಟೆಂಬರ್ 1 ರಿಂದ ದುಬಾರಿ ಮದ್ಯದ ಬೆಲೆ ಇಳಿಕೆಯಾಗಲಿದೆ. ನೆರೆಹೊರೆಯ ರಾಜ್ಯಗಳಲ್ಲಿ ಕಡಿಮೆ ದರದಲ್ಲಿ ಮದ್ಯ ಲಭ್ಯವಿದ್ದ ಕಾರಣ, ಗಡಿ ಜಿಲ್ಲೆಗಳಲ್ಲಿ ಮದ್ಯ ಮಾರಾಟ ಕುಸಿದು ರಾಜ್ಯ ಸರ್ಕಾರಕ್ಕೆ ನಷ್ಟವಾಗುತ್ತಿತ್ತು.
ಬೆಂಗಳೂರು ನೆರೆಹೊರೆಯ ರಾಜ್ಯಗಳ ಮದ್ಯ ಮಾರಾಟ ದರವನ್ನು ಪರಿಗಣಿಸಿ ಕರ್ನಾಟಕದಲ್ಲೂ ಮದ್ಯದ ದರ ಪರಿಷ್ಕರಣೆಗೆ ಮುಂದಾಗಿದ್ದ ರಾಜ್ಯ ಸರ್ಕಾರ ಸದ್ಯಕ್ಕೆ ದರ ಹೆಚ್ಚಳವನ್ನು ತಡೆಹಿಡಿದಿತ್ತು. ಆದರೆ ಇದೀಗ ಕೊನೆಗೂ ಎಣ್ಣೆ ಪ್ರಿಯರಿಗೆ ಗುಡ್ ನ್ಯೂಸ್ ಕೊಟ್ಟ ರಾಜ್ಯ ಸರ್ಕಾರ ರಾಜ್ಯದಲ್ಲಿ ಸೆಪ್ಟೆಂಬರ್ 1 ರಿಂದ ದುಬಾರಿ ಮದ್ಯವನ್ನು ಅಗ್ಗದ ದರದಲ್ಲಿ ನೀಡಲು ಚಿಂತನೆ ನಡೆಸಿದೆ.
ಅಬಕಾರಿ ಆದಾಯ ಹೆಚ್ಚಿಸಲು ಮದ್ಯದ ದರ ಇಳಿಕೆಗೆ ರಾಜ್ಯ ಸರ್ಕಾರ ಅಸ್ತು ಎಂದಿದೆ. ಸೆಪ್ಟೆಂಬರ್ 1 ರಿಂದ ಅನ್ವಯವಾಗುವಂತೆ ರಾಜ್ಯದಲ್ಲಿ ಮದ್ಯ ದರ ಇಳಿಕೆಯಾಗಲಿದೆ. ಮದ್ಯ ದರ ಇಳಿಕೆ ಮಾಡುವಂತೆ ಅಬಕಾರಿ ಇಲಾಖೆಗೆ ಸಿಎಂ ಸೂಚನೆ ನೀಡಿದೆ.ಜುಲೈ1 ರಿಂದ ಮದ್ಯ ದರ ಇಳಿಕೆಗೆ ಅಬಕಾರಿ ಇಲಾಖೆ ಮುಂದಾಗಿತ್ತು. ಆದ್ರೆ ಮದ್ಯ ಉತ್ಪಾದಕರು ಹಾಗೂ ಅಬಕಾರಿ ಇಲಾಖೆ ನಡುವಿನ ಸಂಘರ್ಷದಿಂದ ದರ ಇಳಿಕೆ ಮಾಡಿರಲಿಲ್ಲ. ಇದೀಗ ಮದ್ಯ ದರ ಇಳಿಕೆಗೆ ಅನುಮತಿ ಸಿಕ್ಕಿದೆ.