ಸುಪ್ರೀಂ ಕೋರ್ಟ್ ಮಧ್ಯಮ ವರ್ಗದ ಮನೆ ಖರೀದಿದಾರರನ್ನು ರಕ್ಷಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸ್ಪಷ್ಟವಾಗಿ ಹೇಳಿದೆ. ಹಲವಾರು ನಿರ್ಮಾಣ ಯೋಜನೆಗಳು ವಿಳಂಬಗೊಂಡಿರುವ ಕಾರಣ ಸಾವಿರಾರು ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ. ಇದನ್ನು ಗಮನಿಸಿದ ನ್ಯಾಯಾಲಯವು ಸರ್ಕಾರವು ಕೈಕಟ್ಟಿ ಕುಳಿತುಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದೆ.
ಮನೆ ಖರೀದಿದಾರರನ್ನು ಮೋಸದಿಂದ ರಕ್ಷಿಸಲು, ಯೋಜನೆಗಳನ್ನು ಸಮಯಕ್ಕೆ ಸರಿಯಾಗಿ ಮುಗಿಸಲು ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆ ಕೊಟ್ಟಿದೆ. ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರವಾದ RERA ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲು ಅಗತ್ಯವಾದ ವ್ಯವಸ್ಥೆಗಳನ್ನು ರೂಪಿಸಬೇಕು ಎಂದು ತಿಳಿಸಿದೆ.
ಪ್ರತ್ಯೇಕವಾಗಿ ಮಧ್ಯಮ ವರ್ಗದವರು ತಮ್ಮ ಜೀವನಪೂರ್ತಿ ಶ್ರಮದಿಂದ ಕೂಡಿಟ್ಟ ಹಣವನ್ನು ಯೋಜನೆಗಳಲ್ಲಿ ಹೂಡಿರುವುದು ನ್ಯಾಯಾಲಯದ ಗಮನಕ್ಕೆ ಬಂದಿದೆ. ಅವರಿಗೆ ಪರಿಹಾರ ನೀಡುವ ಯೋಜನೆಗಳನ್ನು ಸರ್ಕಾರ ರೂಪಿಸಬೇಕು ಎಂದು ಸೂಚಿಸಲಾಗಿದೆ. ಈ ತೀರ್ಪು ಮನೆ ಖರೀದಿದಾರರಿಗೆ ವಿಶ್ವಾಸವನ್ನು ನೀಡಿದ್ದು, ಅವರ ಹಕ್ಕುಗಳನ್ನು ರಕ್ಷಿಸಲು ಸರ್ಕಾರ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ. ಮುಂದಿನ ದಿನಗಳಲ್ಲಿ ಈ ತೀರ್ಪಿನಿಂದ ಏನೆಲ್ಲ ಪರಿಣಾಮ ಆಗುತ್ತೆ ಅನ್ನೋದು ಕುತೂಹಲವಾಗಿದೆ.
ಮುಖ್ಯ ಸೂಚನೆಗಳು:
ಮನೆ ಹೊಂದುವುದು ಒಂದು ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್ ಘೋಷಿಸಿದೆ.
ನಿಜವಾದ ಮನೆ ಖರೀದಿದಾರರನ್ನು ರಕ್ಷಿಸಲು ಕ್ರಮ ಕೈಗೊಳ್ಳಬೇಕು.
ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ ( NCLT NCLAT) ನ್ಯಾಯಾಲಯದ ಖಾಲಿ ಹುದ್ದೆಗಳನ್ನು ತಕ್ಷಣ ತುಂಬಬೇಕು.
RERa ರಿಯಲ್ ಎಸ್ಟೇಟ್ ಸುಧಾರಣೆಗೆ ವಿಶೇಷ ಸಮಿತಿ ರಚಿಸಬೇಕು.
ವಿಳಂಬಗೊಂಡ ಯೋಜನೆಗಳಿಗೆ ಪರಿಹಾರ ನಿಧಿಯನ್ನು ರೂಪಿಸಲು ಸರ್ಕಾರಕ್ಕೆ ಸೂಚನೆ
ನಿಯಮಗಳಲ್ಲಿ ಏಕರೂಪತೆ ತರಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ
ಹೊಸ ಯೋಜನೆಗಳಿಗೆ ಪಾರದರ್ಶಕತೆ ಬೇಕು – ನೋಂದಣಿ ಹಾಗೂ ಎಸ್ಕ್ರೋ ಖಾತೆ ಕಡ್ಡಾಯ.
ದಿವಾಳಿ ಪ್ರಕರಣಗಳಿಗೆ ವಿಶೇಷ ನ್ಯಾಯಪೀಠಗಳನ್ನು ರಚಿಸಲು ಸೂಚನೆ.
RERAಗೆ ಅಗತ್ಯವಾದ ಸಿಬ್ಬಂದಿಯನ್ನು ನೇಮಿಸಲು ಒತ್ತಾಯ.
ಪ್ರತ್ಯೇಕ ಯೋಜನೆ ಆಧಾರದ ಮೇಲೆ ಪರಿಹಾರ ಕ್ರಮಗಳನ್ನು ಅನುಷ್ಠಾನಗೊಳಿಸಲು ಸೂಚನೆ.
ಸ್ಟಾಲ್ ಆಗಿರುವ ಯೋಜನೆಗಳನ್ನು ಸರ್ಕಾರದ ವಸತಿ ಯೋಜನೆಗಳಿಗೆ ಬಳಸಿ ಪರಿಹರಿಸಲು ಅವಕಾಶ ನೀಡಲಾಗಿದೆ
ಮನೆ ಖರೀದಿದಾರರಿಗೆ ಭದ್ರತೆ ನೀಡಲು ಹಾಗೂ ಯೋಜನೆಗಳನ್ನು ಪೂರ್ಣಗೊಳಿಸಲು ಸರ್ಕಾರ ಬೆಂಬಲ ನೀಡಬೇಕು ಎಂಬ ಸೂಚನೆ.


