ಸಿನಿಮಾಸುದ್ದಿ

ಎಂಟು ನಟಿಯರ ಜೊತೆ ‘ಗೋಲ್ಡನ್ ಸ್ಟಾರ್’ ಗಣೇಶ್‌ ಡ್ಯುಯೆಟ್ ಸಾಂಗ್; ಇದು ‘ಕೃಷ್ಣಂ ಪ್ರಣಯ ಸಖಿ’ ಸ್ಪೆಷಲ್

ಮೈಸೂರು: ‘ಗೋಲ್ಡನ್ ಸ್ಟಾರ್’ ಗಣೇಶ್ ಅವರು ರೊಮ್ಯಾಂಟಿಕ್ ಹೀರೋ ಅಂತ ಫೇಮಸ್ ಆಗಿದ್ದಾರೆ. ಅವರ ಸಿನಿಮಾಗಳೆಂದರೆ, ಅಲ್ಲಿ ಲವ್ ಸ್ಟೋರಿ ಖಾಯಂ. ಜೊತೆಗೆ 2-3 ಹೀರೋಯಿನ್ಸ್ ಕೂಡ ಇರ್ತಾರೆ. ಆದರೆ ಈಗ ಗಣೇಶ್ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾದಲ್ಲಿ ನಟಿಸಿದ್ದು, ಈ ಚಿತ್ರದ ಮೊದಲ ಹಾಡು ರಿಲೀಸ್ ಆಗಿದೆ. ಇದರಲ್ಲಿ ಅವರು 8 ನಟಿಯರು ಜೊತೆಗೆ ಭರ್ಜರಿಯಾಗಿ ಸ್ಟೆಪ್ ಹಾಕಿದ್ದಾರೆ.

ಮೈಸೂರಿನಲ್ಲಿ ಸಾಂಗ್ ರಿಲೀಸ್

‘ಕೃಷ್ಣಂ ಪ್ರಣಯ ಸಖಿ’ ಸಿನಿಮಾದ ಮೊದಲ ಹಾಡನ್ನು ಮೈಸೂರಿನಲ್ಲಿ ರಿಲೀಸ್ ಮಾಡಲಾಗಿದೆ. ಈ ಹಾಡಿಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ನಿಶಾನ್ ರಾಯ್ ಸಾಹಿತ್ಯ ಬರೆದಿದ್ದಾರೆ. ಚಂದನ್ ಶೆಟ್ಟಿ ಹಾಡನ್ನು ಹಾಡಿದ್ದಾರೆ. ‘ಮೈ ಮ್ಯಾರೇಜ್ ಇಸ್ ಫಿಕ್ಸ್ಡ್..’ ಎಂದು ಶುರುವಾಗುಗ ಈ ಹಾಡಿನಲ್ಲಿ ಗಣೇಶ್ ಜೊತೆಗೆ 8 ನಟಿಯರು ಡ್ಯಾನ್ಸ್ ಮಾಡಿದ್ದಾರೆ. ಅಂದಹಾಗೆ, ಇದು ಗಣೇಶ್ ನಟನೆಯ 41ನೇ ಸಿನಿಮಾ.

ಈ ಚಿತ್ರದ ಬಗ್ಗೆ ಗಣೇಶ್ ಏನಂದ್ರು?

‘ಕೃಷ್ಣಂ ಪ್ರಣಯ ಸಖಿ’ ಸಿನಿಮಾಗೆ ನಿರ್ದೇಶನ ಮಾಡಿರುವುದು ‘ದಂಡುಪಾಳ್ಯ’ ಡೈರೆಕ್ಟರ್ ಶ್ರೀನಿವಾಸರಾಜು. “ಒಮ್ಮೆ ಶ್ರೀನಿವಾಸರಾಜು ನನಗೆ ಕಾಲ್ ಮಾಡಿ, ‘ನಿಮಗೊಂದು ಕಥೆ ಹೇಳಬೇಕು’ ಎಂದಾಗ, ನನಗೆ ಶಾಕ್ ಆಯಿತು. ಇವ್ರು ‘ದಂಡುಪಾಳ್ಯ’ ಥರದ ಸಿನಿಮಾ ಮಾಡಿರುವ ಡೈರೆಕ್ಟರ್. ಆದರೆ ನಾನು ಮಾಡಿರುವುದು ಲವ್ ಸ್ಟೋರಿ ಸಿನಿಮಾಗಳು. ನನಗೆ ಯಾವ ಥರದ ಕಥೆಯನ್ನ ಇವ್ರು ಮಾಡಿರಬಹುದು ಅಂದುಕೊಂಡೆ. ಆದರೆ ಅವರು ನನಗೆ ಕಥೆ ಹೇಳಿದರು. ‘ನೀವು ಮದುಮಗನ ರೀತಿಯಲ್ಲಿ ಬರ್ತಿರಿ, ಎಂಟು ನಾಯಕಿಯರು ಮದುಮಗಳ ರೀತಿ ರೆಡಿ ಆಗಿರುತ್ತಾರೆ’ ಎಂದರು. ಆಗ ಇದು ನಾನು ಮಾಡುವ ಸಿನಿಮಾ ಅಂತ ಅನ್ನಿಸಿತು” ಎನ್ನುತ್ತಾರೆ ಗಣೇಶ್. ಇದರ ಜೊತೆಗೆ ಈ ಸಿನಿಮಾದಲ್ಲಿ ಸಖತ್ ಟ್ವಿಸ್ಟ್‌ಗಳು ಇವೆಯಂತೆ.

ಈ ಚಿತ್ರದಲ್ಲಿ 64 ಕಲಾವಿದರು ನಟಿಸಿದ್ದಾರೆ

ಇದೊಂದು ಕಲರ್‌ಫುಲ್‌ ಸಿನಿಮಾ. ಇಡೀ ಕುಟುಂಬ ಚಿತ್ರಮಂದಿರಕ್ಕೆ ಬಂದು ಈ ಸಿನಿಮಾವನ್ನು ನೋಡಿ ಮನಸ್ಸು ಹಗುರ ಮಾಡಿಕೊಳ್ಳಬಹುದು ಎಂಬ ಭರವಸೆಯನ್ನು ನಾನು ನೀಡುತ್ತೇನೆ. ಇದು ಗಣೇಶ್ ಅವರಿಗಾಗಿಯೇ ಮಾಡಿರುವ ಕಥೆ. ಎಲ್ಲಾ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವ ಸಿನಿಮಾ ಇದು. ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳು ಸುಮಧುರವಾಗಿದೆ. ಆ ಪೈಕಿ ಮೊದಲ ಹಾಡು ಈಗ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ಕನ್ನಡ ಚಿತ್ರರಂಗದ 64 ಕಲಾವಿದರು ನಟಿಸಿದ್ದಾರೆ. 85 ದಿನಗಳ ಚಿತ್ರೀಕರಣ ಮಾಡಿದ್ದೇವೆ” ಎನ್ನುತ್ತಾರೆ ನಿರ್ದೇಶಕ ಶ್ರೀನಿವಾಸರಾಜು.

ಪ್ರಶಾಂತ್ ಜಿ ರುದ್ರಪ್ಪ ಈ ಸಿನಿಮಾಗೆ ಹಣ ಹಾಕಿದ್ದಾರೆ. ಅತೀ ಶೀಘ್ರದಲ್ಲೇ ಈ ಸಿನಿಮಾವನ್ನು ರಿಲೀಸ್ ಮಾಡುವ ಪ್ಲ್ಯಾನ್ ಚಿತ್ರತಂಡಕ್ಕೆ ಇದೆ. ಅಂದಹಾಗೆ, ಈ ಸಿನಿಮಾದಲ್ಲಿ ಗಣೇಶ್‌ಗೆ ನಾಯಕಿಯಾಗಿ ಮಾಳವಿಕಾ ನಾಯರ್ ಅಭಿನಯಿಸಿದ್ದಾರೆ. ಶಶಿಕುಮಾರ್, ಸಾಧು ಕೋಕಿಲ, ಅಶೋಕ್, ಶರಣ್ಯಾ ಶೆಟ್ಟಿ, ಗಿರಿ ಶಿವಣ್ಣ, ಶ್ರೀನಿವಾಸಮೂರ್ತಿ, ಸಾಧುಕೋಕಿಲ, ರಂಗಾಯಣ ರಘು, ರಾಮಕೃಷ್ಣ, ಶ್ರುತಿ, ಭಾವನಾ, ಶಿವಧ್ವಜ್, ರಘುರಾಮ್, ಮಾನಸಿ ಸುಧೀರ್ ಮುಂತಾದವರು ನಟಿಸಿದ್ದಾರೆ.

 

ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com

Comments (0)

Your email address will not be published. Required fields are marked *

Back to top button